More

    ದೀಪಾವಳಿ ಸಂದರ್ಭದಲ್ಲಿ ಎಚ್ಚರವಿರಲಿ

    ಬಾಗಲಕೋಟೆ: ದೀಪಾವಳಿ ಹಬ್ಬದಲ್ಲಿ ಮೈ ಮರೆಯಬಾರದು. ಕೋವಿಡ್ ಹಿನ್ನೆಲೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಸಾರ್ವಜನಿಕರು ಪಾಲಿಸಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಮನವಿ ಮಾಡಿದ್ದಾರೆ.

    ಈ ಕುರಿತು ಪ್ರಕಟಣೆ ನೀಡಿರುವ ಅವರು, ದೀಪಾವಳಿ ಹಬ್ಬಕ್ಕಾಗಿ ಮಾರುಕಟ್ಟೆಗೆ ಬರುವ ಗ್ರಾಮೀಣ ಹಾಗೂ ನಗರದ ಜನರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬರಬೇಕು. ಅನವಶ್ಯಕವಾಗಿ ಮಕ್ಕಳನ್ನು ಹಾಗೂ ವೃದ್ಧರನ್ನು ಮಾರುಕಟ್ಟೆಗೆ ಕರೆದುಕೊಂಡು ಬರಬಾರದು. ಕೋವಿಡ್ ಹಿನ್ನೆಲೆಯಲ್ಲಿ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಬೇಕು. ಇನ್ನು ದೀಪಾವಳಿ ಹಬ್ಬಕ್ಕಾಗಿ ಸರ್ಕಾರ ಪಟಾಕಿ ಸಿಡಿಸುವುದನ್ನು ನಿಷೇಧ ಮಾಡಿದೆ. ಹೀಗಾಗಿ ಪರಿಸರ ಸ್ನೇಹಿ ಹಾಗೂ ಹಸಿರು ಪಟಾಕಿಯನ್ನು ಸಿಡಿಸಬೇಕು. ಈ ಮೊದಲು ಸಿಡಿಸುವ ಪಟಾಕಿಯಿಂದ ಕೋವಿಡ್ ಸೋಂಕಿತರಿಗೆ ಉಸಿರಾಟದ ತೊಂದರೆಯಾಗಲಿದೆ. ಇದನ್ನೆಲ್ಲ ದೂರಮಾಡಲೆಂದೇ ಸರ್ಕಾರ ಹಸಿರು ಪಟಾಕಿಯನ್ನು ಸಿಡಿಸಲು ಅನುಮತಿ ನೀಡಿದೆ. ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು ಎಂದು ತಿಳಿಸಿದ್ದಾರೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts