2026ರ ಅಂತ್ಯಕ್ಕೆ ಮನೆ ಸ್ವಚ್ಛಗೊಳಿಸುತ್ತಿದ್ದೀರಾ?; ಅದೃಷ್ಟ ಮತ್ತು ನೆಮ್ಮದಿಗಾಗಿ ಈ ಹಳೆಯ ವಸ್ತುಗಳನ್ನು ಹೊರಹಾಕಿ..Vastu Tips

ಎಐ ಚಿತ್ರ
ಎಐ ಚಿತ್ರ
Published on: 
  • ಡಿ.9ರ ಅಮಾವಾಸ್ಯೆ, ಡಿಸೆಂಬರ್ 11ಮನೆಯ ಹಳೆಯ ವಸ್ತುಗಳನ್ನು ಹೊರಹಾಕಲು ಅತ್ಯಂತ ಸೂಕ್ತ ದಿನವಾಗಿದೆ.

  • ದೈವಿಕ ಶಕ್ತಿಯ ವಲಯವಾದ ಈಶಾನ್ಯ ಮೂಲೆಯಲ್ಲಿ ಭಾರವಾದ ಪೀಠೋಪಕರಣ, ಕಸದ ಬುಟ್ಟಿ ಇಡಬೇಡಿ.

  • ಪ್ರವೇಶದ್ವಾರದಲ್ಲಿ ಹಳೆಯ ಪಾದರಕ್ಷೆ, ಪತ್ರಿಕೆ, ನಿಂತುಹೋದ ಗಡಿಯಾರ, ಬಿರುಕು ಬಿಟ್ಟ ಕನ್ನಡಿ ಇಡಬೇಡಿ.

Vastu Shastra tips: ಹೊಸ ವರ್ಷಕ್ಕೆ ದಿನಗಣನೆ ಶುರುವಾಗಿದೆ. ಈ ಹೊತ್ತಲ್ಲಿ ಹೊಸತನ್ನು ತರುವುದು...ಹಳೆತನ್ನು ತೆಗೆದು ಹಾಕುವುದು ಮುಖ್ಯ. ಒಂದು ವರ್ಷದಲ್ಲಿ ಸಾಕಷ್ಟು ಬೇಡವಾದ ವಸ್ತುಗಳು ಮನೆಯಲ್ಲಿ ತುಂಬಿಕೊಂಡಿರುತ್ತದೆ. ಡ್ರಾಯರ್‌ಗಳಲ್ಲಿ ತುಂಬಿರುವ ಹಳೆಯ ಬಿಲ್‌ಗಳು, ನಿಂತು ಹೋದ ಗಡಿಯಾರ ವರ್ಷಗಳಿಂದ ಧರಿಸದ ಬಟ್ಟೆ ವಾಸ್ತು ಪ್ರಕಾರ ಇದೆಲ್ಲವು ಮನಸ್ಸಿನ ಶಕ್ತಿಯನ್ನು ಒಂದೇ ಕಡೆ ಕಟ್ಟಿಹಾಕುತ್ತದೆ. ಮನಸ್ಸಿಗೆ ನೆಮ್ಮದಿ ಇಲ್ಲದಂತೆ ಮಾಡುತ್ತದೆ.

2026 ಕೊನೆಯ ವಾರಗಳು ನಕರಾತ್ಮಕ ಅಂಶವನ್ನು ತೆರವುಗೊಳಿಸಲು ಇರುವ ಉತ್ತಮ ಸಮಯವಾಗಿದೆ ಎನ್ನುತ್ತದೆ ವಾಸ್ತುಶಾಸ್ತ್ರವು. ಡಿಸೆಂಬರ್ 9 ರಂದು ಬೆಳಿಗ್ಗೆ 6:21 ಕ್ಕೆ (IST) ಬರುವ ಅಮಾವಾಸ್ಯೆಯು ಹಳೆಯದನ್ನು ಬಿಟ್ಟುಬಿಡಲು ನೈಸರ್ಗಿಕವಾದ ಶುಭ ಸಂದರ್ಭವಾಗಿದೆ. ಶಿಸ್ತು ಮತ್ತು ಸ್ವಚ್ಛತೆಯ ಗ್ರಹವಾದ ಶನಿಯು ತಿಂಗಳುಗಳ ಹಿಮ್ಮುಖ ಚಲನೆಯ ನಂತರ ಡಿಸೆಂಬರ್ 11 ರಂದು ನೇರ ಚಲನೆಗೆ ಮರಳುತ್ತಾನೆ. ಈ ಎರಡು ದಿನಾಂಕಗಳ ನಡುವಿನ ದಿನಗಳಲ್ಲಿ ಮನೆಯ ದೊಡ್ಡ ಸ್ವಚ್ಛತಾ ಕಾರ್ಯವನ್ನು ಆರಂಭಿಸುವುದು ಗ್ರಹಗಳ ಚಲನೆಗೆ ಪೂರಕವಾಗಿರುತ್ತದೆ.

  • ಮನೆ ಸ್ವಚ್ಛತೆಗೆ ವಾಸ್ತು ಸಲಹೆ

  • ಈಶಾನ್ಯ ಮೂಲೆ ಅಂದವಾಗಿರಲಿ

ವಾಸ್ತು ಶಾಸ್ತ್ರದಲ್ಲಿ ಈಶಾನ್ಯ ದಿಕ್ಕು ನೀರು, ಸ್ಪಷ್ಟತೆ ಮತ್ತು ದೈವಿಕ ಶಕ್ತಿಯ ವಲಯವಾಗಿದೆ. ಪೀಠೋಪಕರಣಗಳು, ಸಂಗ್ರಹಣಾ ಪೆಟ್ಟಿಗೆಗಳು ಶೂ ರ‍್ಯಾಕ್‌ಗಳು ಅಥವಾ ಕಸದ ಬುಟ್ಟಿಗಳನ್ನು ಇಲ್ಲಿ ಇಡುವುದರಿಂದ ಇದು ಹೊಸ ಆಲೋಚನೆ ಮತ್ತು ಸಕರಾತ್ಮಕ ಚಿಂತನೆಗೆ ಸಮಸ್ಯೆಯನ್ನುಂಟು ಮಾಡುತ್ತದೆ. ಈ ಮೂಲೆ ಸ್ವಚ್ಛಗೊಳಿಸಿ. ಇಲ್ಲಿ ಶೌಚಾಲಯವಿದ್ದರೆ ಅದರ ಬಾಗಿಲನ್ನು ಮುಚ್ಚಿಡಿ ಮತ್ತು ಆ ಜಾಗವನ್ನು ಅತ್ಯಂತ ಸ್ವಚ್ಛವಾಗಿರಿಸಿ.

ಮುಖ್ಯದ್ವಾರ ಆಕರ್ಷಕವಾಗಿರಲಿ

ಮುಖ್ಯ ಬಾಗಿಲು ಮನೆಯೊಳಗೆ ಶಕ್ತಿ ಪ್ರವೇಶಿಸುವ ಸ್ಥಳವಾಗಿದೆ. ಇಲ್ಲಿ ಯಾವುದೇ ಕಸ ಇದ್ದರು ಅದು ನಿಮ್ಮ ಇತರ ಕೆಲಸಕ್ಕೆ ಅಡ್ಡಿ ಮಾಡುವಂತೆ ಮಾಡುತ್ತದೆ. ಹಳೆಯ ಪತ್ರಿಕೆಗಳ ರಾಶಿ, ಖಾಲಿ ಪಾರ್ಸೆಲ್‌ಗಳು ಮತ್ತು ಮುರಿದ ಛತ್ರಿಗಳನ್ನು ಅಲ್ಲಿಂದ ತೆಗೆದುಹಾಕಿ. ಬಾಗಿಲು ಶಬ್ಧ ಸರಿಪಡಿಸಿ. ಸುಟ್ಟುಹೋದ ಯಾವುದೇ ಬಲ್ಬ್, ಕೆಟ್ಟದಾಗಿರುವ ಕಾಲೊರೆಸುವ ಮ್ಯಾಟ್ ಸರಿಪಡಿಸೋದು ಮುಖ್ಯವಾಗಿದೆ.

ಮುರಿದ ಬಳಸದ ವಸ್ತು ತೆಗೆದು ಹಾಕಿ

ಬಿರುಕು ಬಿಟ್ಟ ಕನ್ನಡಿಗಳು, ಒಡೆದ ಪಾತ್ರೆಗಳು, ಒಣಗಿದ ಸಸ್ಯಗಳು ಮತ್ತು ಕೆಲಸ ಮಾಡದ ಎಲೆಕ್ಟ್ರಾನಿಕ್ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ. ಬಳಕೆಯೇ ಮಾಡದ ಬಟ್ಟೆಗಳನ್ನು ಮನೆಯಿಂದ ಹೊರಹಾಕಿ. ಅಥವಾ ದಾನ ಮಾಡುವುದು ನಿಮ್ಮ ಭವಿಷ್ಯಕ್ಕೆ ಒಳ್ಳೆಯದು.

ಅಡುಗೆಮನೆಯನ್ನು ನವೀಕರಿಸಿ

ಅಡುಗೆಮನೆಯನ್ನು ಅಗ್ನಿ ಮೂಲೆಗೆ ಸೇರಿದ್ದು ಎನ್ನಲಾಗುತ್ತದೆ. ಇದು ವಾಸ್ತು ಪ್ರಕಾರ ಆಗ್ನೇಯ ದಿಕ್ಕಿನಲ್ಲಿರುವುದು ಸೂಕ್ತ. ಜಿಡ್ಡು ಕಟ್ಟಿದ ಬರ್ನರ್‌ಗಳು ಸೇರಿದಂತೆ ಸ್ಟವ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಕಪಾಟುಗಳು ಮತ್ತು ರೆಫ್ರಿಜರೇಟರ್‌ನಿಂದ ಅವಧಿ ಮೀರಿದ ಮಸಾಲೆಗಳು, ಹಳೆಯ ಜಾರ್‌ಗಳು ಮತ್ತು ಮರೆತುಹೋದ ಉಳಿದ ಆಹಾರವನ್ನು ತೆರವುಗೊಳಿಸಿ. ಅಡುಗೆಮನೆಯು ಆರೋಗ್ಯ ಸಮಸ್ಯೆಗಳು ಮತ್ತು ಅನಿಯಮಿತ ಆದಾಯದೊಂದಿಗೆ ಸಂಬಂಧ ಹೊಂದಿದೆ. ಟ್ಯಾಪ್​ಗಳು ತೊಟ್ಟಿಕ್ಕುತ್ತಿದ್ದರೆ ಅವನ್ನು ಸರಿಪಡಿಸುವ ಕೆಲಸ ಮಾಡಿ.

ಉಪ್ಪಿನ ನೀರಿನಿಂದ ಒರೆಸಿ

ಬೇಡದ ವಸ್ತುಗಳನ್ನೆಲ್ಲಾ ತೆಗೆದ ನಂತರ, ಮನೆಯನ್ನು ಶುದ್ಧೀಕರಿಸಿ. ಒಂದು ಬಕೆಟ್ ನೀರಿಗೆ ಒಂದು ಹಿಡಿ ಸಮುದ್ರದ ಉಪ್ಪು ಅಥವಾ ಕಲ್ಲುಪ್ಪನ್ನು ಸೇರಿಸಿ ನೆಲವನ್ನು, ವಿಶೇಷವಾಗಿ ಮೂಲೆಗಳನ್ನು ಒರೆಸಿ. ಭಾರವಾದ ಶಕ್ತಿಯನ್ನು ಹೀರಿಕೊಳ್ಳಲು ಸಾಂಪ್ರದಾಯಿಕವಾಗಿ ಉಪ್ಪನ್ನು ಬಳಸಲಾಗುತ್ತದೆ. ಆದರೆ ಗುರುವಾರದಂದು ಇದನ್ನು ಮಾಡುವುದನ್ನು ತಪ್ಪಿಸಿ, ಏಕೆಂದರೆ ಅನೇಕ ಕುಟುಂಬಗಳು ಗುರುವಾರ ಉಪ್ಪು ನೀರಿನ ಸ್ವಚ್ಛತೆಯನ್ನು ಮಾಡುವುದಿಲ್ಲ.