

ಅಕ್ಟೋಬರ್ 20ರವರೆಗಿನ ನವರಾತ್ರಿಯಲ್ಲಿ ಚಿನ್ನ, ವಾಹನ ಮತ್ತು ಆಸ್ತಿ ಖರೀದಿಗೆ ಶುಭ ದಿನ
ಅಕ್ಟೋಬರ್ 18 , ಅಕ್ಟೋಬರ್ 19 (ಸೋಮವಾರ) ಅತ್ಯುತ್ತಮ ದಿನಗಳು ಎಂದು ಪರಿಗಣಿಸಲಾಗಿದೆ.
ಅಕ್ಟೋಬರ್ 18ರ ಮಧ್ಯಾಹ್ನದ ನಂತರ ಚಿನ್ನ ಖರೀದಿಗೆ ಅತ್ಯುತ್ತಮ ದಿನ ಎಂದು ಪರಿಗಣಿಸಲಾಗಿದೆ.
Navratri 2026 Auspicious Days For Purchase: ಕಾಲೇಜಿಗೆ ಹೋಗುವ ಮಗನಿಗೆ ಹೊಸ ಬೈಕ್, ಮಗಳ ಭವಿಷ್ಯಕ್ಕಾಗಿ ಚಿನ್ನ, ಆಸ್ತಿ, ಫ್ಲ್ಯಾಟ್ ಖರೀದಿಗೆ ಹಲವು ಕನಸನ್ನು ಹೊತ್ತಿರುತ್ತಾರೆ. ಇದಕ್ಕೆ ಒಳ್ಳೆ ದಿನ, ಮುಹೂರ್ತಕ್ಕಾಗಿ ಕಾಯುತ್ತಿರುತ್ತಾರೆ. ಇನ್ನು ಕೆಲವರು ನವರಾತ್ರಿ ದಿನವೇ ಖರೀದಿ ಮಾಡಬೇಕು ಎನ್ನುವ ಆಶಯ ಹೊಂದಿರಯತ್ತಾರೆ.
ಆದರೆ ನವರಾತ್ರಿಯ ಪ್ರತಿಯೊಂದು ದಿನವೂ ಅತ್ಯುತ್ತಮ ಮಹೂರ್ತ ಹೊಂದಿರೋದಿಲ್ಲ. ಪಂಚಾಂಗ ಯೋಗಗಳು, ವಾರದ ದಿನಗಳು ಮತ್ತು ನಕ್ಷತ್ರಗಳು ಇದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅದರಲ್ಲೂ ಈ ವರ್ಷ 'ಶುಕ್ರ ವಕ್ರಿ' ಇರುವ ಕಾರಣ ಕೆಲವು ಖರೀದಿಗಳ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಅವಶ್ಯಕ. ಅಕ್ಟೋಬರ್ 20, 2026 ರವರೆಗಿನ ದಿನಗಳಲ್ಲಿ ಖರೀದಿಗೆ ಅತ್ಯಂತ ಒಳ್ಳೆಯ ದಿನ ಯಾವುದು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ.
ಜ್ಯೋತಿಷ್ಯ ನಂಬಿಕೆ ಪ್ರಕಾರ ನಿರ್ದಿಷ್ಟ ನಕ್ಷತ್ರವು ನಿರ್ದಿಷ್ಟ ವಾರದ ದಿನದಂದು ಬಂದಾಗ 'ಸರ್ವಾರ್ಥಸಿದ್ಧಿ ಯೋಗ' ರೂಪುಗೊಳ್ಳುತ್ತದೆ. ಇದರ ಹೆಸರೇ ಸೂಚಿಸುವಂತೆ ಇದು 'ಎಲ್ಲಾ ಉದ್ದೇಶಗಳನ್ನು ಈಡೇರಿಸುವ ಯೋಗ ಎಂದು ಅರ್ಥ. ಹೊಸ ವಸ್ತುಗಳ ಖರೀದಿ, ಬುಕಿಂಗ್ ಅಥವಾ ಹೊಸ ಮುಂಚೆಯೇ ಹಣ ಪಾವತಿ ಮಾಡಲು ಪಂಚಾಂಗದಲ್ಲಿ ಇದು ಅತ್ಯಂತ ನಂಬಿಕಾರ್ಹ ಸಮಯವಾಗಿದೆ.
ನವರಾತ್ರಿ 2026 ರ ಅವಧಿಯಲ್ಲಿ 'ಸರ್ವಾರ್ಥಸಿದ್ಧಿ ಯೋಗ' ಮೂರು ಬಾರಿ ರೂಪುಗೊಳ್ಳುತ್ತದೆ.
ಭಾನುವಾರ, ಅಕ್ಟೋಬರ್ 18: ಮಧ್ಯಾಹ್ನ 12:49 ರಿಂದ ಅಕ್ಟೋಬರ್ 19ರ ಮುಂಜಾನೆ 6:24 ರವರೆಗೆ (ಉತ್ತರಾಷಾಢ ನಕ್ಷತ್ರ)
ಸೋಮವಾರ, ಅಕ್ಟೋಬರ್ 19: ಮಧ್ಯಾಹ್ನ 3:38 ರಿಂದ ಅಕ್ಟೋಬರ್ 20ರ ಮುಂಜಾನೆ 6:25 ರವರೆಗೆ (ಶ್ರವಣ ನಕ್ಷತ್ರ)
ಅಕ್ಟೋಬರ್ 20 ರಂದು ಬರುವ ವಿಜಯದಶಮಿ (ದಸರಾ) ಯಾವುದೇ ಪ್ರತ್ಯೇಕ ಶುಭ ಮುಹೂರ್ತದ ಅಗತ್ಯವಿಲ್ಲದ 'ಅಭೂತ ಮುಹೂರ್ತ'.
ವೈದಿಕ ಜ್ಯೋತಿಷ್ಯ ಪ್ರಕಾರ, ಚಿನ್ನ ಗುರು ಮತ್ತು ಸೂರ್ಯ ಗ್ರಹಗಳೊಂದಿಗೆ ಸಂಬಂಧ ಹೊಂದಿದ್ದು, ನವರಾತ್ರಿ ಪೂರ್ತಿ ಗುರು ಕರ್ಕಾಟಕ ರಾಶಿಯಲ್ಲಿ ಉಚ್ಛ ಸ್ಥಿತಿಯಲ್ಲಿರುವುದರಿಂದ ಇದು ಮಹತ್ವದ್ದಾಗಿದೆ.
ಭಾನುವಾರ, ಅಕ್ಟೋಬರ್ 18 (ಮಧ್ಯಾಹ್ನ 12:49 ರ ನಂತರ): ಇದು ಸೂರ್ಯನವಾರವಾಗಿದ್ದು, ಸರ್ವಾರ್ಥಸಿದ್ಧಿ ಯೋಗವಿದೆ ಮತ್ತು ಸೂರ್ಯನಿಂದ ಆಳಲ್ಪಡುವ ಉತ್ತರಾಷಾಢ ನಕ್ಷತ್ರವಿದೆ. ಅಂದು ಮಧ್ಯಾಹ್ನ ಅಷ್ಟಮಿ ತಿಥಿಯೂ ಇರುವುದರಿಂದ ಚಿನ್ನ ಖರೀದಿ ಮಾಡಲು ಇದು ಯೋಗ್ಯ ದಿನ ಎಂದು ಪರಿಗಣಿಸಲಾಗಿದೆ.
ಅಕ್ಟೋಬರ್ 20: ದಸರಾ, ಇದು ಸಾಂಪ್ರದಾಯಿಕ ಮೆಚ್ಚಿನ ದಿನವಾಗಿದೆ. ಸಾಧ್ಯವಾದರೆ ದೆಹಲಿ ಸಮಯದಂತೆ ಮಧ್ಯಾಹ್ನ 1:59 ರಿಂದ 2:45 ರವರೆಗಿನ ವಿಜಯ ಮುಹೂರ್ತದಲ್ಲಿ ಖರೀದಿಸಿ. ಈ ದಿನ ಯಾವುದೇ ಶುಭ ಚಟುವಟಿಕೆ, ಹೊಸ ಉದ್ಯಮ ಆರಂಭಿಸುವುದು ಮಂಗಳಕರ ಎನ್ನಲಾಗಿದೆ.
ವೈದಿಕ ಜ್ಯೋತಿಷ್ಯದಲ್ಲಿ ವಾಹನಗಳು ಶುಕ್ರನ ಆಧಿಪತ್ಯಕ್ಕೆ ಸೇರಿವೆ. ನವರಾತ್ರಿ ಪೂರ್ತಿ ಶುಕ್ರನು ವಕ್ರಿಯ (ಹಿಮ್ಮುಖ) ಸ್ಥಿತಿಯಲ್ಲಿರುವುದರಿಂದ, ನವೆಂಬರ್ ಮಧ್ಯದವರೆಗೆ ಹೊಸ ಕಾರು ಅಥವಾ ಬೈಕ್ ಡೆಲಿವರಿ ಪಡೆಯುವುದನ್ನು ತಪ್ಪಿಸುವುದು ಒಳ್ಳೆಯದು ಎಂದು ಸಲಹೆ ನೀಡಲಾಗುತ್ತದೆ. ಆದರೆ ಹಬ್ಬದ ರಿಯಾಯಿತಿಗಳು ಲಭ್ಯವಿರುವುದರಿಂದ ಅನೇಕ ಕುಟುಂಬಗಳಿಗೆ ಕಾಯಲು ಸಾಧ್ಯವಾಗುವುದಿಲ್ಲ.
ಸೋಮವಾರ, ಅಕ್ಟೋಬರ್ 19 (ಮಧ್ಯಾಹ್ನ 3:38 ರ ನಂತರ): ಇದು ಅತ್ಯುತ್ತಮ ಆಯ್ಕೆಯಾಗಿದೆ. ಸರ್ವಾರ್ಥಸಿದ್ಧಿ ಯೋಗ ಸಕ್ರಿಯವಾಗಿರುತ್ತದೆ ಮತ್ತು ಶ್ರವಣ ನಕ್ಷತ್ರವು ಪ್ರಯಾಣ ಹಾಗೂ ವಾಹನಗಳಿಗೆ ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ.
ದಸರಾ, ಅಕ್ಟೋಬರ್ 20: ಇದು ಮತ್ತೊಂದು ಆಯ್ಕೆಯಾಗಿದ್ದು, ಅಭಿಜತ್ ಮುಹೂರ್ತದ ದಿನಗಳು ಹೆಚ್ಚಿನ ಗ್ರಹಗಳ ದೋಷಗಳನ್ನು ಮೀರಿ ನಿಲ್ಲುತ್ತವೆ ಎಂದು ನಂಬಲಾಗಿದೆ.
ಭೂಮಿ ಮತ್ತು ಆಸ್ತಿಯು ಕುಜ ಮತ್ತು ಶನಿಗೆ ಸಂಬಂಧಿಸಿವೆ. ಜನ್ಮ ಕುಂಡಲಿಯ ನಾಲ್ಕನೇ ಮನೆಯು ಮನೆ ಮತ್ತು ರಿಯಲ್ ಎಸ್ಟೇಟ್ ಅನ್ನು ಸೂಚಿಸುತ್ತದೆ.
ಭಾನುವಾರ, ಅಕ್ಟೋಬರ್ 18 (ಮಧ್ಯಾಹ್ನ 12:49 ರ ನಂತರ): ಇದು ವಿಶೇಷವಾಗಿ ನೋಂದಣಿ ಅಥವಾ ಕಾನೂನು ದಾಖಲೆಗಳಿಗೆ ಉತ್ತಮವಾಗಿದೆ. ಸೂರ್ಯನು ಸರ್ಕಾರಿ ಮತ್ತು ಅಧಿಕೃತ ವಿಷಯಗಳನ್ನು ನಿಯಂತ್ರಿಸುತ್ತಾನೆ, ಮತ್ತು ಉತ್ತರಾಷಾಢ ನಕ್ಷತ್ರವು ಶಾಶ್ವತ ಫಲಗಳಿಗೆ ಹೆಸರುವಾಸಿಯಾಗಿದೆ.
ಅ.20 ದಸರಾ ಹಬ್ಬನೀವು ಈಗಾಗಲೇ ಹೊಂದಿರುವ ಜಮೀನಿಗೆ ಮುಂಗಡ ಹಣ ನೀಡಲು ಅಥವಾ ಭೂಮಿ ಪೂಜೆ ಮಾಡಲು ಇದು ಅತ್ಯಂತ ಸೂಕ್ತವಾಗಿದೆ.
ನೀವು ಆಯ್ಕೆ ಮಾಡುವ ಯಾವುದೇ ದಿನದಲ್ಲಿ ರಾಹು ಕಾಲವನ್ನು ತಪ್ಪಿಸಿ. ನವರಾತ್ರಿಯೇ ಸ್ವತಃ ಮಂಗಳಕರವಾದುದು. ಯಾವುದೇ ಮುಹೂರ್ತವು ನಿಮ್ಮ ಬಜೆಟ್ಗೆ ಮೀರಿದ ತರಾತುರಿಯ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಿಕೊಳ್ಳಬೇಡಿ, (ಏಜೆನ್ಸೀಸ್).