ದಾಖಲೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಶಿವಮೊಗ್ಗ: ಆಟೋದಲ್ಲಿ ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ 22 ಸಾವಿರ ರೂ.ನಗದು, ಎಟಿಎಂ ಕಾರ್ಡ್, ಪಾಸ್‌ಬುಕ್ ಮುಂತಾದ ದಾಖಲೆಗಳಿದ್ದ ಬ್ಯಾಗ್ ಅನ್ನು ವಾರಸುದಾರರಿಗೆ ತಲುಪಿಸಿದ ಆಟೋ ಚಾಲಕ, ಜೆಪಿ ನಗರ ನಿವಾಸಿ ಫೈರೋಜ್ ಖಾನ್ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಸೋಮವಾರ ತಮ್ಮ ಕಚೇರಿಯಲ್ಲಿ ಸನ್ಮಾನಿಸಿದರು.

ಏ.30ರಂದು ಬಸವೇಶ್ವರ ನಗರದ ನಿವಾಸಿ ಶ್ರೀನಿವಾಸ ಗೌಡ ಅವರ ಕಾರು ಶರಾವತಿ ನಗರದ ಸಮೀಪ ಹಾಳಾಗಿತ್ತು. ಅಲ್ಲಿಗೆ ಬಂದ ಫೈರೋಜ್ ಖಾನ್ ಕಾರನ್ನು ತಳ್ಳಿ ಅದು ಸ್ಟಾರ್ಟ್ ಆಗುವಂತೆ ಮಾಡಿಕೊಟ್ಟಿದ್ದರು. ಇದಕ್ಕೂ ಮುನ್ನ ಕಾರಿನಿಂದ ಬ್ಯಾಗ್ ಸಮೇತ ಕೆಳಗಿಳಿದಿದ್ದ ಶ್ರೀನಿವಾಸ ಗೌಡ ಮರೆತು ಬ್ಯಾಗ್‌ನ್ನು ಆಟೋದಲ್ಲೇ ಬಿಟ್ಟಿದ್ದರು.
ಬ್ಯಾಗ್ ಗಮನಿಸಿದ ಫೈರೋಜ್ ಖಾನ್ ಅದನ್ನು ಪೊಲೀಸ್ ಠಾಣೆಗೆ ತಲುಪಿಸಿದ್ದ. ಅದರಲ್ಲಿನ ದಾಖಲೆಗಳ ಆಧಾರದಲ್ಲಿ ಬ್ಯಾಗ್ ಅನ್ನು ಶ್ರೀನಿವಾಸ ಗೌಡರಿಗೆ ತಲುಪಿಸಲಾಯಿತು. ಸೋಮವಾರ ಪೂರ್ವ ವಲಯ ಐಜಿಪಿ ತ್ಯಾಗರಾಜನ್ ಸಮ್ಮುಖದಲ್ಲಿ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಪ್ರಶಂಸನಾ ಪತ್ರ ನೀಡಿ ಫೈರೋಜ್ ಖಾನ್ ಅವರನ್ನು ಸನ್ಮಾನಿಸಿದರು. ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ನಿಸ್ತಂತು ವಿಭಾಗದ ಇನ್ಸ್‌ಪೆಕ್ಟರ್ ಕೆ.ವಿ.ಸತೀಶ ಕುಮಾರ್ ಮುಂತಾದವರಿದ್ದರು.

Share This Article

ಬೆಳಿಗ್ಗೆ ಈ ಹಣ್ಣುಗಳನ್ನು ತಿಂದರೆ ಸಾಕು…ಆರೋಗ್ಯ ಸಮಸ್ಯೆಗಳೆಲ್ಲಾ ದೂರವಾಗುತ್ತವೆ

ಬೆಂಗಳೂರು: ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ವೈದ್ಯರು ಕೂಡ ಹಣ್ಣುಗಳನ್ನು…

ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿದರೆ ಏನಾಗುತ್ತೆ ಗೊತ್ತಾ?

ನವದೆಹಲಿ:  ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ. ಅಲೋವೆರಾವು ಹಲವಾರು…

ಚಹಾ ಕುಡಿಯುವುದರಿಂದ ಹೆಚ್ಚುತ್ತದೆ ಕೊಲೆಸ್ಟ್ರಾಲ್! ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ಟೀ ಕುಡಿಯುವುದು ಒಳ್ಳೆಯದಲ್ಲ…

ಬೆಂಗಳೂರು:    ಬೆಳಿಗ್ಗೆ ಚಹಾದೊಂದಿಗೆ ದಿನ ಪ್ರಾರಂಭಿಸುವ ಅನೇಕ ಜನರಿದ್ದಾರೆ. ಸ್ವಲ್ಪ ತಲೆನೋವು ಬಂದರೂ ಟೈಂ ಪಾಸ್…