More

    ಚುನಾವಣಾ ರಾಜಕಾರಣದಿಂದ ದೂರ ಉಳಿಯಲು ಬಿ.ಆರ್. ಯಾವಗಲ್ ನಿರ್ಧಾರ

    ನರಗುಂದ: ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಯಾವಗಲ್‌ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಆದರೆ, ಪಕ್ಷದಲ್ಲಿ ಸಕ್ರಿಯವಾಗಿದ್ದುಕೊಂಡು ಸಂಘಟನೆಯ ಚಟುವಟಿಕೆ ಮಾಡುತ್ತೇನೆ ಎಂದು ಹೇಳಿದರು.
    ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಭಾವಿ ಮಂತ್ರಿಯಾಗಿದ್ದ ಸಿ.ಸಿ.ಪಾಟೀಲ ಅವರಿಗೆ ಅಧಿಕಾರ ಬಲ, ಹಣಬಲ ಹೆಚ್ಚಾಗಿತ್ತು. ಆ ಬಲ ಇಲ್ಲದಿರುವ ನಾನು ಸೋತಿದ್ದೇನೆ. ನನ್ನನ್ನು ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ನೋವಿನಿಂದ ನುಡಿದರು.
    ಮತಕ್ಷೇತ್ರದ ಜನರಲ್ಲಿ ಭಯದ ಪರಿಸ್ಥಿತಿ ಇತ್ತು. ಇದರಿಂದಲೇ ಬಿಜೆಪಿ ಅಭ್ಯರ್ಥಿ 1,791 ಮತಗಳ ಅಂತರದಿಂದ ಗೆದ್ದಿದ್ದಾರೆ. ಬಿಜೆಪಿಯ ಪ್ರಾಬಲ್ಯದ ನಡುವೆಯೂ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ವಿಶೇಷವಾಗಿ ಯುವಕರು ಅತ್ಯಂತ ಪ್ರಾಮಾಣಿಕವಾಗಿ ಚುನಾವಣೆ ಎದುರಿಸಿದ್ದಾರೆ ಎಂದರು.
    ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ, ಚುನಾವಣೆಯಲ್ಲಿ ನೀಡಿದ ಭರವಸೆಗಳಿಂದ 135 ಸ್ಥಾನ ಗೆಲ್ಲಲು ಸಾಧ್ಯವಾಗಿದೆ. ನನ್ನ 45 ವರ್ಷದ ರಾಜಕೀಯ ಜೀವನದಲ್ಲಿ ಅಧಿಕಾರದಲ್ಲಿದ್ದಾಗ ಜನರಿಗೆ ಸೌಲಭ್ಯ ಒದಗಿಸಲು ಶ್ರಮಿಸಿದ್ದೇನೆ. ಪಕ್ಷ ನೀಡಿದ ಭರವಸೆಗಳಿಗೆ ಜನ ಬೆಂಬಲಿಸಿ ಮತ ನೀಡಿದ್ದಾರೆ. ಇಷ್ಟು ಪ್ರಮಾಣದಲ್ಲಿ ಜನ ಒಪ್ಪಿಕೊಂಡಿದ್ದು ನೋಡಿದರೆ ನಾನು ಗೆದ್ದಂತೆ. 10 ಚುನಾವಣೆಗಳನ್ನು ಎದುರಿಸಿರುವ ನನಗೆ ಬೆಂಬಲಿಸಿದ ಮತಕ್ಷೇತ್ರದ ಜನರಿಗೆ ಅಭಿನಂದನೆ ತಿಳಿಸಿದರು.
    ಚುನಾವಣೆಗೆ ನಿರ್ಧರಿಸದಿರುವ ಬಿ.ಆರ್. ಯಾವಗಲ್ ಅವರ ನಿರ್ಧಾರ ಆಕ್ಷೇಪಿಸಿದ ಪಕ್ಷದ ವಕ್ತಾರ ರಾಜು ಕಲಾಲ ಹಾಗೂ ಮುಖಂಡರು, ‘ನಾವು ಸೋತಿಲ್ಲ, ಗೆದ್ದಿದ್ದೇವೆ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಅವರ ಪ್ರಭಾವದ ನಡುವೆಯೂ 135 ಸ್ಥಾನ ಪಡೆದು ಪಕ್ಷ ಅಧಿಕಾರಕ್ಕೆ ಬಂದಿದೆ. ಯಾವಗಲ್‌ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ’ ಎಂದು ಸ್ಪಷ್ಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts