More

    ವಿಶ್ವ ಹಿಂದು ಪರಿಷತ್ತಿನಿಂದ ಮಂತ್ರಾಕ್ಷತೆ ವಿತರಣೆ

    ಗಂಗಾವತಿ: ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ಶ್ರೀರಾಮಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಾಲೂಕಿನ ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಆಹ್ವಾನಿಸಿದ್ದು, ಹಿಂದು ಪರ ಸಂಘಟನೆ ಕಾರ್ಯಕರ್ತರು ಭಾನುವಾರ ಅಧಿಕೃತ ಆಹ್ವಾನ ನೀಡಿದರು.

    ಉದ್ಘಾಟನೆ ಕಾರ್ಯಕ್ರಮದಲ್ಲಿ ದೇಶದಾದ್ಯಂತ 5ಸಾವಿರ ಶ್ರೀಗಳು ಭಾಗವಹಿಸಲಿದ್ದು, ರಾಜ್ಯದ ಪ್ರತಿಯೊಂದು ಜಿಲ್ಲೆಗೊಬ್ಬ ಶ್ರೀಗಳಿಗೆ ಜ.22ರಂದು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಟ್ರಸ್ಟ್ ಪರ ವಿಶ್ವ ಹಿಂದು ಪರಿಷತ್ತಿನ ರಾಜ್ಯ ಸಂ.ಪ್ರಮುಖ ಬಸವರಾಜ ಹಿರೇಮಠ ನೇತೃತ್ವದ ಕಾರ್ಯಕರ್ತರು ಹೆಬ್ಬಾಳ ಮಠಕ್ಕೆ ತೆರಳಿ ಆಹ್ವಾನ ಪತ್ರಿಕೆ ನೀಡಿದರು.

    ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ದೇವಾಲಯ ಉದ್ಘಾಟನೆಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ, ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಅರೆಸ್ಸೆಸ್ ಸರ ಸಂಘ ಚಾಲಕ ಮೋಹನ್ ಭಾಗವತ್, ಟ್ರಸ್ಟ್ ಪದಾಧಿಕಾರಿಗಳು ಮತ್ತು ಉತ್ತರ ಪ್ರದೇಶದ ಸಿಎಂ ಸೇರಿ ಇತರೆ ರಾಜ್ಯದ ರಾಜ್ಯಪಾಲರು ಭಾಗವಹಿಸಲಿದ್ದಾರೆ ಎಂದು ಕಾರ್ಯಕರ್ತರು ತಿಳಿಸಿದರು.

    ಆಹ್ವಾನ ಪತ್ರಿಕೆ ಸ್ವೀಕರಿಸಿದ ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಮಾತನಾಡಿ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಯೋಧ್ಯೆಗೆ ತೆರಳುತ್ತಿದ್ದು, ಭಾಗವಹಿಸುವುದು ಹೆಮ್ಮೆಯ ವಿಷಯ. ಮನೆಮನೆಗೆ ಆಹ್ವಾನ ಕಾರ್ಯಕ್ರಮ ವಿಶಿಷ್ಟ ಎಂದರು.

    ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಕೆ.ಎಂ.ದೊಡ್ಡಯ್ಯಸ್ವಾಮಿ ಹಣವಾಳ, ಹಿಂದು ಜಾಗರಣೆ ವೇದಿಕೆ ಪ್ರಾಂತ ಕಾರ್ಯದರ್ಶಿ ಅಯ್ಯನಗೌಡ ಹೇರೂರು, ಭಜರಂಗದಳ ಜಿಲ್ಲಾ ಸಂಯೋಜಕ ವಿನಯ ಪಾಟೀಲ್, ಪದಾಧಿಕಾರಿಗಳಾದ ನೀಲಕಂಠಪ್ಪ ನಾಗಶೆಟ್ಟಿ, ನರಸಿಂಗ್‌ರಾವ್ ಕುಲಕರ್ಣಿ, ರಾಮಾಂಜನೇಯ, ವಿರೇಶ, ಹರೀಶ ಕುಲಕರ್ಣಿ ಇತರರಿದ್ದರು.

    ಹಣವಾಳ: ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಮಂದಿರ ಉದ್ಘಾಟನೆ ಆಹ್ವಾನಕ್ಕಾಗಿ ತಾಲೂಕಿನ ಹಣವಾಳದಲ್ಲಿ ಮನೆಮನೆಗೆ ತೆರಳಿ ಮಂತ್ರಾಕ್ಷತೆ ವಿತರಿಸಲಾಯಿತು. ಆಹ್ವಾನ ಪತ್ರಿಕೆಗಳನ್ನು ಗ್ರಾಮದ ಶ್ರೀ ಶರಣಬಸವೇಶ್ವರ, ಶ್ರೀವೀರಭದ್ರೇಶ್ವರ, ಶ್ರೀಕಲ್ಲೇಶ್ವರ, ಶ್ರೀದುರ್ಗಾಪರಮೇಶ್ವರಿ, ಶ್ರೀ ಲಕ್ಷ್ಮೀ ದೇವಿ ಮತ್ತು ಶ್ರೀ ಕಷ್ಣ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ಆಹ್ವಾನದ ಕುರಿತು ಭಜರಂಗದಳ ಜಿಲ್ಲಾ ಸಂಚಾಲಕ ಕೆ.ಎಂ.ದೊಡ್ಡಬಸಯ್ಯ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts