More

    ಅಸ್ಪಶ್ಯತೆ ನೋವು ಅನುಭವಿಸಿದವರಿಗೇ ಗೊತ್ತು; ಲಿಡಕರ ನಿಗಮದ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಹೇಳಿಕೆ

    ಹಾವೇರಿ: ಅಸ್ಪಶ್ಯತೆ ಬಹಳ ದೊಡ್ಡ ರೋಗವಾಗಿದ್ದು, ಇದರ ನಿರ್ಮೂಲನೆಗೆ 900 ವರ್ಷಗಳಿಂದಲೂ ಜಗಜ್ಯೋತಿ ಬಸವೇಶ್ವರರು ಸೇರಿದಂತೆ ಅನೇಕ ಶರಣರು ಹೋರಾಟ ಮಾಡಿದ್ದಾರೆ ಎಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ (ಲಿಡಕರ) ನಿಗಮದ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಹೇಳಿದರು.
    ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಪ್ರದೇಶ ಮೌರ್ಯ ಮಹಾ ಸಂಸ್ಥಾನದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರತಿನಿಧಿ ಅಧಿನಿಯಮ 1985, 1989, ಮತ್ತು ಪರಿಶಿಷ್ಟ ನಿಯಮಗಳು ಅಧಿನಿಯಮದ ಅನುಷ್ಠಾನದ ಬಗ್ಗೆ ನಾಗರಿಕ ಹಕ್ಕು ಪರಿಷ್ಕರಣಾ ಅಧಿನಿಯಮ 1977ರ ಕುರಿತು ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಮತ್ತು ಕುಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಅಸ್ಪಶ್ಯತೆ ಎಂಬುದು ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ. ದೊಡ್ಡ ದೊಡ್ಡ ಮೇಧಾವಿಗಳು ಭಾಷಣದಲ್ಲಿ ಜಾತಿ ಪದ್ಧತಿ ಹೋಗಲಾಡಿಸಬೇಕು ಎಂದು ಹೇಳುತ್ತಾರೆ. ಆದರೆ, ಇಂದಿಗೂ ಗ್ರಾಮೀಣ ಭಾಗದಲ್ಲಿ ಅದು ಜೀವಂತವಾಗಿರುವುದು ವಿಷಾಧನೀಯ. ಡಾ.ಬಿ.ಆರ್.ಅಂಬೇಡ್ಕರರು ಸಂವಿಧಾನ ರಚನೆ ಮಾಡದಿದ್ದರೆ, ವಾಲ್ಮೀಕಿ ರಾಮಾಯಣ, ವ್ಯಾಸರು ಮಹಾಭಾರತ ಬರೆಯದಿದ್ದರೆ ಈ ದೇಶದ ಚರಿತ್ರೆ ಇರುತ್ತಿರಲಿಲ್ಲ. ಬಸವಣ್ಣನವರು ಅಸ್ಪಶ್ಯರ ತಂದೆ-ತಾಯಿ, ಬಂಧು-ಬಳಗವಾಗಿದ್ದರು. ತಮ್ಮ ಅನುಭವ ಮಂಟಪದಲ್ಲಿ ಎಲ್ಲ ವರ್ಗದವರಿಗೂ ಆಶ್ರಯ ನೀಡಿದ್ದರು ಎಂದರು.
    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಕ್ಕೆ 30 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ. ಮುಂದಿನ ಪೀಳಿಗೆ ವಿದ್ಯಾವಂತರಾಗಿ ಆರ್ಥಿಕವಾಗಿ ಸದೃಢರಾಗಿ ಸಮಾಜದ ಏಳ್ಗೆಗೆ ಬಗ್ಗೆ ಚಿಂತಿಸಬೇಕು. ಯಾವುದೇ ಧರ್ಮವಿರಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಒಳ್ಳಯ ಸಂದೇಶ ನೀಡಬೇಕು ಎಂದರು.
    ಡಾ.ಹನುಮಂತಪ್ಪ ಸಂಜೀವಣ್ಣನವರ, ಸರ್ಕಾರಿ ಅಭಿಯೋಜಕ ಸಿದ್ಧಾರೂಢ ಗೆಜ್ಜಿಹಳ್ಳಿ, ಡಾ.ಶ್ರೀಧರ, ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಮಲ್ಲಿಕಾರ್ಜುನ ಕಲಾ ತಂಡ ಹಾಗೂ ಜನನಿ ಜಾನಪದ ಕಲಾ ತಂಡದವರು ವಿವಿಧ ಜಾಗೃತಿ ಗೀತೆಗಳನ್ನು ಹಾಡಿದರು.

    ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ರಮೇಶ ಆನವಟ್ಟಿ, ಮುತ್ತುರಾಜ ಮಾದರ ಹಾಗೂ ಬಸವರಾಜ ಹೆಡಿಗ್ಗೊಂಡ, ಸಂಜಯಗಾಂಧಿ, ವೆಂಕಟೇಶ ಪೂಜಾರ, ರಮೇಶ ಜಾಲಿಹಾಳ, ಮಂಜಪ್ಪ, ಬಸವರಾಜ ಕಟ್ಟಿಮನಿ, ಸುರೇಶ ಛಲವಾದಿ, ಬಸವರಾಜ, ಹಾದಿಮನಿ, ಭಜಂತ್ರಿ, ಇತರರು ಉಪಸ್ಥಿತರಿದ್ದರು.
    ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಶರ್ ಸ್ವಾಗತಿಸಿದರು. ವ್ಯವಸ್ಥಾಪಕ ಶರಣು ಕುಲಕರ್ಣಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts