More

    ಬಂಗಾರ, ಬೆಳ್ಳಿ ಮುಡಿಗೇರಿಸಿಕೊಂಡ ರಾಸುಗಳು

    ಬಾಗಲಕೋಟೆ: ಐತಿಹಾಸಿಕ ಮೋಟಗಿ ಬಸವೇಶ್ವರ ಜಾತ್ರೆ ಅಂಗವಾಗಿ ಬಾಗಲಕೋಟೆ ಎಪಿಎಂಸಿ ವತಿಯಿಂದ ನಗರದ ಕಲಾದಗಿ ರಸ್ತೆ ಪಕ್ಕ ಕಳೆದ ಐದು ದಿನಗಳಿಂದ ಹಮ್ಮಿಕೊಂಡಿದ್ದ ಜಾನುವಾರ ಜಾತ್ರೆ ಶನಿವಾರ ಸಂಭ್ರಮದ ತೆರೆ ಕಂಡಿದೆ.

    ಜಾತ್ರೆಯಲ್ಲಿ ಆಯೋಜಿಸಿದ್ದ ಉತ್ತಮ ರಾಸುಗಳ ಸ್ಪರ್ಧೆಯಲ್ಲಿ ಶಿರೂರ ಗ್ರಾಮದ ನಾಗಪ್ಪ ಅಚನೂರ ಅವರ ಜೋಡೆತ್ತುಗಳು ಜಾತ್ರಾ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದು, 5 ಗ್ರಾಂ ಬಂಗಾರವನ್ನು ತಮ್ಮದಾಗಿಸಿಕೊಂಡವು. ಇನ್ನು ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ನೀಡಲಾಯಿತು.

    ಎರಡು ಹಲ್ಲಿನ ಹೋರಿ ವಿಭಾಗ
    ಅಥಣಿ ತಾಲೂಕಿನ ಅರ್ತಾಳ ಗ್ರಾಮದ ಸುಭಾಸ ಡೆಂಗಿ ಅವರ ಹೋರಿ (ಪ್ರಥಮ), ಜಮಖಂಡಿ ತಾಲ್ಲೂಕಿನ ಅಲಗೂರ ಗ್ರಾಮದ ಸಿದ್ದರಾಮ ಲಿಗಾಡಿ ಅವರ ಹೋರಿ (ದ್ವಿತೀಯ) ಹಾಗೂ ಬಬಲೇಶ್ವರ ತಾಲ್ಲೂಕಿನ ಮಮದಾಪುರ ಗ್ರಾಮದ ಸದಾಶಿವ ಶಿವಪ್ಪಗೋಳ ಅವರ ಹೋರಿ (ತೃತೀಯ) ಸ್ಥಾನಗಳಿಸಿವೆ.

    ನಾಲ್ಕು ಹಲ್ಲಿನ ಹೋರಿ ವಿಭಾಗ
    ಬಸವನಬಾಗೇವಾಡಿ ತಾಲೂಕಿನ ಉಕ್ಕಲಿಯ ಅಲಿಸಾಬ್ ಖರೋಶಿ ಅವರ ಹೋರಿ (ಪ್ರಥಮ), ಶಿರಗುಂಪಿಯ ಉಮೇಶ ಹೊದ್ಲೂರ ಅವರ ಹೋರಿ (ದ್ವಿತೀಯ) ಹಾಗೂ ಹುನಗುಂದ ತಾಲೂಕಿನ ಬೇವಿನಾಳ ಗ್ರಾಮದ ಬಸನಗೌಡ ಗೌಡರ ಅವರ ಹೋರಿ (ತೃತೀಯ) ಸ್ಥಾನ ಪಡೆದಿವೆ.

    ಆರು ಹಲ್ಲಿನ ಹೋರಿ ವಿಭಾಗ
    ಹೂಬನೂರ ಎಲ್.ಟಿಯ ಅಪ್ಪಾಲಾಲ ರಾಠೋಡ ಅವರ ಹೋರಿ (ಪ್ರಥಮ), ವೀರಾಪುರದ ನಾಗಪ್ಪ ಚವಡಿ ಅವರ ಹೋರಿ (ದ್ವಿತೀಯ) ಸ್ಥಾನ ಪಡೆದರೆ ಮುದ್ದೇಬಿಹಾಳ ತಾಲೂಕಿನ ಕಿಲ್ಲಾರಟ್ಟಿ ಗ್ರಾಮದ ನೀಲಕಂಠಪ್ಪ ಮದರಿ ಅವರ ಹೋರಿ (ತೃತೀಯ) ಸ್ಥಾನ ಪಡೆದಿವೆ.

    ಕಿಲಾರಿ ಆಕಳು ವಿಭಾಗ
    ಬೀಳಗಿ ತಾಲೂಕಿನ ಮುತ್ತಲದಿನ್ನಿಯ ಮಲ್ಲಪ್ಪ ಕಲ್ಲಾರಿ (ಪ್ರಥಮ), ಮನ್ನಿಕಟ್ಟಿಯ ಪರಸಪ್ಪ ಶಿವಪ್ಪ ಕೊಳಮಲಿ ಅವರ ಆಕಳು (ದ್ವಿತೀಯ) ಸ್ಥಾನ ಹಾಗೂ ಹೊನ್ನರಳ್ಳಿ ಗ್ರಾಮದ ಮಲ್ಲಿಕಾರ್ಜುನ ಗೌಡರ ಅವರ ಆಕಳು (ತೃತೀಯ) ಸ್ಥಾನ ಪಡೆದಿದೆ.

    ಜೋಡೆತ್ತು ವಿಭಾಗ
    ವಿಜಯಪುರದ ಮುದ್ದೇಬಿಹಾಳ ತಾಲೂಕಿನ ವೀರೇಶ ನಾಯಕಲ್ಲ ಅವರ ಎತ್ತುಗಳು (ಪ್ರಥಮ), ವಿಜಯಪುರ ತಾಲ್ಲೂಕಿನ ಉತ್ನಾಳದ ಶಂಕರ ಹಿಪ್ಪರಗಿ ಅವರ ಎತ್ತುಗಳು (ದ್ವಿತೀಯ) ಹಾಗೂ ಬಾದಾಮಿ ತಾಲೂಕಿನ ಜಮ್ಮನಕಟ್ಟಿಯ ವೆಂಕಣ್ಣ ಹೊಸಗೌಡರ (ತತೀಯ) ಸ್ಥಾನ ಪಡೆದಿವೆ.

    ಹಾಲು ಹಲ್ಲಿನ ಹೋರಿ ವಿಭಾಗ
    ಬಾಗಲಕೋಟೆಯ ಸಂಗಮೇಶ ಯಮನಾಳ ಅವರ ಹೋರಿ (ಪ್ರಥಮ), ಕಡ್ಲಿಮಟ್ಟಿಯ ಬಾಲಪ್ಪ ಮಜ್ಜಗಿ (ದ್ವಿತೀಯ) ಹಾಗೂ ಬಸವನಬಾಗೇವಾಡಿ ತಾಲ್ಲೂಕಿನ ಉಕ್ಕಲಿಯ ಲಾಲಸಾಬ್ ಕುಣವಿ ಅವರ ಹೋರಿ (ತೃತೀಯ) ಸ್ಥಾನ ಪಡೆದಿದೆ.

    ಪ್ರಥಮ ಸ್ಥಾನಕ್ಕೆ 20 ತೊಲ ಬೆಳ್ಳಿ
    ಈ ಎಲ್ಲ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದ ಜಾನುವಾರುಗಳಿಗೆ 20 ತೊಲಿ ಬೆಳ್ಳಿ, ದ್ವಿತೀಯ ಸ್ಥಾನ ಪಡೆದವರಿಗೆ 15 ತೊಲಿ ಬೆಳ್ಳಿ ಹಾಗೂ ತೃತೀಯ ಸ್ಥಾನಕ್ಕೆ 10 ತೊಲಿ ಬೆಳ್ಳಿ ನೀಡಲಾಯಿತು. ಬೆಳಗಾವಿಯ ರಾಜ್ಯ ಕೃಷಿ ಮಾರಾಟ ಮಂಡಳಿಯ ವಿಭಾಗೀಯ ಕಾರ್ಯಾಲಯದ ಪ್ರಧಾನ ವ್ಯವಸ್ಥಾಪಕರು ಹಾಲು ಹಲ್ಲಿನ ಹೋರಿ ವಿಭಾಗದ ಪ್ರಥಮ ಸ್ಥಾನಕ್ಕೆ 10 ಸಾವಿರ, ದ್ವಿತೀಯ ಸ್ಥಾನಕ್ಕೆ ‘7,500 ಹಾಗೂ ತೃತೀಯ ಸ್ಥಾನಕ್ಕೆ 5 ಸಾವಿರ ಬಹುಮಾನ ನೀಡಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts