More

    ಮೀನು ಹಿಡಿಯದಂತೆ ಮೀನುಗಾರರಲ್ಲಿ ಜಾಗೃತಿ

    ಸಾಗರ: ಲಿಂಗನಮಕ್ಕಿ ಜಲಾಶಯ ಒಳಗೊಂಡAತೆ ಕೆರೆ ಮುಂತಾದ ಜಲಾನಯನ ಪ್ರದೇಶಗಳಲ್ಲಿ ಮುಂಗಾರು ಮಳೆ ಅವಽಯಲ್ಲಿ ಮೀನುಗಳು ಸಂತಾನಾಭಿವೃದ್ಧಿ ನಡೆಸುವುದರಿಂದ ಮೀನು ಹಿಡುವಳಿ ಮಾಡದಂತೆ ಇಲಾಖೆ ನಿರ್ಬಂಧ ವಿಽಸಿದ್ದರೂ ನಿರಂತರವಾಗಿ ಮೀನು ಹಿಡಿದು ಅದರ ಸಂತಾನಾಭಿವೃದ್ಧಿಗೆ ತೊಂದರೆ ಮಾಡಲಾಗುತ್ತಿದೆ. ಅಪರೂಪದ ತಳಿಗಳೂ ನಾಶವಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಜಾಗೃತಿ ಮೂಡಿಸಲು ಮೀನುಗಾರಿಕೆ ಇಲಾಖೆ ಮೀನುಗಾರರ ಕ್ಯಾಂಪ್‌ಗಳಿಗೆ ತೆರಳಿ ಜಾಗೃತಿ ಮೂಡಿಸಿತು. ಬುಧವಾರ ಸಾಗರ ತಾಲೂಕಿನ ಹಸಿರುಮಕ್ಕಿ, ಅಂಬಾರಗೋಡ್ಲು ಮುಂತಾದ ಪ್ರದೇಶಗಳಿಗೆ ಸಾಗರದ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ತಿಮ್ಮಪ್ಪ ತೆರಳಿ ಮೀನುಗಾರರಿಗೆ ತಿಳಿವಳಿಕೆ ಹೇಳಿದರು. ಇಲಾಖೆಯ ಕಾನೂನನ್ನು ಉಲ್ಲಂಘಿಸಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts