ಆಕಾಶದಲ್ಲಿ ಅಪರೂಪದ ರಕ್ತ ಚಂದ್ರ: ಈ ರಾಶಿಯವರ ಬದುಕಿನಲ್ಲಿ ಆಗಲಿದೆ ಭಾರೀ ಬದಲಾವಣೆ! Blood Moon

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Blood Moon: ಇಂದು ಮಧ್ಯಾಹ್ನ  3  ಗಂಟೆಗೆ ಪೂರ್ಣ ಚಂದ್ರ ಗ್ರಹಣ ಸಂಭವಿಸಲಿದೆ. ಈ ವೇಳೆ ಚಂದ್ರನು  ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಅನೇಕ ಜನರು ಈ ಘಟನೆಯನ್ನು 'ರಕ್ತ ಚಂದ್ರ' ಎಂತಲೂ ಕರೆಯುತ್ತಾರೆ. ಈ ದಿನವು ಜ್ಯೋತಿಷ್ಯದ ದೃಷ್ಟಿಕೋನದಿಂದ ಮುಖ್ಯವಾಗಿರುತ್ತದೆ.  ಪೂರ್ಣ ಚಂದ್ರಗ್ರಹಣವು ಮನಸ್ಸು ಮತ್ತು ಆಲೋಚನೆಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಕೆಲವೊಂದು ರಾಶಿಯವರು ಒತ್ತಡಗಳನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಹಾಗಿದ್ದರೆ, ಯಾವ ರಾಶಿಯವರಿಗೆ ಈ ಗ್ರಹಣ ಫಲ ನೀಡಲಿದೆ ಎಂದು ನೋಡೋಣ ಬನ್ನಿ...

ಮಿಥುನ ರಾಶಿ

ಗ್ರಹಣದ ಪರಿಣಾಮವು ಮಿಥುನ ರಾಶಿಯವರಿಗೆ ಹೆಚ್ಚು ಯೋಚಿಸುವಂತೆ ಮಾಡುತ್ತದೆ. ಇವರ ಮನಸ್ಸಿನಲ್ಲಿ ಹಲವಾರು ರೀತಿಯ ಪ್ರಶ್ನೆಗಳು ಮೂಡಲಾರಂಭಿಸುತ್ತವೆ. ನಿಮ್ಮ ಮಾತನಾಡುವ ಶೈಲಿಯಲ್ಲಿ ಬದಲಾವಣೆಯನ್ನು ಹೊಂದಬಹುದು. ಈ ಸಮಯದಲ್ಲಿ ನಿಮ್ಮ ಸಂಬಂಧಗಳು ಬಲಗೊಳ್ಳುತ್ತವೆ. ಹೊಸ ಭಾವನೆಗಳು ಹೊಸ ಕೆಲಸಗಳಿಗೆ ಪ್ರೋತ್ಸಾಹ ನೀಡಬಹುದು.  ನೀವು ಹೆಚ್ಚು ಆಕರ್ಷಕವಾಗಬಹುದು. 

ಕನ್ಯಾ ರಾಶಿ

ಈ ರಾಶಿಚಕ್ರದವರಿಗೆ ಯೋಚನೆಯಲ್ಲಿ ನಿರತರಾಗಿರುತ್ತಾರೆ. ನಿಮ್ಮ ಸ್ವಂತ ಕೆಲಸದ ಬಗ್ಗೆ ಹೆಚ್ಚು ಜಾಗರೂಕರಾಗಿರುತ್ತೀರಿ. ಈ ಸಮಯದಲ್ಲಿ, ನೀವು ಎಲ್ಲದರಲ್ಲೂ ಪರಿಪೂರ್ಣರಾಗಿರಬೇಕಾಗಿಲ್ಲ. ಬದಲಾಗಿ ಮಾನಸಿಕವಾಗಿ ಶಾಂತವಾಗಿರುವುದು ಮುಖ್ಯ. ಆದಾಗ್ಯೂ, ಈ ದಿನ ಸ್ವಲ್ಪ ಜಾಗರೂಕತೆಯಿಂದ ಇದ್ದರೆ, ಅನೇಕ ಪ್ರಯೋಜನಗಳನ್ನು ಪಡೆಯಬಹುದು.

ಧನು ರಾಶಿ

ರಾಶಿಯವರಿಗೆ ಈ ಸಮಯ ತುಂಬಾ ಒಳ್ಳೆಯದಾಗಿರುತ್ತದೆ. ವಿವಿಧ ವಿಷಯಗಳ ಬಗ್ಗೆ ಹೊಸ ರೀತಿಯಲ್ಲಿ ವಿಚಾರ ನಡೆಸುತ್ತೀರಿ. ಜೊತೆಗೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ಕೆಲವು ನಂಬಿಕೆಗಳು ಬದಲಾಗಬಹುದು, ಸ್ನೇಹಿತರು ಮತ್ತು ಕುಟುಂಬಗಳೊಂದಿಗೆ ಸಂಬಂಧಗಳು ಹೆಚ್ಚಾಗಲಿವೆ. ಲಾಭಗಳನ್ನು ನಿರೀಕ್ಷಿಸಬಹುದು (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net