

ಮೇಷ: ಕಲಾವಿದರು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಪೊಲೀಸ್ ವೃತ್ತಿಯವರಿಗೆ ವರ್ಗಾವಣೆಯಾಗುವ ಸಾಧ್ಯತೆ. ಶುಭಸಂಖ್ಯೆ: 9
ವೃಷಭ: ಹಣಕಾಸು ವ್ಯವಹಾರದಿಂದ ಆಸ್ತಿ ಲಾಭ. ಭೂಮಿಯ ಮೇಲೆ ಹೂಡಿಕೆಗೆ ಸುಸಮಯ. ಸಂಗಾತಿಯ ಆರೋಗ್ಯದತ್ತ ಗಮನ ಕೊಡಿ. ಶುಭಸಂಖ್ಯೆ: 4
ಮಿಥುನ: ಆಸ್ತಿ ನೋಂದಣಿಗೆ ಇದ್ದ ನಿರ್ಬಂಧ ತೆರವು. ಹೋಟೆಲ್ ವ್ಯವಹಾರದಲ್ಲಿ ಹಣ ಗಳಿಸುವಿರಿ. ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:2
ಕಟಕ: ಆಸ್ತಿ ವಿವಾದಗಳು ಮಾತುಕತೆಯ ಮುಖಾಂತರ ಬಗೆಹರಿಯಲಿವೆ. ಸರಕು ಸಾಗಣೆ ವ್ಯವಹಾರದಲ್ಲಿ ಹೆಚ್ಚು ಹಣ ಗಳಿಸುವಿರಿ. ಶುಭಸಂಖ್ಯೆ: 8
ಸಿಂಹ: ಮಾಧ್ಯಮ ಕ್ಷೇತ್ರದ ಉದ್ಯೋಗಿಗಳಿಗೆ ವೇತನ ಹೆಚ್ಚಾಗಲಿದೆ. ಪ್ರತಿಭಾವಂತರಿಗೆ ಸಮಾಜದ ಸನ್ಮಾನ. ಪುಸ್ತಕ ವ್ಯಾಪಾರಿಗಳಿಗೆ ಲಾಭ.ಶುಭಸಂಖ್ಯೆ: 7
ಕನ್ಯಾ: ಹೊಸ ವ್ಯಾಪಾರದಲ್ಲಿ ನಿರೀಕ್ಷಿತ ಪ್ರಗತಿ ಕಾಣುವಿರಿ. ಬ್ಯಾಂಕ್ ಉದ್ಯೋಗಿಗಳಿಗೆ ಭಡ್ತಿ. ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 3
ತುಲಾ: ದೈಹಿಕ ಶ್ರಮದಿಂದ ಮಾಡುವ ಕೆಲಸದಲ್ಲಿ ಧನಲಾಭ. ಗಾಯಕರಿಗೆ ಬೇಡಿಕೆ ಹೆಚ್ಚಲಿದೆ. ಕೇಂದ್ರ ಸರ್ಕಾರಿ ಕ್ಷೇತ್ರದ ನೌಕರಿ ಪ್ರಾಪ್ತಿ. ಶುಭಸಂಖ್ಯೆ: 5
ವೃಶ್ಚಿಕ: ನವದಂಪತಿಗಳ ಜೀವನದಲ್ಲಿ ತಿರುವು. ಅಲಂಕಾರಿಕ ವಸ್ತು ವ್ಯಾಪಾರದಲ್ಲಿ ಲಾಭ. ಸರ್ಕಾರಿ ಕೆಲಸದಲ್ಲಿದ್ದ ಅಡ್ಡಿ ನಿವಾರಣೆ. ಶುಭಸಂಖ್ಯೆ: 2
ಧನಸ್ಸು: ಪ್ರಸಿದ್ಧ ವ್ಯಕ್ತಿಗಳ ಭೇಟಿಯಾಗುವುದು. ದಿನಸಿ ಪದಾರ್ಥಗಳ ಮಾರಾಟದಲ್ಲಿ ಲಾಭ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 8
ಮಕರ: ಮನೆ ನವೀಕರಣಕ್ಕೆ ಸಿದ್ಧತೆ. ಕಚೇರಿ ಕೆಲಸ ಸುಗಮವಾಗಲಿದೆ. ಲೆಕ್ಕಪರಿಶೋಧಕರಿಗೆ ಲಾಭ. ಕೋರ್ಟಿನ ವ್ಯವಹಾರದಲ್ಲಿ ಜಯ. ಶುಭಸಂಖ್ಯೆ: 5
ಕುಂಭ: ಸ್ವಂತ ಉದ್ಯಮ ಸ್ಥಾಪನೆಗೆ ನಿರ್ಧಾರ. ಸಾಲ ತೀರಿಸಲು ಮಾರ್ಗ ಗೋಚರಿಸಲಿದೆ. ಹಳೆಯ ಸ್ನೇಹಿತರ ಭೇಟಿ ಮಾಡಲಿದ್ದೀರಿ. ಶುಭಸಂಖ್ಯೆ:9
ಮೀನ: ಅಪರಿಚಿತರಿಂದ ಸಹಾಯ ಸಿಗಲಿದೆ. ಕೃಷಿ ಉಪಕರಣಗಳ ಖರೀದಿಗೆ ನಿರ್ಧಾರ. ವಿದೇಶದಲ್ಲಿರುವ ಮಕ್ಕಳಿಂದ ಶುಭ ಸುದ್ದಿ. ಶುಭಸಂಖ್ಯೆ: 7