ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಅವಿವಾಹಿತರಿಗೆ ವಿವಾಹ ಸಿದ್ದಿಯಾಗಲಿದೆ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಅವಿವಾಹಿತರಿಗೆ ವಿವಾಹ ಸಿದ್ದಿಯಾಗಲಿದೆ
ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಅವಿವಾಹಿತರಿಗೆ ವಿವಾಹ ಸಿದ್ದಿಯಾಗಲಿದೆ
Published on: 

ಮೇಷ: ದೇವಾಲಯದ ನಿರ್ವಣಕ್ಕೆ ಸಹಾಯ ಮಾಡುವಿರಿ. ದವಸ ಧಾನ್ಯಗಳ ಮಾರಾಟದಲ್ಲಿ ಲಾಭ. ಕಚೇರಿ ಕೆಲಸಗಳಲ್ಲಿ ಮುನ್ನಡೆ. ಶುಭಸಂಖ್ಯೆ:1

ವೃಷಭ: ಎಲೆಕ್ಟ್ರಿಕಲ್ಸ್ ವಸ್ತುಗಳ ಮಾರಾಟದಲ್ಲಿ ಲಾಭ. ಉಪನ್ಯಾಸಕ ಹುದ್ದೆಗೆ ಆಯ್ಕೆ. ದೃಶ್ಯ ಮಾಧ್ಯಮದ ನೌಕರರಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 7

ಮಿಥುನ: ಅರಣ್ಯ ಉತ್ಪನ್ನಗಳ ಮಾರಾಟದಲ್ಲಿ ಲಾಭ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಬ್ಯಾಂಕ್ ಕ್ಷೇತ್ರದಲ್ಲಿ ಉದ್ಯೋಗ ದೊರೆಯುವುದು. ಶುಭಸಂಖ್ಯೆ: 4

ಕಟಕ: ಹಿತ ಶತ್ರುಗಳ ವಿಚಾರದಲ್ಲಿ ಎಚ್ಚರಿಕೆ ಇರಲಿ. ಉದ್ಯಮಸ್ಥ ಮಹಿಳೆಯರಿಗೆ ಅಭಿವೃದ್ಧಿ. ಅವಿವಾಹಿತರಿಗೆ ವಿವಾಹ ಸಿದ್ದಿಯಾಗಲಿದೆ.

ಸಿಂಹ: ಆಸ್ತಿ ವಿಚಾರದಲ್ಲಿ ಸಹೋದರರಿಂದ ಸಹಕಾರ. ಬ್ಯಾಂಕ್ ಉದ್ಯೋಗಿಗಳಿಗೆ ವರ್ಗಾವಣೆ. ವಿದೇಶದಲ್ಲಿ ಉನ್ನತ ಶಿಕ್ಷಣ ಅವಕಾಶ. ಶುಭಸಂಖ್ಯೆ:5

ಕನ್ಯಾ: ಕಾನೂನು ವಿದ್ಯಾರ್ಥಿಗಳಿಗೆ ಅಭಿವೃದ್ಧಿ. ಮಾತೃ ಮೂಲದ ಆಸ್ತಿ ಲಭ್ಯ. ನಿರ್ಧಾರ ತೆಗೆದುಕೊಳ್ಳುವಲ್ಲಿ ತಜ್ಞರ ಸಲಹೆ ಪಡೆಯಿರಿ. ಶುಭಸಂಖ್ಯೆ: 2

ತುಲಾ: ಬಹುದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ. ರಾಜಕೀಯದವರಿಗೆ ಅಧಿಕಾರ ಪ್ರಾಪ್ತಿ. ಗೃಹ ನಿರ್ವಣದಲ್ಲಿ ಮಂದಗತಿ. ಶುಭಸಂಖ್ಯೆ: 9

ವೃಶ್ಚಿಕ: ಪ್ರಬಲ ಪ್ರತಿರೋಧದ ನಡುವೆ ಅಧಿಕಾರ. ಸಿನಿಮಾ ಸಾಹಿತ್ಯ ಬರೆಯುವವರಿಗೆ ಬೇಡಿಕೆ. ಕೃಷಿ ಜಮೀನು ಅಭಿವೃದ್ಧಿಗೆ ಬೆಂಬಲ. ಶುಭಸಂಖ್ಯೆ: 6

ಧನಸ್ಸು: ವಿದೇಶದಲ್ಲಿರುವ ಮಕ್ಕಳಿಂದ ಶುಭವಾರ್ತೆ. ತಾಂತ್ರಿಕ, ವಾಣಿಜ್ಯ ವಿದ್ಯಾರ್ಥಿಗಳಿಗೆ ಪ್ರಗತಿ. ಸಿಹಿ ಅಂಗಡಿಯ ಮಾಲೀಕರಿಗೆ ಲಾಭ. ಶುಭಸಂಖ್ಯೆ: 2

ಮಕರ: ಸರಕು ಸಾಗಣೆ ವ್ಯವಹಾರದಲ್ಲಿ ಲಾಭ ಬರಲಿದೆ. ಕುಟುಂಬದಲ್ಲಿ ಆರ್ಥಿಕ ವಿಚಾರಕ್ಕೆ ಮನಸ್ತಾಪ. ಸಹೋದ್ಯೋಗಿಗಳ ಸಹಕಾರ. ಶುಭಸಂಖ್ಯೆ:6

ಕುಂಭ: ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದಿರಿ. ಹೊರರಾಜ್ಯ ಪ್ರಯಾಣ ಲಾಭದಾಯಕ. ಸಿಮೆಂಟು, ಮರಳು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:8

ಮೀನ: ಸಾರ್ವಜನಿಕವಾಗಿ ತಾಳ್ಮೆಯಿರಲಿ. ನ್ಯಾಯಾಲಯದ ಕೆಲಸಗಳು ಸುಗಮವಾಗಲಿದೆ. ಮೆಡಿಕಲ್ ಶಾಪ್ ಮಾಲೀಕರಿಗೆ ಶುಭದಿನ.ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net