More

    ಗುಣಮುಖ ಸಂಖ್ಯೆಯಲ್ಲಿ ಏರಿಕೆ

    ಬಾಗಲಕೋಟೆ: ಜಿಲ್ಲೆಯಲ್ಲಿ ಕೋವಿಡ್‌ನಿಂದ 1047 ಜನ ಗುಣಮುಖರಾಗಿದ್ದು, ಹೊಸದಾಗಿ 584 ಪ್ರಕರಣಗಳು ದೃಢಪಟ್ಟಿವೆ. ಚಿಕಿತ್ಸೆ ಫಲಕಾರಿಯಾಗದೆ ಮತ್ತೆ 14 ಸೋಂಕಿತರು ಹೆಮ್ಮಾರಿ ಅಟ್ಟಹಾಸಕ್ಕೆ ಶನಿವಾರ ಬಲಿಯಾಗಿದ್ದಾರೆ. ಗುಣಮುಖರ ಸಂಖ್ಯೆ ಹೆಚ್ಚಾಗುತ್ತಿರುವುದು ಜಿಲ್ಲೆಯ ಜನರಿಗೆ ಸಮಾಧಾನ ತಂದಿದೆ.

    ಜಿಲ್ಲೆಯಲ್ಲಿ ಇಲ್ಲಿವರೆಗೆ ಒಟ್ಟು 28,584 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ 21,592 ಜನ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಹೊಸದಾಗಿ ಬಾಗಲಕೋಟೆ 262, ಬಾದಾಮಿ 60, ಜಮಖಂಡಿ 109, ಹುನಗುಂದ 46, ಮುಧೋಳ 75, ಬೀಳಗಿ 32 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
    ಕೋವಿಡ್ ಲ್ಯಾಬ್‌ನಲ್ಲಿ ಪರೀಕ್ಷಿಸಲಾಗುತ್ತಿದ್ದ 1215 ಸ್ಯಾಂಪಲ್‌ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. 239 ಮೃತ ಪ್ರಕರಣಗಳು ವರದಿಯಾಗಿವೆ. ಇನ್ನು 6753 ಸಕ್ರಿಯ ಪ್ರಕರಣಗಳು ಇವೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದ್ದಾರೆ.

    ಕೋವಿಡ್‌ಗೆ 14 ಜನ ಮೃತ
    ಕೋವಿಡ್ ಸೋಂಕಿನಿಂದ ಮತ್ತೆ 14 ಜನ ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 239ಕ್ಕೆ ಏರಿಕೆಯಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ 70 ವರ್ಷದ ವೃದ್ಧ, ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟದ 58 ವರ್ಷದ ಪುರುಷ, ಹುನಗುಂದ ತಾಲೂಕಿನ ಮುಗನೂರಿನ 54 ವರ್ಷದ ಪುರುಷ, ಜಮಖಂಡಿಯ 58 ವರ್ಷದ ಮಹಿಳೆ, ಗಿರಿಸಾಗರದ 52 ವರ್ಷದ ಪುರುಷ , ಬಾದಾಮಿ ತಾಲೂಕಿನ ಕೆಂದೂರಿನ 64 ವರ್ಷದ ವೃದ್ಧ, ಕಗಲಗೊಂಬದ 44 ವರ್ಷದ ಪುರುಷ, ಜಮಖಂಡಿ ತಾಲೂಕು ಶೂರ್ಪಾಲಿಯ 40 ವರ್ಷದ ಮಹಿಳೆ, ಮುಧೋಳನ 41 ವರ್ಷದ ಪುರುಷ , ಮಹಾಲಿಂಗಪುರದ 58 ವರ್ಷದ ಮಹಿಳೆ, ಬಾಗಲಕೋಟೆಯ 71 ವರ್ಷದ ವೃದ್ಧ, ತುಳಸಿಗೇರಿ 45 ವರ್ಷದ ಪುರುಷ , ನವನಗರದ 35 ವರ್ಷದ ಪುರುಷ, 54 ವರ್ಷದ ಪುರುಷ ಸಾವನ್ನಪ್ಪಿದ್ದಾರೆ.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts