More

    ಮಧುಮೇಹ ತಜ್ಞನಿಗೆ ರಾಜ್ಯೋತ್ಸವ ಗರಿ

    ಬಾಗಲಕೋಟೆ: ಜಿಲ್ಲೆಯ ಹಿರಿಯ ವೈದ್ಯ ಡಾ.ಅಶೋಕ ರಾಮಣ್ಣ ಸೊನ್ನದ ಅವರು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಮಧುಮೇಹ ತಜ್ಞರಾಗಿರುವ 80 ವಯಸ್ಸಿನ ಡಾ.ಅಶೋಕ ಆರೋಗ್ಯ ದಾಸೋಹ ಮೂಲಕ ಅನೇಕ ಜನರಿಗೆ ಉಚಿತ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತಮ ಆರೋಗ್ಯಕ್ಕಾಗಿ ಅನುಸರಿಸಬೇಕಾದ ಆಹಾರ ಪದ್ಧತಿಯೇ ಡಾ.ಅಶೋಕ ಅವರು ಹೇಳುವ ಮೂಲ ಔಷಧವಾಗಿದೆ. ಮುಧೋಳ ತಾಲೂಕಿನ ಭಂಟನೂರಿನವರಾದ ಡಾ.ಅಶೋಕ ಅವರು ಬಾಗಲಕೋಟೆ ಸಕ್ರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯದಿಂದ 1965ರಲ್ಲಿ ಎಂಬಿಬಿಎಸ್ ಶಿಕ್ಷಣ ಪೂರೈಸಿದ್ದಾರೆ. ಅಮೆರಿಕದಲ್ಲಿ 3 ದಶಕ ವೈದ್ಯರಾಗಿ ಸೇವೆ ಸಲ್ಲಿಸಿ ನಂತರ ತಾಯ್ನಡಿಗೆ ಮರಳಿ ಬಾಗಲಕೋಟೆಯಲ್ಲಿ 10 ವರ್ಷದಿಂದ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಹಳ್ಳಿಗಳಲ್ಲಿ ಶಿಬಿರಗಳನ್ನು ನಡೆಸಿ ಅರಿವು ಮೂಡಿಸಿದ್ದಾರೆ. ಒಂದೇ ಕುಟುಂಬದಲ್ಲಿ ಅತಿ ಹೆಚ್ಚು ಡಾಕ್ಟ್‌ರೇಟ್ ಪದವಿ ಪಡೆದು ಗಿನ್ನೆಸ್ ಬುಕ್ ಆ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸೇರಿರುವ ಸೊನ್ನದ ಕುಟುಂಬದ ಸದಸ್ಯರಾಗಿರುವ ಡಾ.ಅಶೋಕ ಅವರು ಆ ಕುಟುಂಬದ 12 ಜನ ಮಕ್ಕಳ ಪೈಕಿ ಏಳನೇ ಮಗನಾಗಿದ್ದಾರೆ. ಡಾ.ಅಶೋಕ ಅವರು ಐಲೀನ್ ಅವರನ್ನು ವಿವಾಹವಾಗಿದ್ದು, ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.



    ಮಧುಮೇಹ ತಜ್ಞನಿಗೆ ರಾಜ್ಯೋತ್ಸವ ಗರಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts