ವಾರ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಮೂಲದಿಂದ ಹಣ ಹರಿದು ಬರಲಿದೆ

ವಾರ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಮೂಲದಿಂದ ಹಣ ಹರಿದು ಬರಲಿದೆ
ವಾರ ಭವಿಷ್ಯ
ವಾರ ಭವಿಷ್ಯ
Published on: 

ಮೇಷ: ನೂತನ ಆಲೋಚನೆಗಳು ನಿಮ್ಮ ವೃತ್ತಿಬದುಕಿಗೆ ಹೊಸ ಬೆಳಕು ತರಲಿವೆ. ಕಚೇರಿಯಲ್ಲಿ ನಿಮ್ಮ ಯೋಜನೆಗಳಿಗೆ ಎಲ್ಲರಿಂದ ಮೆಚ್ಚುಗೆ ದೊರೆಯಲಿದೆ. ಆರ್ಥಿಕ ಸ್ಥಿತಿ ಸದೃಢವಾಗಿರಲಿದ್ದು, ಅನಿರೀಕ್ಷಿತ ಮೂಲದಿಂದ ಹಣ ಹರಿದು ಬರುವುದು. ಕುಟುಂಬದಲ್ಲಿ ಮಂಗಳ ಕಾರ್ಯಗಳ ಚರ್ಚೆ ನಡೆಯಲಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದ್ದು, ವಾರಾಂತ್ಯದಲ್ಲಿ ಆಪ್ತರೊಡನೆ ಪ್ರವಾಸ ಕೈಗೊಳ್ಳುವ ಸುಯೋಗವಿದೆ. ಮನಸ್ಸಿಗೆ ಉಲ್ಲಾಸ ಸಿಗಲಿದೆ.

ವೃಷಭ: ವ್ಯಾಪಾರ ವಹಿವಾಟಿನಲ್ಲಿ ಹೊಸ ಗ್ರಾಹಕರ ಸೇರ್ಪಡೆಯಿಂದ ಲಾಭದ ಪ್ರಮಾಣ ಹೆಚ್ಚಾಗುತ್ತದೆ. ಕಲಾ ಮತ್ತು ಸಾಂಸ್ಕೃತಿಕ ಕ್ಷೇತ್ರದವರಿಗೆ ಮನ್ನಣೆ ಸಿಗುವ ಸಮಯವಿದು. ವಿದ್ಯಾರ್ಥಿಗಳು ಕಠಿಣ ಶ್ರಮದಿಂದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವರು. ದಾಂಪತ್ಯದಲ್ಲಿ ಹೊಂದಾಣಿಕೆ ಹಾಗೂ ಪ್ರೀತಿ ಹೆಚ್ಚಾಗಲಿದೆ. ಹಳೆಯ ಸಾಲ ತೀರಿಸಲು ದಾರಿ ಸುಗಮವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಮಿಥುನ: ಸಹೋದ್ಯೋಗಿಗಳೊಂದಿಗೆ ಇದ್ದ ಅಸಮಾಧಾನ ದೂರವಾಗಿ ಕೆಲಸಗಳು ಸರಾಗವಾಗಲಿವೆ. ಹೊಸ ವ್ಯವಹಾರ ಆರಂಭಿಸಲು ಹಿತೈಷಿಗಳ ಬೆಂಬಲ ದೊರೆಯಲಿದೆ. ಆರ್ಥಿಕವಾಗಿ ಉಳಿತಾಯದತ್ತ ಗಮನ ಹರಿಸುವುದು ಒಳಿತು. ದೂರದ ಪ್ರಯಾಣದಿಂದ ಹೊಸ ಅವಕಾಶಗಳು ಬಾಗಿಲು ತಟ್ಟಲಿವೆ. ಸಂಗಾತಿಯೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಆರೋಗ್ಯ ಉತ್ತಮವಾಗಿರಲಿದೆ.

ಕಟಕ: ನಿರ್ಧಾರ ತೆಗೆದುಕೊಳ್ಳುವಾಗ ಆತುರ ಬೇಡ, ಹಿರಿಯರ ಸಲಹೆ ಪಡೆಯಿರಿ. ಕಚೇರಿಯಲ್ಲಿ ಹೆಚ್ಚುವರಿ ಜವಾಬ್ದಾರಿಗಳು ಹೆಗಲೇರಲಿವೆ. ಆರ್ಥಿಕ ವ್ಯವಹಾರಗಳಲ್ಲಿ ಪಾರದರ್ಶಕತೆ ಮತ್ತು ಎಚ್ಚರಿಕೆ ಅಗತ್ಯ. ಮನೆಯಲ್ಲಿ ಹೊಸ ವಸ್ತುಗಳ ಖರೀದಿ ಸಂಭ್ರಮ ಇರಲಿದೆ. ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆರೋಗ್ಯ ಸುಧಾರಿಸಲಿದೆ.

ಸಿಂಹ: ಸಮಾಜದಲ್ಲಿ ನಿಮ್ಮ ನಾಯಕತ್ವ ಗುಣಕ್ಕೆ ವಿಶೇಷ ಗೌರವ ಲಭಿಸಲಿದೆ. ಉದ್ಯೋಗ ಬದಲಾವಣೆಗೆ ಯತ್ನಿಸುತ್ತಿರುವವರಿಗೆ ಉತ್ತಮ ಕಂಪನಿಗಳಿಂದ ಆಹ್ವಾನ ಬರಲಿದೆ. ಹಳೆಯ ಹೂಡಿಕೆಗಳು ಸೂಕ್ತ ಲಾಭ ನೀಡಲಿವೆ. ಕುಟುಂಬದಲ್ಲಿ ಹಿರಿಯರ ಆರೋಗ್ಯ ಸುಧಾರಿಸಲಿದೆ. ಕ್ರೀಡೆ ಮತ್ತು ಸೃಜನಶೀಲ ರಂಗದವರಿಗೆ ಯಶಸ್ಸು ಸಿಗಲಿದೆ. ಮನಸ್ಸು ಪ್ರಫುಲ್ಲವಾಗಿರುತ್ತದೆ.

ಕನ್ಯಾ: ಹಣಕಾಸಿನ ವಿಷಯದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಷೇರು ಮಾರುಕಟ್ಟೆ ಅಥವಾ ಊಹಾತ್ಮಕ ವ್ಯವಹಾರಗಳಲ್ಲಿ ಜಾಗ್ರತೆ ವಹಿಸಿ. ದಾಂಪತ್ಯದಲ್ಲಿ ಸಣ್ಣಪುಟ್ಟ ಮನಸ್ತಾಪ ಕಂಡರೂ ಕೊನೆಗೆ ಸೌಹಾರ್ದ ಮೂಡಲಿದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಾಗಲಿದೆ. ಧಾರ್ವಿುಕ ಕಾರ್ಯಗಳಲ್ಲಿ ಭಾಗವಹಿಸುವ ಯೋಗವಿದೆ. ಆರೋಗ್ಯದ ಕಡೆಗೆ ಗಮನವಿರಲಿ.

ತುಲಾ: ಅಪೇಕ್ಷಿತ ಉದ್ಯೋಗ ಲಭಿಸುವ ಶುಭ ಸುದ್ದಿ ಸಿಗಲಿದೆ. ಸಂಗಾತಿಯ ಬೆಂಬಲದಿಂದ ಪ್ರಮುಖ ಕಾರ್ಯಗಳು ಸುಗಮವಾಗಿ ನೆರವೇರಲಿವೆ. ಕಾನೂನು ಅಥವಾ ಆಸ್ತಿ ಸಂಬಂಧಿತ ವಿಷಯಗಳಲ್ಲಿ ಅನುಕೂಲಕರ ತಿರುವು ಕಂಡುಬರುವುದು. ಆರ್ಥಿಕವಾಗಿ ಸದೃಢವಾದ ವಾರವಿದು. ವಾರಾಂತ್ಯದಲ್ಲಿ ಬಂಧುಗಳ ಆಗಮನದಿಂದ ಸಂತಸ ಹೆಚ್ಚಾಗಲಿದೆ. ಆರೋಗ್ಯ ಚೆನ್ನಾಗಿರುತ್ತದೆ.

ವೃಶ್ಚಿಕ: ಕೆಲಸದ ಒತ್ತಡ ಹೆಚ್ಚಿದ್ದರೂ ನಿಮ್ಮ ಇಚ್ಛಾಶಕ್ತಿಯಿಂದ ಎಲ್ಲ ಸವಾಲುಗಳನ್ನು ದಿಟ್ಟವಾಗಿ ಎದುರಿಸುವಿರಿ. ವಾಹನ ಚಾಲನೆ ಮತ್ತು ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಹಳೆಯ ಸ್ನೇಹಿತರ ಭೇಟಿಯಿಂದ ಹಳೆಯ ನೆನಪುಗಳು ಮರುಕಳಿಸಲಿವೆ. ಆರ್ಥಿಕವಾಗಿ ಹಂತಹಂತವಾಗಿ ಪ್ರಗತಿ ಕಂಡುಬರಲಿದೆ. ಕುಟುಂಬದ ಸದಸ್ಯರ ಸಹಕಾರ ಸಿಗಲಿದೆ. ಮನಸ್ಸಿಗೆ ನೆಮ್ಮದಿ ದೊರೆಯಲಿದೆ.

ಧನಸ್ಸು: ಉನ್ನತ ವ್ಯಾಸಂಗಕ್ಕೆ ವಿದೇಶ ಅಥವಾ ಪ್ರಮುಖ ಸಂಸ್ಥೆಗಳ ಅವಕಾಶಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ ಸಿಗಲಿದೆ. ಸಮಾಜಸೇವೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ಆಕಸ್ಮಿಕ ಧನಲಾಭದ ಸಾಧ್ಯತೆ ಇದೆ. ಕುಟುಂಬದೊಂದಿಗೆ ದೇವಾಲಯಗಳಿಗೆ ಭೇಟಿ ನೀಡುವ ಯೋಗವಿದೆ. ಹೊಸ ಯೋಜನೆಗಳಿಗೆ ಚಾಲನೆ ನೀಡಲು ಸೂಕ್ತ ಸಮಯ. ಆರೋಗ್ಯ ಉತ್ತಮವಾಗಿರಲಿದೆ.

ಮಕರ: ವೃತ್ತಿ ಮತ್ತು ವ್ಯಾಪಾರದಲ್ಲಿ ಹೊಸ ಮೈಲುಗಲ್ಲು ಸಾಧಿಸುವಿರಿ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಿಂದ ಕ್ಲಿಷ್ಟಕರ ಕೆಲಸಗಳು ಸುಗಮವಾಗಿ ಮುಗಿಯಲಿವೆ. ಆರ್ಥಿಕವಾಗಿ ಆದಾಯ ಹೆಚ್ಚುವ ಮೂಲಗಳು ಗೋಚರಿಸಲಿವೆ. ಮನೆಯಲ್ಲಿ ಶುಭ ಕಾರ್ಯಗಳ ಕುರಿತು ಚರ್ಚೆ ನಡೆಯಲಿದೆ. ದಾಂಪತ್ಯ ಜೀವನ ಮಧುರವಾಗಿರುತ್ತದೆ. ಆತ್ಮವಿಶ್ವಾಸ ವೃದ್ಧಿಸುತ್ತದೆ.

ಕುಂಭ: ನಿಮ್ಮ ವಿಶಿಷ್ಟ ಆಲೋಚನೆಗಳು ಎಲ್ಲರ ಗಮನ ಸೆಳೆಯಲಿವೆ. ಸಾಮಾಜಿಕ ವಲಯದಲ್ಲಿ ಜನಪ್ರಿಯತೆ ಮತ್ತು ಗೌರವ ಹೆಚ್ಚಾಗಲಿದ್ದು ಹಠಾತ್ ಧನಾಗಮದಿಂದ ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ. ಸ್ನೇಹಿತರೊಡನೆ ಪ್ರವಾಸಕ್ಕೆ ತೆರಳುವ ಯೋಗವಿದೆ. ವ್ಯಾಪಾರದಲ್ಲಿ ಹೊಸ ಸಂಪರ್ಕಗಳು ಲಾಭ ತರಲಿವೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ.

ಮೀನ: ಅತಿಯಾದ ಚಿಂತನೆಗಳಿಂದ ದೂರವಿದ್ದು ವರ್ತಮಾನದ ಕಾರ್ಯಗಳ ಮೇಲೆ ಗಮನ ಹರಿಸಿ. ಮಕ್ಕಳ ಸಾಧನೆಯಿಂದ ಹೆಮ್ಮೆ ಹಾಗೂ ಸಂತೋಷವಾಗುತ್ತದೆ. ಅಧ್ಯಾತ್ಮಿಕ ಮತ್ತು ದೈವಾರಾಧನೆಯಲ್ಲಿ ಮನಸ್ಸು ನೆಮ್ಮದಿ ಕಾಣಲಿದೆ. ಆರ್ಥಿಕವಾಗಿ ಸಾಮಾನ್ಯ ಸ್ಥಿತಿ ಇದ್ದರೂ ಅಗತ್ಯ ಕೆಲಸಗಳು ಪೂರ್ಣಗೊಳ್ಳಲಿವೆ. ಕುಟುಂಬದವರ ಬೆಂಬಲ ಸಿಗಲಿದೆ. ದಾಂಪತ್ಯ ಸುಖಮಯವಾಗಿರುತ್ತದೆ.