ಮಕರಕ್ಕೆ ರಾಹು, ಕರ್ಕಾಟಕಕ್ಕೆ ಕೇತು ಪ್ರವೇಶ: ಕೆಲಸದಲ್ಲಿ ಯಶಸ್ಸು, ಆದ್ರೆ ಸಂಸಾರದಲ್ಲಿ ತಳಮಳ? ಈ 6 ವಿಷಯಗಳ ಬಗ್ಗೆ ಇರಲಿ ಎಚ್ಚರ! Rahu Ketu Transit

Representative image
ಸಾಂದರ್ಭಿಕ ಚಿತ್ರ
Published on: 

Rahu Ketu Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ನಿಗೂಢ ಮತ್ತು ಶಕ್ತಿಶಾಲಿ ಗ್ರಹಗಳು ಅಥವಾ ಛಾಯಾ ಗ್ರಹಗಳೆಂದು ಕರೆಯಲ್ಪಡುವ ರಾಹು ಮತ್ತು ಕೇತು ತಮ್ಮ ಪಥವನ್ನು ಬದಲಾಯಿಸಲು ಸಜ್ಜಾಗಿವೆ. ವೈದಿಕ ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, 2026ರ ಡಿಸೆಂಬರ್ 5ರಂದು ರಾಹು ಕುಂಭ ರಾಶಿಯಿಂದ ಮಕರ ರಾಶಿಗೆ, ಹಾಗೂ ಕೇತು ಸಿಂಹ ರಾಶಿಯಿಂದ ಕರ್ಕಾಟಕ ರಾಶಿಗೆ ಕಾಲಿಡಲಿವೆ.

2027ರ ಪೂರ್ತಿ ವರ್ಷ ಮತ್ತು 2028ರ ಜೂನ್ ವರೆಗೆ ಈ ಎರಡು ಗ್ರಹಗಳು ಇದೇ ರಾಶಿಗಳಲ್ಲಿ ಇರಲಿವೆ. ಮಕರ ರಾಶಿ ಕೆಲಸ ಮತ್ತು ಶಿಸ್ತಿನ ಸಂಕೇತವಾದರೆ, ಕರ್ಕಾಟಕ ರಾಶಿ ಭಾವನೆ ಮತ್ತು ಕುಟುಂಬವನ್ನು ಪ್ರತಿನಿಧಿಸುತ್ತದೆ. ಹೀಗಾಗಿ 2027ರಲ್ಲಿ ಒಂದೆಡೆ ವೃತ್ತಿಯಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸುವ ಹಂಬಲವಿದ್ದರೆ, ಇನ್ನೊಂದೆಡೆ ಮನಸ್ಸಿನ ಶಾಂತಿಗಾಗಿ ಹುಡುಕಾಟ ಶುರುವಾಗಲಿದೆ. ಈ ಗ್ರಹಗಳ ಬದಲಾವಣೆ ನಿಮ್ಮ ಜೀವನದ 6 ಪ್ರಮುಖ ಕ್ಷೇತ್ರಗಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

1. ಕೆಲಸದಲ್ಲಿ ಅನಿರೀಕ್ಷಿತ ತಿರುವು

ಮಕರ ರಾಶಿಯ ಅಧಿಪತಿ ಶನಿ, ಇದು ಕಠಿಣ ಪರಿಶ್ರಮವನ್ನು ಬಯಸುತ್ತದೆ. ಇಲ್ಲಿ ರಾಹು ಬಂದು ಕೂರುವುದರಿಂದ ನಿಮ್ಮ ಕೆಲಸದ ವೇಗ ದಿಢೀರ್ ಬದಲಾಗಲಿದೆ. ವಿಶೇಷವಾಗಿ ಮ್ಯಾನೇಜ್‌ಮೆಂಟ್, ಟೆಕ್ನಾಲಜಿ ಕ್ಷೇತ್ರದಲ್ಲಿರುವವರಿಗೆ ಮತ್ತು ದೊಡ್ಡ ಗುರಿ ಇಟ್ಟುಕೊಂಡವರಿಗೆ ಅನಿರೀಕ್ಷಿತ ಅವಕಾಶಗಳು ಹುಡುಕಿಕೊಂಡು ಬರಲಿವೆ. ಕಷ್ಟಪಟ್ಟು ದುಡಿಯಲು ನೀವು ಸಿದ್ಧರಿದ್ದರೆ, 2027 ನಿಮಗೆ ಹೊಸ ಗುರುತು ನೀಡಲಿದೆ.

2. ಹೂಡಿಕೆಯಲ್ಲಿ ಎಚ್ಚರ

2027ರಲ್ಲಿ ದುಡ್ಡು ಮಾಡುವ ಮತ್ತು ಆದಾಯದ ಹೊಸ ದಾರಿಗಳನ್ನು ಹುಡುಕುವ ಆಸೆ ಹೆಚ್ಚಾಗುತ್ತದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ಗಳಿಸುವ ಆಸೆಯೂ ಹುಟ್ಟಬಹುದು. ಆದರೆ ರಾಹು ಗೊಂದಲ ಸೃಷ್ಟಿಸುವ ಗ್ರಹವಾದ್ದರಿಂದ, ಆತುರಕ್ಕೆ ಬಿದ್ದು ರಿಸ್ಕ್ ಇರುವ ಕಡೆ ಹಣ ಹೂಡಬೇಡಿ. ಯೋಚಿಸಿ ಹೆಜ್ಜೆ ಇಟ್ಟರೆ ಮಾತ್ರ ನಿಮ್ಮ ಆರ್ಥಿಕ ಸ್ಥಿತಿ ಭದ್ರವಾಗಿರುತ್ತದೆ.

3. ಕುಟುಂಬ ಮತ್ತು ಮನೆಯ ವಾತಾವರಣ

ರಾಹು ನಿಮ್ಮನ್ನು ಹೊರಗಿನ ಪ್ರಪಂಚ ಗೆಲ್ಲಲು ಓಡಿಸಿದರೆ, ಕರ್ಕಾಟಕ ರಾಶಿಯಲ್ಲಿರುವ ಕೇತು ಮನೆಯ ವಿಚಾರದಲ್ಲಿ ಒಂದು ರೀತಿಯ ಅನಾಸಕ್ತಿ ಮೂಡಿಸಬಹುದು. ಆಫೀಸ್ ಕೆಲಸದ ಒತ್ತಡದಲ್ಲಿ ಮನೆಯ ಜವಾಬ್ದಾರಿಗಳಿಂದ ದೂರವಾಗುತ್ತಿದ್ದೇನೆ ಎಂಬ ಭಾವನೆ ಕಾಡಬಹುದು. ಎಷ್ಟೇ ಬ್ಯುಸಿ ಇದ್ದರೂ ಮನೆಯವರ ಜೊತೆ ಸಮಯ ಕಳೆಯುವುದರಿಂದ ಈ ಅಂತರವನ್ನು ಸರಿಪಡಿಸಿಕೊಳ್ಳಬಹುದು.

Also Read
ರಾವಣನನ್ನು ವೈಭವೀಕರಿಸಿಲ್ಲ, ಜನಕ್ಕೆ ಇಷ್ಟವಾಗಿದ್ದು ಯಶ್ ಸ್ಟೈಲ್ ! ನಮಿತ್ ಮಲ್ಹೋತ್ರಾ ಬಿಗ್ ಸ್ಟೇಟ್‌ಮೆಂಟ್ | Ramayana part 1
Representative image

4. ಸಂಬಂಧ ಮತ್ತು ದಾಂಪತ್ಯ ಜೀವನ

ಸಂಗಾತಿಯಿಂದ ನಿರೀಕ್ಷೆಗಳು ಹೆಚ್ಚಾದಾಗ ಸಂಬಂಧಗಳಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. ಮಕರ-ಕರ್ಕಾಟಕ ರಾಶಿಗಳ ಈ ಸಂಚಾರವು ದಾಂಪತ್ಯದಲ್ಲಿ ಸಣ್ಣ ವಿಚಾರಕ್ಕೂ ಮನಸ್ಸಿಗೆ ನೋವಾಗುವಂತಹ ಪರಿಸ್ಥಿತಿ ತರಬಹುದು. ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡುವ ಬದಲು, ಸಂಗಾತಿಯ ಜೊತೆ ಮನಸ್ಸು ಬಿಚ್ಚಿ ಮಾತನಾಡುವುದು ಒಳ್ಳೆಯದು.

5. ಆರೋಗ್ಯ ಮತ್ತು ಮನಸ್ಸಿನ ನೆಮ್ಮದಿ

ಕೆಲಸದ ಸ್ಥಳದ ಟಾರ್ಗೆಟ್ ಮತ್ತು ಮನೆಯ ಜವಾಬ್ದಾರಿಗಳ ನಡುವೆ ಬ್ಯಾಲೆನ್ಸ್ ಮಾಡುವುದು ಸ್ವಲ್ಪ ಕಷ್ಟವಾಗಬಹುದು. ಇದರಿಂದ ಒತ್ತಡ ಹೆಚ್ಚಾಗಿ ನಿದ್ರಾಹೀನತೆ ಕಾಡಬಹುದು. ದಿನಚರಿಯನ್ನು ಶಿಸ್ತುಬದ್ಧವಾಗಿ ಇಟ್ಟುಕೊಂಡು, ಮನಸ್ಸಿಗೆ ನೆಮ್ಮದಿ ನೀಡುವ ಹವ್ಯಾಸಗಳಿಗೆ ಸ್ವಲ್ಪ ಸಮಯ ಕೊಡುವುದು ಅತಿ ಮುಖ್ಯ.

Also Read
ಶಾರುಖ್-ಗೌರಿ ಮದುವೆ ಶರಿಯಾ ಕಾನೂನು ಒಪ್ಪಲ್ಲ: ಇಸ್ಲಾಂ ಧರ್ಮಗುರು ಇಮಾಮ್ ಉಮರ್ ಇಲ್ಯಾಸಿ ಹೇಳಿದ್ದೇನು? Umer Ahmed Ilyasi
Representative image

6. ಪ್ರಯಾಣ ಮತ್ತು ಆಧ್ಯಾತ್ಮಿಕ ಒಲವು

ಕೇತು ಮನುಷ್ಯನನ್ನು ಹೊರಗಿನ ಗದ್ದಲದಿಂದ ದೂರವಿರಿಸಿ, ಆಂತರಿಕ ಶಾಂತಿಯ ಕಡೆಗೆ ಸೆಳೆಯುತ್ತಾನೆ. ಹೀಗಾಗಿ 2027ರಲ್ಲಿ ಕೆಲಸದ ನಿಮಿತ್ತ ಅಥವಾ ವೈಯಕ್ತಿಕ ಕಾರಣಗಳಿಗೆ ಹೊಸ ಊರುಗಳಿಗೆ ಪ್ರಯಾಣಿಸುವ, ಅಥವಾ ಮನೆ ಬದಲಾಯಿಸುವ ಸಾಧ್ಯತೆ ಇದೆ. ಜೊತೆಗೆ ಯೋಗ, ಧ್ಯಾನ ಮತ್ತು ಆಧ್ಯಾತ್ಮಿಕ ವಿಚಾರಗಳ ಕಡೆಗೆ ನಿಮ್ಮ ಆಸಕ್ತಿ ಹೆಚ್ಚಾಗಲಿದ್ದು, ಇದು ನಿಮಗೆ ಮಾನಸಿಕ ಬಲ ನೀಡಲಿದೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್ ಜವಾಬ್ದಾರರಾಗುವುದಿಲ್ಲ.