

ಬೆಂಗಳೂರು: ನವರಾತ್ರಿ ಉತ್ಸವದ ಕೊನೆಯ ದಿನವಾದ ಮಹಾನವಮಿಯನ್ನು ದೇಶಾದ್ಯಂತ ಅತ್ಯಂತ ಭಕ್ತಿ-ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ದುರ್ಗಾ ದೇವಿಯ ಒಂಬತ್ತನೆಯ ರೂಪವಾದ ತಾಯಿ ಸಿದ್ಧಿರಾತ್ರಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಮಹಾನವಮಿ ಹಾಗೂ ಆಯುಧ ಪೂಜೆಯ ( Ayudha Puja 2026 ) ಈ ಪವಿತ್ರ ದಿನದಂದು ತಾಯಿಯನ್ನು ವಿಧಿ-ವಿಧಾನಗಳ ಪ್ರಕಾರ ಪೂಜಿಸುವುದರಿಂದ ಭಕ್ತರ ಸಕಲ ಕಷ್ಟಗಳು ದೂರಾಗಿ, ಸುಖ-ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ಬಲವಾದ ನಂಬಿಕೆಯಿದೆ.
ಜ್ಯೋತಿಷ್ಯ ಶಾಸ್ತ್ರದ ನಂಬಿಕೆಗಳ ಪ್ರಕಾರ, ಮಹಾನವಮಿ ಮತ್ತು ಆಯುಧ ಪೂಜೆಯ ದಿನದಂದು ಪ್ರತಿಯೊಬ್ಬರೂ ತಮ್ಮ ರಾಶಿಗೆ ಅನುಗುಣವಾಗಿ ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡುವುದು ಅತ್ಯಂತ ಮಂಗಳಕರ ಹಾಗೂ ಫಲಪ್ರದವೆಂದು ಪರಿಗಣಿಸಲಾಗಿದೆ. ಹೀಗೆ ರಾಶಿಫಲಕ್ಕೆ ತಕ್ಕಂತೆ ದಾನ ಮಾಡುವುದರಿಂದ ದೇವಿಯ ಕೃಪಾಕಟಾಕ್ಷ ದೊರೆತು ಆರ್ಥಿಕ ಅಭಿವೃದ್ಧಿ ಹಾಗೂ ಜೀವನದಲ್ಲಿ ಅದೃಷ್ಟ ಒಲಿದುಬರಲಿದೆ. ಹನ್ನೆರಡು ರಾಶಿಗಳಿಗೆ ಅಗನುಗುಣವಾಗಿ ದಾನ ಮಾಡಬೇಕಾದ ಪ್ರಮುಖ ವಸ್ತುಗಳ ವಿವರ ಇಲ್ಲಿದೆ:
1. ಮೇಷ ರಾಶಿ: ಮಹಿಳೆಯರಿಗೆ 21 ರೂಪಾಯಿಗಳನ್ನು ದಾನ ಮಾಡುವುದರಿಂದ ಜೀವನದಲ್ಲಿ ಸುಖ-ಸಮೃದ್ಧಿ ಹೆಚ್ಚಾಗುತ್ತದೆ.
2. ವೃಷಭ ರಾಶಿ: ಅಕ್ಕಿ ಅಥವಾ ಹಾಲು ದಾನ ಮಾಡುವುದರಿಂದ ಜೀವನದ ಸಮಸ್ಯೆಗಳು ನಿವಾರಣೆಯಾಗಿ ಸಂಪತ್ತು ವೃದ್ಧಿಯಾಗುತ್ತದೆ.
3. ಮಿಥುನ ರಾಶಿ: ತಾಮ್ರದ ಪಾತ್ರೆಯನ್ನು ದಾನ ಮಾಡುವುದರಿಂದ ಸಕಾರಾತ್ಮಕ ಶಕ್ತಿ ಹಾಗೂ ದುರ್ಗಾ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ.
4. ಕರ್ಕಾಟಕ ರಾಶಿ: ನೀರನ್ನು ದಾನ ಮಾಡುವುದರಿಂದ ಮನೆಯಲ್ಲಿ ಸುಖ-ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ.
5. ಸಿಂಹ ರಾಶಿ: ಗೋಧಿಯನ್ನು ದಾನ ಮಾಡುವುದರಿಂದ ಕೈಗೊಳ್ಳುವ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ಮತ್ತು ಸಮೃದ್ಧಿ ಸಿಗುತ್ತದೆ.
6. ಕನ್ಯಾ ರಾಶಿ: ಹಸಿರು ಬಟ್ಟೆ ಅಥವಾ ಹಸಿರು ಬೇಳೆಯನ್ನು ದಾನ ಮಾಡುವುದರಿಂದ ಬೌದ್ಧಿಕ ವಿಕಾಸ ಹಾಗೂ ತಾಯಿಯ ಅನುಗ್ರಹದಿಂದ ಸಕಲ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ.
7. ತುಲಾ ರಾಶಿ: ಬಿಳಿ ಬಣ್ಣದ ಕರವಸ್ತ್ರವನ್ನು ದಾನ ಮಾಡುವುದರಿಂದ ತೊಂದರೆಗಳು ಕಡಿಮೆಯಾಗಿ ಸಂತೋಷ ಹೆಚ್ಚಾಗುತ್ತದೆ.
8. ವೃಶ್ಚಿಕ ರಾಶಿ: ಬೆಲ್ಲ ಮತ್ತು ಕಡಲೆಬೇಳೆಯನ್ನು ದಾನ ಮಾಡುವುದರಿಂದ ದುರ್ಗಾ ದೇವಿಯ ಕೃಪೆ ಮತ್ತು ಸಮೃದ್ಧಿ ಸಿಗುತ್ತದೆ.
9. ಧನುಸ್ಸು ರಾಶಿ: ಕುಂಕುಮ ಅಥವಾ ಕೇಸರಿಯನ್ನು ದಾನ ಮಾಡುವುದರಿಂದ ಅದೃಷ್ಟ, ಸುಖ ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ.
10. ಮಕರ ರಾಶಿ: ಬಡವರಿಗೆ ಅನ್ನದಾನ ಅಥವಾ ಆಹಾರ ನೀಡುವುದರಿಂದ ದುರ್ಗಾ ದೇವಿಯ ಕೃಪೆ ಮತ್ತು ಧನಾತ್ಮಕ ಶಕ್ತಿ ಲಭಿಸುತ್ತದೆ.
11. ಕುಂಭ ರಾಶಿ: ಬಡವರಿಗೆ ಮತ್ತು ಅಶಕ್ತರಿಗೆ ಯಥಾಶಕ್ತಿ ದಾನ ಮಾಡುವುದರಿಂದ ಮನಸ್ಸಿಗೆ ಶಾಂತಿ ಹಾಗೂ ದೇವಿಯ ಆಶೀರ್ವಾದ ಸಿಗುತ್ತದೆ.
12. ಮೀನ ರಾಶಿ: ಲಡ್ಡು ಅಥವಾ ಕಡಲೆ ಹಿಟ್ಟನ್ನು ದಾನ ಮಾಡುವುದರಿಂದ ತಾಯಿಯ ಕೃಪೆಯಿಂದ ಜೀವನದಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ.
ಮಹಾನವಮಿ ಹಾಗೂ ಆಯುಧ ಪೂಜೆಯ ಈ ಶುಭ ದಿನದಂದು ನಿಮ್ಮ ರಾಶಿಗೆ ತಕ್ಕಂತೆ ದಾನ ಧರ್ಮಗಳನ್ನು ಮಾಡುವ ಮೂಲಕ ದೇವಿಯ ಕೃಡೆಗೆ ಪಾತ್ರರಾಗಿರಿ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.