More

    ಚಾಣಕ್ಯ ಸ್ವಾಗತಕ್ಕೆ ಚಾಲುಕ್ಯರ ನಾಡು ಸಜ್ಜು !

    ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಬಳಿ ಇರುವ ನಿರಾಣಿ ನಿರಾಣಿ ಉದ್ಯಮ ಸಮೂಹದ ಒಡೆತನದ ಕೇಂದಾರನಾಥ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರದ ಗೃಹ ಸಚಿವ ಅಮಿತ ಶಾ ಚಾಲನೆ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಅದ್ದೂರಿ ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆ ಪೂರ್ಣಗೊಂಡಿದೆ.

    ಚಾಣಕ್ಯ ಅಮಿತ್ ಶಾ ಸ್ವಾಗತಕ್ಕೆ ಚಾಲುಕ್ಯರ ನಾಡುವ ಸಜ್ಜುಗೊಂಡಿದ್ದು, ಕಾರ್ಖಾನೆ ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಬೆಂಗಳೂರು ನಗರದಿಂದ ಬೆಳಗಾವಿ ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಗೃಹ ಸಚಿವ ಅಮಿತ್ ಶಾ ಹಾಗೂ ಇತರೆ ನಾಯಕರು ಅಲ್ಲಿಂದ ಹೆಲಿಕಾಫ್ಟರ್ ಮೂಲಕ ನೇರವಾಗಿ ಕೆರಕಲಮಟ್ಟಿ ಗ್ರಾಮಕ್ಕೆ ಆಗಮಿಸಲಿದ್ದಾರೆ. ಗೋ ಪೂಜೆ ನೆರವೇರಿಸಿದ ಬಳಿಕ ನೇರವಾಗಿ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿರಾಣಿ ಉದ್ಯಮ ಸಮೂಹದ ಇಥೆನಾಲ್ ಘಟಕ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಧಮೇಂದ್ರ ಪ್ರದಾನ, ಸಿಎಂ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಸೇರಿದಂತೆ ಜಿಲ್ಲೆಯ ನಾಯಕರು ಸಾಥ್ ನೀಡಲಿದ್ದಾರೆ. ಒಂದು ಗಂಟೆಯೊಳಗೆ ನಿಗದಿತ ಕಾರ್ಯಕ್ರಮ ಪೂರ್ಣಗೊಳ್ಳಿದೆ.

    ಗಣ್ಯರಿಗೆ 60 *40 ಮುಖ್ಯ ವೇದಿಕೆ ನಿರ್ಮಿಸಲಾಗಿದ್ದು, ಆಯ್ದ 12 ಜನ ಪ್ರಮುಖರಿಗೆ ಮಾತ್ರ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಮುಖ್ಯ ವೇದಿಕೆ 20 ಮೀಟರ್ ಸುತ್ತಮುತ್ತ ಮೊಬೈಲ್, ನೀರು ಸೇರಿದಂತೆ ಎಲ್ಲ ವಸ್ತುಗಳಲ್ಲಿ ನಿಷೇಧಿಸಲಾಗಿದೆ. ವೇದಿಕೆ ಹಿಂಭಾಗದಲ್ಲಿ ನಾಲ್ಕು ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಬೆಳಗಾವಿಯಿಂದ ಗಣ್ಯರು ಹೆಲಿಕಾಪ್ಟರ್ ಮೂಲಕ ಈ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಮುಖ್ಯ ವೇದಿಕೆ ಎದುರು ಬೃಹತ್ ಪ್ರಮಾಣದ ಶಾಮಿಯಾನ್ ಹಾಕಲಾಗಿದೆ. 50 ಸಾವಿರ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಖಾನೆ ಆವರಣ, ಕೆರಕಲಮಟ್ಟಿ ಗ್ರಾಮ ಹಾಗೂ ಸುತ್ತಮುತ್ತಲೀನ ಪ್ರದೇಶಗಳಲ್ಲಿ ಕಟೌಟ್, ಬ್ಯಾನರ್‌ಗಳು ರಾರಾಜಿಸುತ್ತೀವೆ.

    ಬಿಗಿ ಪೊಲೀಸ್ ಬಂದೋ ಬಸ್ತ್
    ಕಾರ್ಯಕ್ರಮದ ಅಂಗವಾಗಿ ಬಿಗಿ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗಿದೆ. ಕೇಂದ್ರದ ವಿಶೇಷ ಭದ್ರತಾ ಪಡೆ ಆಗಮಿಸಿದ್ದು, ಈಡಿ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದುಕೊಂಡಿದೆ. ಎಲ್ಲೆಡೆ ಹದ್ದಿನ ಕಣ್ಣು ಇರಿಸಲಾಗಿದೆ. 5 ಜನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್‌ಪಿ, ಪಿ.ಎಸ್.ಐ, ಸಿಪಿಐ ಸೇರಿ 100 ಕ್ಕೂ ಹೆಚ್ಚು ವಿವಿಧ ಹಂತದ ಅಧಿಕಾರಿಗಳು, ಸಶಸ್ತ್ರ ಮೀಸಲು ಪಡೆ, ಸಿವಿಲ್ ಪೊಲೀಸ್, ಹೋಮ ಗಾರ್ಡ್ ಸೇರಿದಂತೆ ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ ಕಾರ್ಯಕ್ರಮದ ವೇದಿಕೆ 1 ಕಿ.ಮೀ ದೂರದಲ್ಲಿ ಪಾರ್ಕಿಂಗ್ ವವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಅಲ್ಲಿಂದ ನಡೆದುಕೊಂಡು ಕಾರ್ಯಕ್ರಮಕ್ಕೆ ಆಗಮಿಸಬೇಕು. ವಿವಿಐಪಿ, ವಿಐಪಿಗಳಿಗೆ ಪ್ರತ್ಯೇಕವಾಗಿ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

    ಇಥಿನಾಲ್ ಉತ್ಪಾದನೆ ಹೆಚ್ಚಿಸುವ ಗುರಿ
    ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಸಚಿವ ಮುರಗೇಶ ನಿರಾಣಿ ಅವರನ್ನು ಭವ್ಯವಾಗಿ ಸ್ವಾಗತಿಸಲಾಯಿತು. ನೇರವಾಗಿ ಕೇದಾರನಾಥ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುರಗೇಶ ನಿರಾಣಿ, ಕೇಂದ್ರದ ಗೃಹ ಸಚಿವ ಅಮಿತ ಶಾ ಮೊದಲ ಬಾರಿಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದುಯ ಖುಷಿ ತಂದಿದೆ. ಸಕ್ಕರೆ ಉತ್ಪಾದನೆಯಲ್ಲಿ ಎಂಆರ್‌ಎನ್ ನಿರಾಣಿ ಸಂಸ್ಥೆ ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ಇಥಿನಾಲ್ ಉತ್ಪಾದನೆಯಲ್ಲಿ ಏಷ್ಯದಲ್ಲಿ ನ.ಂ1 ಸ್ಥಾನದಲ್ಲಿದೆ. ಭಾರತವು ಇಥಿನಾಲ್ ಉತ್ಪಾದನೆ ಹೆಚ್ಚಿಸಬೇಕು. ಆಮದು ಸ್ಥಗಿತಗೊಂಡು ಸ್ವಾವಲಂಬನೆ ಸಾಧಿಸಬೇಕು ಎನ್ನುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯ. ಈ ನಿಟ್ಟಿನಲ್ಲಿ ನಿರಾಣಿ ಸಂಸ್ಥೆ ಇಥಿನಾಲ್ ಉತ್ಪಾದನೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಸದ್ಯಕ್ಕೆ ನಮ್ಮ ಸಂಸ್ಥೆ ನಿತ್ಯವು 8.50 ಲಕ್ಷ ಲೀಟರ್ ಇಥಿನಾಲ್ ಉತ್ಪಾದನೆ ಮಾಡುತ್ತಿದೆ. ಇದನ್ನು 26 ಲಕ್ಷ ಲೀಟರ್ ವರೆಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಮುಂದಿನ ದಿನ ಮಾನಗಳಲ್ಲಿ ವಿಮಾನಗಳಿಗೆ ಬಳಸುವ ಇಂಧನ ಉತ್ಪಾದನೆ ಮಾಡುವುದು ನಿರಾಣಿ ಸಂಸ್ಥೆ ಗುರಿ ಇಟ್ಟುಕೊಂಡಿದೆ ಎಂದರು.

    ರೈತರ ಆದಾಯ ದ್ವಿಗುಣಗೊಳ್ಳಬೇಕು ಎನ್ನುವುದು ಮೋದಿ ಅವರ ಆಶಯ. ಈ ಹಿನ್ನಲೆಯಲ್ಲಿ ರೈತರ ಪರವಾದ ಕಾನೂನು ರೂಪಿಸಿದ್ದಾರೆ. ಯುವಕರು ಉದ್ಯಮಗಳನ್ನು ಸ್ಥಾಪಿಸಬೇಕು ಎನ್ನುವ ಉದ್ದೇಶದಿಂದ ಮೇಕ್ ಇನ್ ಇಂಡಿಯಾ, ಸ್ಟ್ರಾಟಫ್ ಇಂಡಿಯಾ ಯೋಜನೆ ಅನುಷ್ಠಾನಗೊಳಿಸಿದ್ದಾರೆ. ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

    ಕೇದಾರನಾಥ ಸಕ್ಕರೆ ಕಾರ್ಖಾನೆಯನ್ನು ನ್ಯಾಯಾಲಯದ ಆದೇಶದಂತೆ ಖರೀದಿ ಮಾಡಲಾಗಿದೆ. ಕಬ್ಬು ಪೂರೈಕೆದಾರರ ಬಾಕಿ ಬಿಲ್, ರೈತರ ಶೇರು ಹಣದ ಬಗ್ಗೆ ಮಾಹಿತಿ ಗೊತ್ತಿದೆ. ರೈತರಿಗೆ ಅನ್ಯಾಯ ಮಾಡಲು ಬಿಡುವದಿಲ್ಲ. ಅವರ ಋಣ ಇಟ್ಟುಕೊಳ್ಳುವದಿಲ್ಲ. ರಾಜಕೀಯ ಪ್ರೇರಿತವಾಗಿ ಪ್ರತಿಭಟನೆ ಮಾಡಬಾರದು ಎಂದು ಮನವಿ ಮಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಯಾವ ಖಾತೆ ಕೊಟ್ಟರು ನಿಭಾಯಿಸುತ್ತೇನೆ. ಇಂತಹ ಖಾತೆ ಬೇಕು ಎನ್ನುವ ಬೇಡಿಕೆ ಇಟ್ಟಿಲ್ಲ. ನನ್ನ ಮಂತ್ರಿ ಮಾಡಲು ಯಾರ ವಿರೋಧವಿಲ್ಲ. ಹೌದಪ್ಪ, ಅಲ್ಲಪ್ಪ ಎಂದು ಹೇಳಿಕೆ ನೀಡುವವರ ಬಗ್ಗೆ ನಾನು ಹೇಳಿಕೆ ನೀಡುವದಿಲ್ಲ. ಮುಂದಿನ ಸಾರಿ ಬೀಳಗಿ ವಿಧಾನ ಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡದಿದ್ದರು ಪರವಾಗಿಲ್ಲ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಪರೋಕ್ಷವಾಗಿ ಶಾಸಕ ಸಿದ್ದು ಸವದಿ ಅವರಿಗೆ ಟಾಂಗ್ ನೀಡಿದರು.

    ಇನ್ನು ಕೃಷ್ಣಾ ಮೇಲ್ದಂಡೆ ಯೋಜನೆ 3 ನೇ ಹಂತದ ಕೈಗೆತ್ತಿಕೊಳ್ಳಲು ಹಣಕಾಸಿನ ಸ್ಥಿತಿ ನೋಡಿಕೊಂಡು ಮುಂದುವರೆಯಲಾಗುವುದು. ಉತ್ತರ ಕರ್ನಾಟಕ ನೀರಾವರಿ ಬಗ್ಗೆ ಒತ್ತು ನೀಡಲಾಗುವುದು. ಸಚಿವ ರಮೇಶ ಜಾರಕಿಹೊಳಿ ಬೆಂಬಲ ನೀಡಲಿದ್ದಾರೆ. ಕಾಳಿ ನದಿಯನ್ನು ಮಲಪ್ರಭಾ, ಘಟಪ್ರಭಾ ಜೋಡನೆ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುವುದು. ಈ ಯೋಜನೆಯಿಂದ ಉ-ಕ ಭಾಗದ 5,6 ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಇರುವದಿಲ್ಲ. ನದಿಗಳಿಗೆ 12 ತಿಂಗಳು ಜೀವ ಕಳೆ ಬರಲಿದೆ ಎಂದು ತಿಳಿಸಿದರು. ಜಿ.ಪಂ ಸದಸ್ಯ ಹೂವಪ್ಪ ರಾಠೋಡ, ಮುಖಂಡರಾದ ಮಹಾಂತೇಶ ಕೋಲಕಾರ, ರಮೇಶ ಮೊರಟಗಿ ಸೇರಿದಂತೆ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts