More

    ಸೂಕ್ಷ್ಮ ಪ್ರದೇಶದಿಂದ ಕೈಬಿಡಿ

    ಸಾಗರ: ಜನವಸತಿ ಪ್ರದೇಶವನ್ನು ಜೀವವೈವಿಧ್ಯತಾ ಸೂಕ್ಷ್ಮ ಪ್ರದೇಶದಿಂದ ಕೈಬಿಡುವಂತೆ ಆಗ್ರಹಿಸಿ ಶಾಸಕ ಗೋಪಾಲಕೃಷ್ಣ ಬೇಳೂರು ನೇತೃತ್ವದ ಗ್ರಾಮಸ್ಥರ ನಿಯೋಗ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಬುಧವಾರ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು.
    ಸಾಗರ ಕ್ಷೇತ್ರದ ಅಂಬಾರಗುಡ್ಡ ಅಕ್ಕಪಕ್ಕದ ಮರಾಠಿ ಗ್ರಾಮದ ಸರ್ವೇ ನಂಬರ್ 117, 95, 116, 125, 136, 141, 161, 205, 207, ಆಡುಗಳಲೆ ಗ್ರಾಮದ ಸರ್ವೇ ನಂವರ್ 93, 96 ಹಾಗೂ ಕೊಡನಳ್ಳಿ ಗ್ರಾಮದ ಸರ್ವೇ ನಂ.16 ಮತ್ತು 39 ನ್ನು ಜೀವವೈವಿಧ್ಯತಾ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸುವಂತೆ 2001ರ ನವೆಂಬರ್ 18ರಂದು ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಈ ಪ್ರದೇಶಗಳಲ್ಲಿ ಜನರು ಮನೆಗಳನ್ನು ಕಟ್ಟಿಕೊಂಡು ಜೀವನೋಪಾಯಕ್ಕಾಗಿ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಈ ವಿಷಯಾಧಾರಿತ ಅಂಕಿ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಗ್ರಾಮಸ್ಥರ ಗಮನಕ್ಕೂ ತಾರದೆ ಸರ್ಕಾರದಿಂದ ಅಧಿಸೂಚನೆ ಹೊರಡಿಸಿರುವುದು ರೈತರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಅಲ್ಲದೆ ಈ ಅಧಿಸೂಚನೆಯನ್ನು ಮರು ಪರಿಶೀಲಿಸಿ ಗ್ರಾಮಗಳ ರೈತರ ಖಾತೆ, ಜಾಗ, ಬಗರ್‌ಹುಕುಂ ಹಾಗೂ ವಸತಿ ಪ್ರದೇಶದ ಸ್ಥಳಗಳನ್ನು ಹೊರತುಪಡಿಸಿ ಉಳಿದ ಪ್ರದೇಶವನ್ನು ಸೂಕ್ಷ್ಮವೆಂದು ಪರಿಗಣಿಸುವಂತೆ ಸಂಬಂಧಪಟ್ಟ ಇಲಾಖೆ ಮತ್ತು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಗ್ರಾಮಸ್ಥರ ಹಿತಕಾಪಾಡಬೇಕು ಎಂದು ಕೋರಿದರು. ಮನವಿ ಸ್ವೀಕರಿಸಿದ ಕಂದಾಯ ಸಚಿವರು ವಸ್ತು ಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts