More

    ಲೆಕ್ಕಪರಿಶೋಧನ ಸಮಿತಿ ವರದಿ ಆಧರಿಸಿ ಕ್ರಮವಹಿಸಲು ದಲಿತ ಸಂಘರ್ಷ ಸಮಿತಿ ಮನವಿ

    ಲಿಂಗಸುಗೂರು: ವಿವಿಧ ಇಲಾಖೆ ಯೋಜನೆಗಳ ಅನುಷ್ಠಾನ ಹೆಸರಲ್ಲಿ ಹಣ ಲೂಟಿ ಮಾಡಿದ ಕುರಿತ ಆಯಾ ತಾಲೂಕು ಮಟ್ಟದ ಲೆಕ್ಕಪರಿಶೋಧನ ಸಮಿತಿ ವರದಿ ಆಧರಿಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಮುಖಂಡರು ಎಸಿ ಕಚೇರಿ ಸಿಬ್ಬಂದಿ ಅಮರೇಶರಿಗೆ ಗುರುವಾರ ಮನವಿ ಸಲ್ಲಿಸಿದರು.

    ಉದ್ಯೋಗ ಖಾತ್ರಿಯಲ್ಲಿ ಅನುಮೋದಿತ ಕ್ರಿಯಾ ಯೋಜನೆ 8, 9 ನಮೂನೆ, ಕಡತಗಳ ನಿರ್ವಹಣೆ, ಎಂಬಿ ಪ್ರತಿ ನಿರ್ವಹಣೆ ವೈಫಲ್ಯ, ಆಡಳಿತದಲ್ಲಿ ತಾಂತ್ರಿಕ ಮಂಜೂರಾತಿ ಮಾಡದಿರುವ ಕಾಮಗಾರಿಗಳ ಮೂರು ಹಂತದ ಕಡತಗಳ ನಿರ್ವಹಣೆ, ಕಾಮಗಾರಿ ಆರಂಭ ಆದೇಶ, ಮುಕ್ತಾಯದ ಪ್ರಮಾಣ ಪತ್ರ, ಅಂದಾಜು ಪತ್ರಿಕೆ ಸೇರಿ ಅಗತ್ಯ ಕಡತಗಳ ನಿರ್ವಹಣೆ ವೈಫಲ್ಯತೆ ಮತ್ತು ಸ್ಥಳ ಪರಿಶೀಲನೆ ಮಾಡುವಲ್ಲಿ ವಾಸ್ತವ ವರದಿ ಸಲ್ಲಿಸುತ್ತ ಬಂದಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಸಾಮಾಜಿಕ ಲೆಕ್ಕ ಪರಿಶೋಧನ ವರದಿಗಳು ಕಸದ ಬುಟ್ಟಿ ಸೇರುತ್ತಿವೆ. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಹಣ ದುರ್ಬಳಕೆ ಮಾಡಿದ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು.

    ದಸಂಸ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ, ತಾಲೂಕು ಸಂಚಾಲಕರಾದ ಅಮರೇಶ ಹೊಸಮನಿ, ಮೌನೇಶ ಗುಡದನಾಳ, ನಾಗರಾಜ ಹಾಲಬಾವಿ, ಮುಖಂಡರಾದ ಪರಶುರಾಮ ಜಾವೂರು, ಅಮಪಾಷಾ, ಬಸವರಾಜ, ದುರುಗಪ್ಪ, ಹುಸೇನಪ್ಪ, ಗ್ಯಾನಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts