

ಮನೆಯಲ್ಲಿ ಪೊರಕೆಯನ್ನು ಯಾವ ದಿಕ್ಕು, ಜಾಗದಲ್ಲಿಡಬೇಕು?
ಪೊರಕೆಯನ್ನು ಯಾವದ ದಿನ ಖರೀದಿ ಮಾಡಬೇಕು, ಎಂದು ಬೇಡ?
ಲಕ್ಷ್ಮಿ ಕೃಪೆಗಾಗಿ ಪೊರಕೆ ವಿಚಾರದಲ್ಲಿ ಈ ತಪ್ಪು ಮಾಡಲೇ ಬೇಡಿ
Broom Placement Vastu Tips: ಮನೆಯಲ್ಲಿ ಸಾಮಾನ್ಯವಾಗಿ ಹಿರಿಯರಿದ್ದರೆ ಪೊರಕೆ ಬಗ್ಗೆ ನಾನಾ ನಿಯಮವನ್ನು ಉಲ್ಲೇಖಿಸುತ್ತಾರೆ. ಪೊರಕೆ ಲಕ್ಷ್ಮಿ ಸಮಾನ ಹಾಗೆ ನಿಲ್ಲಿಸಬೇಡ, ಆ ಮೂಲೆಯಲ್ಲಿಡಬೇಡ. ಪೊರಕೆ ಹೀಗಿಡಬೇಕು ಎನ್ನುವುದನ್ನು ನಾವು ಕೇಳಿಯೇ ಇದ್ದೇವೆ. ಅದರಂತೆ ಜ್ಯೋತಿಷ್ಯದಲ್ಲಿ ಹೆಚ್ಚಾಗಿ ನಂಬುವ ವಾಸ್ತು ಶಾಸ್ತ್ರದ ಪ್ರಕಾರ ಪೊರಕೆ ಇಡುವ ಸ್ಥಳವು ಹೆಚ್ಚು ಪ್ರಮುಖವಾದದ್ದು. ಪೊರಕೆಯನ್ನು ಸರಿಯಾದ ದಿಕ್ಕು ಮತ್ತು ಜಾಗದಲ್ಲಿಡದೇ ಹೋದರೆ ವಾಸ್ತು ದೋಷ ಕಾಡಬಹುದು. ಇದರಿಂದ ಆರ್ಥಿಕವಾಗಿ ಕುಂಠಿತರಾಗುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ.
ನಾವು ಎಷ್ಟೇ ದುಡಿದರೂ ಹಣ ಉಳಿಸಲಾಗುತ್ತಿಲ್ಲ. ಕೈಯಲ್ಲಿ ಕಾಸು ಉಳಿಯುತ್ತಿಲ್ಲ ಎಂದು ದೂರುತ್ತೇವೆ. ಆದರೆ, ಸಾಮಾನ್ಯವಾಗಿ, ಇದು ಸಹಜ ಎನ್ನುವಂತೆ ನಾವು ಮಾಡುವ ಕೆಲವೊಂದು ತಪ್ಪುಗಳು ನಮ್ಮ ಆರ್ಥಿಕ ಅಭಿವೃದ್ಧಿಗೆ ದೊಡ್ಡ ನಷ್ಟವುಂಟಾಗುವಂತೆ ಮಾಡುತ್ತದೆ. ಮನೆಗಾಗಿ ಬಳಕೆ ಮಾಡುವ ಪೊರಕೆ, ನಾವು ಧರಿಸುವ ಬಟ್ಟೆ, ಸಕ್ಕರೆ ಡಬ್ಬ, ದೇವರ ಪಟ, ಬೆಳೆಯುವ ಸಸ್ಯಗಳು ವಾಸ್ತು ಪ್ರಕಾರ ಆಯಾ ಜಾಗದಲ್ಲಿಟ್ಟಾಗ ಲಕ್ಷ್ಮಿ ಒಲಿಯುತ್ತಾಳೆ ಎನ್ನುವುದು ನಂಬಿಕೆ. ಅದರಂಯತೆ ಪೊರಕೆಯನ್ನು ವಾಸ್ತು ಶಾಸ್ತ್ರದ ಪ್ರಕಾರ ಸರಿಯಾದ ದಿಕ್ಕಿನಲ್ಲಿಟ್ಟರೆ, ಆರೋಗ್ಯ, ಮದುವೆ ಸಂಬಂಧಿತ ಸಮಸ್ಯೆ, ಹಣಕಾಸಿನ ತೊಂದರೆಗಳು ದೂರಾಗುತ್ತವೆ ಎನ್ನುವುದು ನಂಬಿಕೆ.
ಪುರಾಣದ ಪ್ರಕಾರ, ಲಕ್ಷ್ಮಿ ದೇವಿಯು ವಿಷ್ಣು ಲೋಕಕ್ಕೆ ತೆರಳಿದಾಗ ಅಲ್ಲಿ ಸ್ವಚ್ಛತೆ ಕಾಪಾಡಲು ಪೊರಕೆ ಬಳಕೆ ಮಾಡಿದ್ದಳು ಎನ್ನುವ ನಂಬಿಕೆ ಇದೆ. ಆದ್ದರಿಂದ ಪೊರಕೆಯನ್ನು ಎಚ್ಚರಿಕೆಯಿಂದ ಬಳಕೆ ಮಾಡಲಾಗುತ್ತದೆ.ಸರಿಯಾದ ಜಾಗದಲ್ಲಿ ಇಡಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ನೈಋತ್ಯ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು ಎಂದು ನುರಿತ ಜ್ಯೋತಿಷ್ಯರು ಹೇಳುತ್ತಾರೆ. ಈಶಾನ್ಯ ಮೂಲೆ ಅಥವಾ ಅಡುಗೆ ಮನೆ, ದೇವರ ಕೋಣೆ ಬಳಿ ಪೊರಕೆಯನ್ನು ಎಂದಿಗೂ ಇಡಬೇಡಿ.
ನೀವು ಬಳಕೆ ಮಾಡಿದ ನಂತರ ಪೊರಕೆಯನ್ನು ಎಂದಿಗೂ ನೇರವಾಗಿ ನಿಲ್ಲಿಸಬಾರದು. ಪೊರಕೆ ಮಲಗಿಂದತೆ ನೆಲದ ಮೇಲೆ ಇಡಬೇಕು ಅಂದರೆ ಅಡ್ಡಲಾಗಿ ಮಲಗಿಸಬೇಕು. ಪೊರಕೆಯನ್ನು ಎಂದಿಗೂ ತುಳಿಯಬಾರದು. ತಿಳಿಯದೆ ತುಳಿದರೂ ಇದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ ಎನ್ನಲಾಗಿಎ.
ಮನೆಗೆ ಪೊರಕೆ ತಂದು ಹಲವು ವರ್ಷ ಕಳೆದಿದ್ದರೆ, ಇದರಿಂದಲೂ ವಾಸ್ತು ದೋಷ ಉಂಟಾಗಿ, ಆರ್ಥಿಕವಾಗಿ, ಆರೋಗ್ಯ, ಹಣದ ವಿಚಾರದಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ. ಮನೆಯ ಹೊರಗಿನ ಮಂದಿ ನಿಮ್ಮ ಪೊರಕೆಯ ಮೇಲೆ ಕಣ್ಣು ಹಾಯಿಸದಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯವಾಗಿರುತ್ತದೆ.
ಸೋಮವಾರ ಪೊರಕೆ ಖರೀದಿ ಮಾಡುವುದು ನಿಮ್ಮ ಧನಾಗಮನಕ್ಕೆ ಅಡ್ಡಿಯಾಗುವಂತೆ ಮಾಡುತ್ತದೆ. ಜೀವನದಲ್ಲಿ ನೆಗಟಿವ್ ಎನರ್ಜಿ ತುಂಬಿಕೊಳ್ಳುತ್ತದೆ. ಖರ್ಚು ಹೆಚ್ಚಾಗುತ್ತದೆ. ಲಕ್ಷ್ಮಿ ಕೃಪೆಯನ್ನು ಗಳಿಸಬೇಕು ಎನ್ನುವ ಆಸಕ್ತಿ ಇದ್ದರೆ ಸೋಮವಾರ ಪೊರಕೆ ಖರೀದಿಗೆ ಕೈ ಹಾಕಲೇ ಬೇಡಿ. ಇದರಿಂದಾಗಿ ಭವಿಷ್ಯದಲ್ಲಿ ತೊಂದರೆ ಅನುಭವಿಸಬಹುದು. ಶನಿವಾರ ಲೋಹದ ವಸ್ತು, ಎಣ್ಣೆ, ಪೊರಕೆ ಖರೀದಿ ಮಾಡುವುದು ಅಪಶಕುನ ಎಂದು ಭಾವಿಸಲಾಗಿದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.