More

    ಕೈಯಲ್ಲಿ ಎಕೆ 47 ಇದ್ದಿದ್ರೆ ಕನ್ಹಯ್ಯನ ಕೊಂದೆ ಬಿಡ್ತಿದ್ದೆ

    ಬಾಗಲಕೋಟೆ: ದೇಶದ್ರೋಹಿ ಘೋಷಣೆ ಕೂಗಿದವರ ನಾಲಿಗೆ ಕತ್ತರಿಸುವ ಕೆಲಸ ನಾವು ಮಾಡಬೇಕಿದೆ. ಜೆಎನ್‌ಯುದಲ್ಲಿ ದೇಶದ್ರೋಹಿ ಘೋಷಣೆ ಕೂಗಿದಾಗ ನಾನಿದ್ದು, ಕೈಯಲ್ಲಿ ಎಕೆ 47 ಇದ್ದಿದ್ರೆ ಅವನನ್ನು (ಕನ್ಹಯ್ಯಕುಮಾರ) ಅಲ್ಲೆ ಗುಂಡಿಕ್ಕಿ ಕೊಲ್ತಿದ್ದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

    ದೇಶದ್ರೋಹಿ ಘೋಷಣೆ ಖಂಡಿಸಿ ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಮಂಗಳವಾರ ವಿಶ್ವಹಿಂದು ಪರಿಷತ್ ಹಾಗೂ ವಿದ್ಯಾಗಿರಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಅವರು ಮಾತನಾಡಿದರು.

    ದೇಶಪ್ರೇಮಿಗಳ ಮೇಲೆ ಹಲವು ಕೇಸ್ ಹಾಕುತ್ತಾರೆ. ದೇಶದ್ರೋಹಿ ಘೋಷಣೆ ಕೂಗಿದವರಿಗೆ ಜಾಮೀನು ಸಿಗುವ ಪ್ರಕರಣ ದಾಖಲಿಸುತ್ತಾರೆ. ದೇಶದ್ರೋಹಿ ಘೋಷಣೆ ಜಾಮೀನು ಮೇಲೆ ಬಿಡುವ ಪ್ರಕರಣನಾ? ಎಂದು ಪ್ರಶ್ನೆ ಮಾಡಿದರು.

    ಮೊದಲು ದೇಶದ್ರೋಹಿ ಘೋಷಣೆ ಕೂಗಿದವರ ಕೈಕಾಲುಗಳನ್ನು ಪೊಲೀಸ್ ಠಾಣೆಯಲ್ಲಿ ತೆಗೆದು ಹಾಕಬೇಕಿತ್ತು. ಮೊದಲು ದೇಶ ಆಮೇಲೆ ಪಕ್ಷ, ಧರ್ಮ. ಮೊದಲು ರಾಷ್ಟ್ರ ಉಳಿಯಬೇಕು. ರಾಷ್ಟ್ರದ ಸಲುವಾಗಿ ಯಾವುದೇ ತ್ಯಾಗ, ಬಲಿದಾನಕ್ಕೆ ಸದಾ ಸಿದ್ಧರಾಗಬೇಕು. ದೇಶದ್ರೋಹಿಗಳಿಗೆ ತಕ್ಕಪಾಠವನ್ನು ಕಲಿಸಬೇಕು ಎಂದು ಗುಡುಗಿದರು.

    ಜೆಎನ್‌ಯುದಲ್ಲಿ ಯಾಂವ ಅಂವಾ? ಕನ್ಹಯ್ಯ ಯಾರು? ಹೇ ಮೊದಲು ನಿನ್ನ ಹೆಸರು ಬದಲಿ ಮಾಡಿಕೋ, ಕನ್ಹಯ್ಯ ಅಂದ್ರೆ ಕೃಷ್ಣ ಅಂತ. ಕೃಷ್ಣ ಎಂದು ಹೆಸರು ಇಟ್ಟುಕೊಂಡು ದೇಶವನ್ನು ವಿಭಜನೆ ಮಾಡು ಅಂತಿಯಾ? ಜವಾಹರಲಾಲ್ ವಿಶ್ವವಿದ್ಯಾಲಯದಲ್ಲಿ ದೇಶದ್ರೋಹಿ ಘೋಷಣೆ ಕೂಗಿದವರಿಗೆ ನಮ್ಮ ಕಾಂಗ್ರೆಸ್ ಲೀಡರ್‌ಗಳು ಹೋಗಿ ಶಹಬ್ಬಾಸ್ ಅಂತಾ ಹೇಳುತ್ತಾರೆ ಎಂದರು.

    ದೇಶದಲ್ಲಿ ಇವತ್ತು ನಾವು ಶಾಂತಿಯಿಂದ ಕುಂತಿದ್ದರಿಂದಲೇ ಅನೇಕ ಜನ ದೇಶದ್ರೋಹಿಗಳು ಹುಟ್ಟುತ್ತಿದ್ದಾರೆ. ದೇಶದ್ರೋಹಿಗಳನ್ನು ಪೋಷಿಸುತ್ತಿರೇನು? ಸಿಎಎ ವಿರೋಧಿ ಹೋರಾಟ ಒಂದು ನೆಪ ಮಾತ್ರವಾಗಿದೆ. ಸಿಎಎ ಕಾಯ್ದೆ ಮುಸ್ಲಿಂ ವಿರೋಧಿಯಲ್ಲ. ಮುಸ್ಲಿಮರನ್ನು ದೇಶಬಿಟ್ಟು ಹೊರಹಾಕುವುದಿಲ್ಲ. ಈ ಸತ್ಯ ವಿರೋಧಿಗಳಿಗೂ ಗೊತ್ತಿದೆ. ಆದರೂ ಇವತ್ತು ದೇಶದಲ್ಲಿ ಶಾಂತಿ ಸುವ್ಯವಸ್ಥೆ ಇದೆ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಇದನ್ನು ಹೇಗಾದರೂ ಮಾಡಿ ಹಾಳು ಮಾಡಬೇಕು ಎಂದು ದೇಶದ್ರೋಹಿ ಶಕ್ತಿಗಳು ಕುಮ್ಮಕ್ಕು ಕೊಡುತ್ತಿವೆ ಎಂದು ಆರೋಪ ಮಾಡಿದರು.

    ವಿಜಯ ಸುಲಾಕೆ, ಶಿವು ಮೇಲ್ನಾಡ, ಮಲ್ಲೇಶಪ್ಪ ಜಿಗಜಿನ್ನಿ, ಬಸವರಾಜ ಕಟಗೇರಿ, ರಾಮು ಕಟ್ಟಿಮನಿ, ನಾಗರಾಜ ಬಾಸುತಕರ, ಮುತ್ತು ಮುರನಾಳ, ವಿರೇಶ ಬೆಣ್ಣೂರ, ಶ್ರೀಧರ ನಾಗರಮಟ್ಟಿ, ಪ್ರಸಾದ ದಳವಾಯಿ, ಅಜೀತ ಬಂಟನೂರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಹುಬ್ಬಳ್ಳಿಯಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು, ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಿಎಎ ವಿರೋಧಿ ಸಭೆಯಲ್ಲಿ ದೇಶದ ವಿರೋಧಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರುವ ಅಮೂಲ್ಯಾ ಎನ್ನುವ ದೇಶದ್ರೋಹಿ ಕ್ರಿಮಿಗಳನ್ನು ಬಂಧಿಸಲಾಗಿದೆ. ಕೂಡಲೇ ಈ ದೇಶದ್ರೋಹಿಗಳನ್ನು ದೇಶದಿಂದ ಗಡಿಪಾರು ಮಾಡಬೇಕು. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳಲ್ಲಿ ಭಾಗಿಯಾಗುವ ಪ್ರತಿಯೊಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಂಡಲ್ಲಿ ಈ ಕೃತ್ಯಗಳು ನಿಲ್ಲುತ್ತವೆ ಎಂದು ಪ್ರತಿಭಟನಾಕಾರರು ಹೇಳಿದ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts