More

    ಮೇ 28ಕ್ಕೆ ಅವತಾರ್ ಪುರುಷ ಸಿನಿಮಾ ಬಿಡುಗಡೆ

    ಫೆಬ್ರವರಿ ಐದರಿಂದ ಮೇ 14ರವರೆಗೂ ಪ್ರತಿ 15 ದಿನಗಳ ಗ್ಯಾಪ್​ನಲ್ಲಿ ಕನ್ನಡದ ಹಲವು ಬಹು ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಪೈಪೋಟಿ ನಡೆಸಿವೆ. ಮೇ 14ರಂದು ಶಿವರಾಜಕುಮಾರ್ ಕುಮಾರ್ ಅಭಿನಯದ ‘ಭಜರಂಗಿ 2’ ಚಿತ್ರವು ಬಿಡುಗಡೆಯಾಗಲಿಕ್ಕಿದೆ. ಆ ನಂತರ ರಾಜ್ ಬಿ ಶೆಟ್ಟಿ ಮತ್ತು ರಿಷಭ್ ಶೆಟ್ಟಿ ಅಭಿನಯದ ‘ಗರುಡ ಗಮನ ರಿಷಭ ವಾಹನ’ ಚಿತ್ರವು ಜೂನ್ 04ರಂದು ಬಿಡುಗಡೆಯಾಗಲಿದೆ. ಈ ಗ್ಯಾಪ್​ನಲ್ಲಿ ಯಾವುದೇ ಚಿತ್ರವಿಲ್ಲವಲ್ಲ ಎನ್ನುತ್ತಿದ್ದವರಿಗೆ ಇದೀಗ ಮೇ 28ಕ್ಕೆ ಇನ್ನೊಂದು ನಿರೀಕ್ಷೆಯ ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

    ಶರಣ್ ಅಭಿನಯದ ‘ಅವತಾರ್ ಪುರುಷ – ಅಷ್ಟಮಂಡಲಕ ದಿಗ್ಬಂಧನ’ ಚಿತ್ರವನ್ನು ಮೇ 28ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ‘ಅವತಾರ್ ಪುರುಷ’ ಎರಡು ಭಾಗಗಳಲ್ಲಿ ನಿರ್ಮಾಣವಾಗಿದ್ದು, ಈ ಪೈಕಿ ಮೊದಲನೇ ಭಾಗವನ್ನು ಮೇ 28ಕ್ಕೆ ಬಿಡುಗಡೆ ಮಾಡಲು ತಯಾರಿ ನಡೆದಿದ್ದು, ಅದಾಗಿ ಎರಡ್ಮೂರು ತಿಂಗಳ ನಂತರ ಇನ್ನೊಂದು ಭಾಗದ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಶರಣ್​ಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದು, ಮಿಕ್ಕಂತೆ ಸಾಯಿಕುಮಾರ್, ಶ್ರೀನಗರ ಕಿಟ್ಟಿ, ಸುಧಾರಾಣಿ, ಭವ್ಯ ಮುಂತಾದವರು ನಟಿಸಿದ್ದಾರೆ.

    ದಾನಿಶ್ ಆರ್ಟ್ಸು ಸಂಯುಕ್ತಾ ಸೈನ್ಸು; ಪುನೀತ್ ನಿರ್ಮಾಣದ ಚಿತ್ರ ಪ್ರಾರಂಭ

    ಮೋಸ ಮಾಡಿದ್ರಾ ನಟಿ ಸನ್ನಿ ಲಿಯೋನ್​?; ದೂರು ದಾಖಲಾಗುತ್ತಿದ್ದಂತೆ ನಿರೀಕ್ಷಣಾ ಜಾಮೀನಿಗೆ ಅರ್ಜಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts