

ಬೈಂದೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಶುಕ್ರವಾರ ಸಂಸದ ಬಿ.ವೈ.ರಾಘವೇಂದ್ರ ದಂಪತಿ ದೇವರ ದರ್ಶನ ಪಡೆದರು. ನಂತರ ಚಂಡಿಕಾಹೋಮ ಸೇವೆ ನೆರವೇರಿಸಿದರು.ಉತ್ತಮ ಮಳೆಯಾಗುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಿ ನಾಡು ಸುಭಿಕ್ಷೆಯಾಗಿರಲಿ. ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಬಾರಿ ದೇಶದ ಚುಕ್ಕಾಣಿ ಹಿಡಿದಿದ್ದು, ರಾಷ್ಟ್ರದ ಅಭಿವೃದ್ಧಿಗೆ ಮತ್ತಷ್ಟು ವೇಗ ಕೊಡುವ ಶಕ್ತಿ ನೀಡುವಂತೆ ಪ್ರಾರ್ಥಿಸಲಾಯಿತು. ಶಾಸಕ ಗುರುರಾಜ್ ಗಂಟಿಹೊಳೆ ದಂಪತಿ, ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ, ಉದ್ಯಮಿ ಕುಂಜಾಲು ವೆಂಕಟೇಶ ಕಿಣಿ, ಗುರುಮೂರ್ತಿ, ಬಳ್ಳೇಕೆರೆ ಸಂತೋಷ್, ಮಾಲತೇಶ್, ರಾಜೇಶ ಕಾಮತ್, ಕಾರ್ಯಕರ್ತರು ಇದ್ದರು.