

ಮುಖ್ಯದ್ವಾರದ ಬಳಿ ಕನ್ನಡಿ ಇಟ್ಟು ಆರ್ಥಿಕವಾಗಿ ಸಮಸ್ಯೆ ಮಾಡಿಕೊಳ್ಳಬೇಡಿ
ಕನ್ನಡಿಯನ್ನು ಊಟದ ಕೋಣೆಯಲ್ಲಿ ಇಡುವುದು ಮಂಗಳಕರ.
ಮಲಗುವ ಮಂಚದ ಮುಂದೆ ಅಥವಾ ಶೌಚಾಲಯ ಕಾಣುವಂತೆ ಕನ್ನಡಿ ಇಡುವುದನ್ನು ತಪ್ಪಿಸಿ
Feng shui mirror placement rules: ಮುಖ್ಯದ್ವಾರದ ನೇರ ಎದುರು ಕನ್ನಡಿ ಇಡುವುದು ಶುಭವಲ್ಲ. ಚಪ್ಪಲಿ ಇಡುವುದು ಸೇರಿದಂತೆ ಬೇಡದ ವಸ್ತುಗಳನ್ನು ಕಬೋರ್ಡ್ನಲ್ಲಿಟ್ಟು ಅಸ್ತವ್ಯಸ್ತವಾಗಿಟ್ಟುಕೊಳ್ಳುವುದು ಪ್ರಾಚೀನ ಚೀನೀ ತತ್ವಶಾಸ್ತ್ರದ ಫೆಂಗ್ ಶೂಯಿ ಪ್ರಕಾರ ಸರಿಯಾದ ವಿಧಾನವಲ್ಲ. ಮನೆಯ ಮುಖ್ಯದ್ವಾರವು ಇದು ಧನಾತ್ಮಕ ಶಕ್ತಿ, ಅವಕಾಶಗಳು ಮತ್ತು ಸಮೃದ್ಧಿ ಮನೆಗೆ ಪ್ರವೇಶಿಸುವ ಪ್ರಮುಖ ದ್ವಾರವಾಗಿದೆ. ಈ ಬಾಗಿಲಿಗೆ ಮೊದಲು ಎದುರಾಗುವ ವಸ್ತುಗಳು ಮನೆಯೊಳಗೆ ಶಕ್ತಿ ಹೇಗೆ ಸಂಚರಿಸಬೇಕು ಎಂಬುದನ್ನು ನಿರ್ಧರಿಸುತ್ತವೆ. ಹೀಗಾಗಿ ಮುಖಬಾಗಿಲ ಬಳಿ ಅಸ್ತವ್ಯಸ್ತವಾದ ವಸ್ತುಗಳಿದ್ದರೆ ಶಕ್ತಿಯ ಹರಿವು ನಿಧಾನವಾಗುತ್ತದೆ ಎನ್ನುವುದು ನಂಬಿಕೆ.
ಬಾಗಿಲ ಬಳಿ ಕನ್ನಡಿ ಇಟ್ಟರೆ ಇದು ನಿಮ್ಮ ಮನೆಗೆ ಬರುವ ಸಕರಾತ್ಮಕ ಹಾಗೂ ಧನಾತ್ಮಕ ಶಕ್ತಿಯನ್ನು, ಆರ್ಥಿಕ ಹರಿವನ್ನು ಹಿಂದಕ್ಕೆ ಕಳಿಸುತ್ತದೆ ಎಂದು ನಂಬಲಾಗಿದೆ. ಕನ್ನಡಿಗಳು ಪ್ರತಿಫಲಿಸುವ ಕೆಲಸ ಮಾಡುತ್ತವೆ. ಮುಖಬಾಗಿಲಿಗೆ ನೇರವಾಗಿ ಎದುರಾಗಿ ಕನ್ನಡಿ ಇದ್ದರೆ, ಅದು ಒಳಬರುವ ಒಳ್ಳೆಯ ಶಕ್ತಿಯನ್ನು ನೆಲೆಗೊಳ್ಳಲು ಬಿಡದೆ ತಕ್ಷಣವೇ ಹೊರಗೆ ತಳ್ಳುತ್ತದೆ ಎಂದು ಫೆಂಗ್ ಶೂಯಿ ತಜ್ಞರು ಹೇಳುತ್ತಾರೆ
ಹಣ ಬಂದು ಕೂಡಲೇ ಖಾಲಿಯಾಗುವುದು. ಹೊಸ ಅವಕಾಶಗಳು ಬಂದೂ ಕೈತಪ್ಪಿ ಹೋಗುವ ಅನುಭವ ಉಂಟಾಗುತ್ತದೆ. ಆದರೆ ಒಂದು ನೆನಪಿರಲಿ ಕನ್ನಡಿಯ ಎದುರಿನ ದೃಶ್ಯವು ಆಹ್ಲಾದಕರವಾಗಿದ್ದರೆ ಸರಿ. ಆದರೆ ಇದು ಕೊಳಕು ಅಥವಾ ಅಸ್ತವ್ಯಸ್ತತೆಯನ್ನು ದ್ವಿಗುಣಗೊಳಿಸುತ್ತದೆ ಎಂಬುದನ್ನು ಮರೆಯಬಾರದು.
ಬಾಗಿಲಿಗೆ ಲಂಬವಾಗಿರುವ ಗೋಡೆಯ ಮೇಲೆ ಕನ್ನಡಿ ಹಾಕಿ. ಇದರಿಂದ ಮನೆಯಿಂದ ಹೊರಡುವಾಗ ನಿಮ್ಮ ನೋಟವನ್ನು ನೋಡಿಕೊಳ್ಳಲು ಅನುಕೂಲವಾಗುತ್ತದೆ ಮತ್ತು ಶಕ್ತಿಯನ್ನು ಹಿಂದಕ್ಕೆ ದೂಡುವ ಬದಲು ಮನೆಯ ಒಳಭಾಗಕ್ಕೆ ಮಾರ್ಗದರ್ಶನ ಮಾಡುತ್ತದೆ.
ಊಟದ ಮೇಜನ್ನು ಪ್ರತಿಫಲಿಸುವಂತೆ ಕನ್ನಡಿ ಇಡುವುದು ತುಂಬಾ ಒಳ್ಳೆಯದು. ಇದು ಮನೆಯಲ್ಲಿ ಆಹಾರ ಮತ್ತು ಸಮೃದ್ಧಿಯನ್ನು ಸಾಂಕೇತಿಕವಾಗಿ ದ್ವಿಗುಣಗೊಳಿಸುತ್ತದೆ.
ಉದ್ಯಾನವನದ ನೋಟವಿರುವ ಕಿಟಕಿ ಅಥವಾ ಸುಂದರವಾದ ಕಲಾಕೃತಿಯು ಕನ್ನಡಿಯಲ್ಲಿ ಪ್ರತಿಫಲಿಸುವಂತಿದ್ದರೆ ಅದು ಮನೆಗೆ ಒಳ್ಳೆಯ ಶಕ್ತಿಯನ್ನು ತರುತ್ತದೆ.
ಮಲಗುವ ಹಾಸಿಗೆಯ ಬಳಿ ಕನ್ನಡಿ ಇಡಬೇಡಿ ಇದು ನಿದ್ರೆ ಮತ್ತು ಸಂಬಂಧಗಳಿಗೆ ತೊಂದರೆ ಉಂಟುಮಾಡುತ್ತದೆ.
ಅಸ್ತವ್ಯಸ್ತವಾಗಿರುವ ಮೂಲೆಗಳು ಅಥವಾ ಕ್ಯಾಬಿನೆಟ್‌ನ ಚೂಪಾದ ಅಂಚುಗಳು ಕಾಣುವಂತೆ ಕನ್ನಡಿ ಇಡಬೇಡಿ.ಬಿರುಕುಬಿಟ್ಟ ಅಥವಾ ಮಸುಕಾದ ಕನ್ನಡಿಯನ್ನು ತಕ್ಷಣ ಬದಲಾಯಿಸಿ, (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.