

2, 11, 20 ಅಥವಾ 29 ಹುಟ್ಟಿದವರಿಗೆ 2027 ಸುವರ್ಣ ವರ್ಷವಾಗಿ ಪರಿಣಮಿಸಲಿದೆ.
ಚಂದ್ರನ ಕೃಪೆಯಿಂದ ಈ ನಾಲ್ಕು ದಿನಾಂಕಗಳಲ್ಲಿ ಜನಿಸಿದವರಿಗೆ ಮುಟ್ಟಿದ್ದೆಲ್ಲಾ ಚಿನ್ನ.
2027ರಲ್ಲಿ ಬದಲಾಗಲಿದೆ 2, 11, 20 ಅಥವಾ 29 ದಿನಾಂಕದವರ ಹಣೆಬರಹ.
Birth Date Numerology: ಕೆಲವೊಂದು ವರ್ಷಗಳು ಯಾವುದೇ ದೊಡ್ಡ ಪ್ರಯತ್ನವಿಲ್ಲದಿದ್ದರೂ ನಮ್ಮ ಪರವಾಗಿ ಕೆಲಸ ಮಾಡುತ್ತವೆ ಎಂದು ಭಾಸವಾಗುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಜನ್ಮ ಸಂಖ್ಯೆ ಮತ್ತು ಆ ವರ್ಷದ ಸಂಖ್ಯೆ ಒಂದೇ ಆದಾಗ ಇಂತಹ ಅಪರೂಪದ ಅದೃಷ್ಟ ಒಲಿದು ಬರುತ್ತದೆ. 2027ನೇ ಇಸವಿಯಲ್ಲಿ ಇಂತಹದ್ದೊಂದು ವಿಶೇಷ ಯೋಗ 4 ನಿರ್ದಿಷ್ಟ ದಿನಾಂಕಗಳಲ್ಲಿ ಹುಟ್ಟಿದವರಿಗೆ ಸಿಗಲಿದ್ದು, ಇಡೀ ವರ್ಷ ಇವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ.
ಹೌದು, ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಜನ್ಮ ಸಂಖ್ಯೆಯು ಆ ವರ್ಷದ ಸಂಖ್ಯೆಗೆ ಹೊಂದಿಕೆಯಾದಾಗ ಇಂತಹ ಅದೃಷ್ಟ ಒಲಿದು ಬರುತ್ತದೆ. 2027ನೇ ಇಸವಿಯಲ್ಲಿ ಈ ವಿಶೇಷ ಹೊಂದಾಣಿಕೆಯು ಯಾವುದೇ ತಿಂಗಳ 2, 11, 20 ಅಥವಾ 29ನೇ ತಾರೀಖಿನಂದು ಜನಿಸಿದವರಿಗೆ ಸಿಗಲಿದೆ.
ಈ ಅದೃಷ್ಟಕ್ಕೆ ತುಂಬಾ ಕಾರಣಗಳಿವೆ. 2027ರ ಅಂಕಿಗಳನ್ನು ಕೂಡಿಸಿದಾಗ ಅಂದರೆ, 2+0+2+7 11 ಬರುತ್ತದೆ ಮತ್ತು ಅದನ್ನು ಮತ್ತೆ ಕೂಡಿಸಿದಾಗ 2 ಆಗುತ್ತದೆ. ಮೇಲೆ ತಿಳಿಸಿದ ನಾಲ್ಕು ಜನ್ಮ ದಿನಾಂಕಗಳ ಮೊತ್ತವೂ 2 ಆಗಿರುತ್ತದೆ. ಸಂಖ್ಯಾಶಾಸ್ತ್ರಜ್ಞರು ಇದನ್ನು 'ರೆಸೋನೆನ್ಸ್ ವರ್ಷ' ಎಂದು ಕರೆಯುತ್ತಾರೆ. 2027ರಲ್ಲಿ ಈ ನಾಲ್ಕು ದಿನಾಂಕದವರ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
2ನೇ ತಾರೀಖು ಚಂದ್ರನ ಶಕ್ತಿಯ ಅತ್ಯಂತ ಶುದ್ಧ ರೂಪ. ಇವರು ಸೂಕ್ಷ್ಮ ಗುಣದವರು, ಉತ್ತಮ ವೀಕ್ಷಕರು ಮತ್ತು ಜಾಣ್ಮೆಯುಳ್ಳವರಾಗಿರುತ್ತಾರೆ, ಎಷ್ಟೋ ಬಾರಿ ಇವರು ತಮ್ಮ ಸ್ವಂತ ಅಗತ್ಯಗಳನ್ನು ಬದಿಗಿಟ್ಟು ಮೌನವಾಗಿರುತ್ತಾರೆ. ಆದರೆ 2027ರಲ್ಲಿ ಇವರ ಈ ಸೌಮ್ಯ ಸ್ವಭಾವವೇ ದೊಡ್ಡ ಶಕ್ತಿಯಾಗಲಿದೆ. ಇವರಿಗಿರುವ ಒಂದೇ ಸವಾಲೆಂದರೆ ಮನಸ್ಸಿನ ಮಾತನ್ನು ಮುಕ್ತವಾಗಿ ಹೇಳುವುದು. ತಮಗೆ ಏನು ಬೇಕು ಎಂಬುದನ್ನು ಸ್ಪಷ್ಟವಾಗಿ ಹೇಳುವ 2ನೇ ತಾರೀಖಿನವರಿಗೆ ಈ ವರ್ಷ ಖಂಡಿತವಾಗಿಯೂ ಅದು ಸಿಗಲಿದೆ.
11ನೇ ತಾರೀಖಿನಂದು ಜನಿಸಿದವರು ವರ್ಷದ ಮಾಸ್ಟರ್ ಸಂಖ್ಯೆಯಾದ 11ನ್ನು ನೇರವಾಗಿ ಹಂಚಿಕೊಳ್ಳುತ್ತಾರೆ. ಇದು ಬಹಳ ಅಪರೂಪದ ಕಾಕತಾಳೀಯ. 2027ರಲ್ಲಿ ಇವರ ಅಂತಃಪ್ರಜ್ಞೆ ಊಹೆಗೂ ನಿಲುಕದ ಮಟ್ಟಕ್ಕೆ ಚುರುಕಾಗಲಿದೆ. ಈ ವರ್ಷ ಇವರು ಬೋಧನೆ, ಹೀಲಿಂಗ್, ಬರವಣಿಗೆ ಅಥವಾ ಆಧ್ಯಾತ್ಮಿಕ ಕೆಲಸಗಳತ್ತ ಹೆಚ್ಚು ಆಕರ್ಷಿತರಾಗಬಹುದು. ನಿಮ್ಮ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳಲು ಸರಿಯಾದ ನಿದ್ರೆ, ಶಾಂತ ದಿನಚರಿ ಮತ್ತು ಮೊಬೈಲ್/ಸ್ಕ್ರೀನ್‌ಗಳಿಂದ ದೂರವಿರುವುದು ಬಹಳ ಮುಖ್ಯ.
2ರ ಪಕ್ಕದಲ್ಲಿರುವ ಸೊನ್ನೆಯು (0) ಚಂದ್ರನ ಗುಣಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. 20ನೇ ತಾರೀಖಿನಂದು ಜನಿಸಿದವರು ತಾಳ್ಮೆಯುಳ್ಳವರು, ರಾಜತಾಂತ್ರಿಕರು ಮತ್ತು ಅತ್ಯಂತ ನಿಷ್ಠಾವಂತರಾಗಿರುತ್ತಾರೆ. ಇವರು ಸಾಮಾನ್ಯವಾಗಿ ಒಂದು ತಂಡ ಅಥವಾ ಕುಟುಂಬವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಶಕ್ತಿಯಾಗಿರುತ್ತಾರೆ. ಇವರಿಗೆ 2027ನೇ ವರ್ಷವು ಬಹಳ ದಿನಗಳಿಂದ ಬಾಕಿ ಉಳಿದಿದ್ದ ಮನ್ನಣೆ ಮತ್ತು ಗೌರವವನ್ನು ತಂದುಕೊಡಲಿದೆ. ನಂಬಿಕೆಯ ಆಧಾರದ ಮೇಲೆ ಉನ್ನತ ಹುದ್ದೆ, ಕುಟುಂಬದ ವ್ಯವಹಾರದಲ್ಲಿ ಯಶಸ್ವಿ ನಿರ್ಧಾರ ಅಥವಾ ಸಂಗಾತಿಯೊಂದಿಗೆ ಸೇರಿ ಹೊಸ ಮನೆ ಖರೀದಿಸುವ ಯೋಗವಿದೆ. ವರ್ಷಗಳಿಂದ ಇವರು ಕಟ್ಟಿಕೊಂಡು ಬಂದಿರುವ ಉತ್ತಮ ಸಂಬಂಧಗಳಿಂದಲೇ ಇವರ ಯಶಸ್ಸು ಅರಳಲಿದೆ.
29ನೇ ತಾರೀಖನ್ನು ಕೂಡಿಸಿದಾಗ 11 ಬಂದು ನಂತರ 2ಕ್ಕೆ ಇಳಿಯುತ್ತದೆ. ಹೀಗಾಗಿ ಇವರಲ್ಲೂ ಮಾಸ್ಟರ್ ಸಂಖ್ಯೆಯ ಕಂಪನವಿರುತ್ತದೆ. ಆದರೆ ಈ ದಿನಾಂಕದಲ್ಲಿರುವ 9 ಎಂಬ ಅಂಕಿಯು ಮಂಗಳ ಗ್ರಹದ ಪ್ರಭಾವವನ್ನು ತರುತ್ತದೆ. ಇದು ಇತರ 2ನೇ ಸಂಖ್ಯೆಯವರಿಗಿಂತ ಇವರಿಗೆ ಹೆಚ್ಚಿನ ಉತ್ಸಾಹ ಮತ್ತು ಭಾವನಾತ್ಮಕ ತೀವ್ರತೆಯನ್ನು ನೀಡುತ್ತದೆ. 2027ರಲ್ಲಿ 29ನೇ ತಾರೀಖಿನವರು ತಮ್ಮ ಬಲವಾದ ಭಾವನೆಗಳನ್ನು ಸೃಜನಶೀಲ ಕೆಲಸ, ಸಾಮಾಜಿಕ ಕಾರ್ಯಗಳು ಅಥವಾ ನಾಯಕತ್ವದ ಪಾತ್ರಗಳಲ್ಲಿ ಉತ್ತಮ ಫಲಿತಾಂಶಗಳಾಗಿ ಪರಿವರ್ತಿಸಬಹುದು. ಇವರಿಗಿರುವ ಮುಖ್ಯ ಅಪಾಯವೆಂದರೆ ನೋವಾದಾಗ ಅತಿ ವೇಗವಾಗಿ ಪ್ರತಿಕ್ರಿಯಿಸುವುದು. ಯಾವುದೇ ಕಟುವಾದ ಸಂದೇಶಕ್ಕೆ ತಕ್ಷಣ ಉತ್ತರಿಸುವ ಮೊದಲು ಒಂದೆರಡು ಕ್ಷಣ ಯೋಚಿಸಿ ಮೌನವಾಗಿದ್ದರೆ, ಮುಂದಾಗುವ ದೊಡ್ಡ ಹಾನಿಯನ್ನು ತಪ್ಪಿಸಬಹುದು, (ಏಜೆನ್ಸೀಸ್).