ನೀವು ಹುಟ್ಟಿದ ದಿನಾಂಕ ಯಾವುದು?; ನಿಮ್ಮಲ್ಲಿರುವ ಯಾರಿಗೂ ತಿಳಿಯದ ಈ ವಿಶೇಷ ಗುಣ ತಿಳಿದುಕೊಳ್ಳಿ..Birth Number Personality

Unique personality traits associated with your birth number
Unique personality traits associated with your birth number
Published on

ಪ್ರಮುಖ ಮುಖ್ಯಾಂಶಗಳು

  • ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರದ ಮಹತ್ವವೇನು?
  • 6,7 ಮತ್ತು11 ನೇ ತಾರೀಖಿನಲ್ಲಿ ಜನಿಸಿದವರ ಸ್ವಭಾವ, ವ್ಯಕ್ತಿತ್ವ ಹೀಗಿರುತ್ತದೆ.
ಸಂಖ್ಯಾಶಾಸ್ತ್ರದ ಪ್ರಕಾರ, 2,6,7 ಮತ್ತು 11ನೇ ತಾರೀಖು ಜನಿಸಿದವರು ವಿಶೇಷ ಸ್ವಭಾವವನ್ನು ಹೊಂದಿದವರು ಎಂದು ಹೇಳಲಾಗುತ್ತದೆ.  

ಯಾವ ದಿನಾಂಕ ಜನಿಸಿದವರು ಅದೃಷ್ಟವಂತರು?

ಯಾವುದೇ ತಿಂಗಳಾಗಲಿ ಅದರ ಎರಡನೇ ದಿನ ಅಂದರೆ 2ನೇ ತಾರೀಖು ಜನಿಸುವವರು ಅದೃಷ್ಟವಂತರು. ಯಾರನ್ನೇ ಪ್ರೀತಿ ಮಾಡಿದರು ನಿಷ್ಠಾವಂತರಾಗಿ ಇರುತ್ತಾರೆ. ಸೂಕ್ಷ್ಮ ಸ್ವಭಾವದವರು. ಯಾವುದೇ ವಿಚಾರವನ್ನಾಗಲಿ ಆಳವಾಗಿ ಯೋಚಿಸುತ್ತಾರೆ. ಅವರು ತಾವಷ್ಟೇ ಅಲ್ಲದೆ ತಮ್ಮ ಸುತ್ತಮುತ್ತ ಇರುವ ಜನರು ಸಂತೋಷವಾಗಿರಬೇಕು ಎಂದು ಬಯಸುವ ವ್ಯಕ್ತಿತ್ವದವರು ಎಂದು ಸಂಖ್ಯಾ ಶಾಸ್ತ್ರ ಹೇಳುತ್ತದೆ. 

ನೀವು ಹುಟ್ಟಿದ್ದು ಈ ದಿನವಾ?

ಯಾವುದೇ ತಿಂಗಳ ಆರನೇ ತಾರಿಖು ಹುಟ್ಟಿದವರು ಬಹಳ  ಪ್ರೀತಿಸುವ ವ್ಯಕ್ತಿ. ಎಲ್ಲರೊಂದಿಗೂ ಭಾವನಾತ್ಮಕವಾಗಿ ಕನೆಕ್ಟ್​ ಆಗುತ್ತಾರೆ.  ಯಾರೇ ಆಗಲಿ, ವ್ಯಕ್ತಿ ಹೇಗೆ ಇರಲಿ ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಅವರೊಂದಿಗೆ ಹೊಂದಿಕೊಂಡು ಹೋಗುವ ಸ್ವಭಾವ ಅವರಿಗಿದೆ. 

7ನೇ ತಾರೀಖು ಹುಟ್ಟಿದವರ ಸ್ವಭಾವ ಹೀಗಾ?

ತಿಂಗಳ 7ನೇ ತಾರೀಖಿನಂದು ಭೂಮಿಗೆ ಕಾಲಿಟ್ಟ ಮಕ್ಕಳು ಬಹಳ ವಾಗ್ಮಿಗಳು. ಅವರಿಗೆ ಮಾತನಾಡುವುದೇ ಕೆಲಸ. ಇದರಲ್ಲೇ ಒತ್ತಡವನ್ನು ಹೊರಹಾಕುತ್ತಾರೆ. ಯಾರನ್ನು ಸುಲಭವಾಗಿ ನಂಬೋದಿಲ್ಲ. ಅಕಸ್ಮಾತ್​ ನಂಬಿದರೇ ಬಿಡೋದಿಲ್ಲ. ಅವರು ತಮ್ಮ ಸುತ್ತಮುತ್ತಲಿನ ಜನ ಹಾಗೂ ತಾವು ಪ್ರೀತಿಸುವವರನ್ನು ಹೆಚ್ಚಾಗಿ ಪ್ರೀತಿಸುತ್ತಾರೆ. 

11ರಂದು ಜನಿಸಿದವರ ವ್ಯಕ್ತಿತ್ವ ಹೀಗಿರತ್ತೆ

11ನೇ ತಾರೀಖಿನಂದು ಜನಿಸಿದ ವ್ಯಕ್ತಿಗಳ ಭಾವನಾತ್ಮಕವುಳ್ಳವರು. ಯಾವುದೇ ವಿಚಾರವಾಗಲಿ ಬೇಗನೇ ಆತಂಕಕ್ಕೆ ಒಳಗಾಗುತ್ತಾರೆ. ಯಾವಾಗಲು ಉನ್ನತ ಮಟ್ಟದಲ್ಲಿಯೇ ಇರಲು ಬಯಸುತ್ತಾರೆ.  ಎಲ್ಲರೊಂದಿಗೂ ಹೊಂದಿಕೊಂಡು ಜೀವನ ನಡೆಸುವ ಸ್ವಭಾವ ಇವರಿಗೆ ಇದೆ. ಒಮ್ಮೆ ಅವರನ್ನು ನಂಬಿ ಜೊತೆಯಾದವರನ್ನು ಎಂದಿಗೂ ಬಿಟ್ಟುಕೊಡೋದಿಲ್ಲ. ಎಲ್ಲರೊಂದಿಗೂ ಸಂತೋಷವಾಗಿ ಇರಲು ಬಯಸುತ್ತಾರೆ, (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net