More

    ಜಮ್ಮು, ದೆಹಲಿ ಬಾಂಬ್​ ಸ್ಫೋಟ, ಸೈನಿಕರ ಹತ್ಯೆ – ಬಂಧಿತ ಪಾಕ್​ ಉಗ್ರ ಅಸ್ರಫ್​ ಕೈಗೊಂಡ ಕೃತ್ಯಗಳಿವು

    ನವದೆಹಲಿ: ದೆಹಲಿ ಪೊಲೀಸರ ವಿಶೇಷ ಘಟಕದ ಅಧಿಕಾರಿಗಳು ದೆಹಲಿಯ ಲಕ್ಷ್ಮೀನಗರದಿಂದ ಬಂಧಿಸಲ್ಪಟ್ಟ ಪಾಕಿಸ್ತಾನಿ ಉಗ್ರ ಮೊಹಮ್ಮದ್​ ಅಸ್ರಫ್​ನ ವಿಚಾರಣೆ ನಡೆಸುತ್ತಿದ್ದಾರೆ. 2009 ರಲ್ಲಿ ನಡೆದ ಜಮ್ಮು ಬಸ್​ ನಿಲ್ದಾಣದಲ್ಲಿನ ಸ್ಫೋಟ, 2011 ರ ದೆಹಲಿ ಹೈಕೋರ್ಟ್​ ಹೊರಗಿನ ಸ್ಫೋಟ ಮತ್ತಿತರ ಭಯೋತ್ಪಾದಕ ಚಟುವಟಿಕೆಗಳಲ್ಲಿ ಅವನು ಶಾಮೀಲಾಗಿದ್ದರ ಬಗ್ಗೆ ಮಾಹಿತಿ ಲಭಿಸಿದೆ.

    2009ನೇ ಇಸವಿಯಲ್ಲಿ ಜಮ್ಮು ಬಸ್​ ನಿಲ್ದಾಣದಲ್ಲಿ ನಡೆದಿದ್ದ ಬಾಂಬ್​ ಸ್ಫೋಟವನ್ನು ಕೈಗೊಂಡಿದ್ದ ಉಗ್ರ ಅಸ್ರಫ್​. ನಾಲ್ಕು ನಾಗರೀಕರು ಸಾವಪ್ಪಿದ್ದ ಈ ದುಷ್ಕೃತ್ಯವನ್ನು ಐಎಸ್​ಐ ಅಧಿಕಾರಿ ಎನ್ನಲಾದ ನಾಸಿರ್​ನ ನಿರ್ದೇಶನದ ಮೇರೆಗೆ ಈ ಎಸಗಲಾಗಿತ್ತು ಎನ್ನಲಾಗಿದೆ.

    ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಲುಡೋ ಆಡ್ತಾ ಲವ್‌ನಲ್ಲಿ ಬಿದ್ದ ಮಕ್ಕಳು! ಮದ್ವೆಯಾಗಲು ಮನೆಬಿಟ್ಟ ಬಾಲಕಿ: ಮುಂದಾದದ್ದು ದುರಂತ

    2011ರ ದೆಹಲಿ ಹೈಕೋರ್ಟ್​ ಬ್ಲಾಸ್ಟ್​ಗಾಗಿ ಹಲವು ಕೆಲಸಗಳನ್ನು ಮಾಡಿದ್ದಾಗಿಯೂ ಅಸ್ರಫ್ ಹೇಳಿಕೊಂಡಿದ್ದಾನೆ. ಆ ಕೃತ್ಯ ಎಸಗಲು ಇಬ್ಬರು ಪಾಕಿಸ್ತಾನೀಯರು ಬಂದಿದ್ದರು. ಅವರಲ್ಲಿ ಒಬ್ಬ ಘುಲಾಮ್​ ಸರ್ವಾರ್ ಎಂಬುವ​. ಸ್ಫೋಟ ಕಾರ್ಯಾಚರಣೆಯ ಮುನ್ನ ತಾನು ಪೊಲೀಸ್​ ಹೆಡ್​ಕ್ವಾರ್ಟರ್ಸ್​ ಸೇರಿದಂತೆ ಇತರ 10 ಸರ್ಕಾರಿ ಕಾರ್ಯಾಲಯಗಳ ಸ್ಥಳಸಮೀಕ್ಷೆ ನಡೆಸಿ ಐಎಸ್​ಐಗೆ ಮಾಹಿತಿ ನೀಡಿದ್ದೆ ತಿಳಿಸಿರುವ ಅಶ್ರಫ್​, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಐವರು ಸೇನಾ ಸಿಬ್ಬಂದಿಯ ಹತ್ಯೆ ಪ್ರಕರಣದಲ್ಲೂ ಶಾಮೀಲಾಗಿದ್ದುದಾಗಿ ಹೇಳಿಕೊಂಡಿದ್ದಾನೆ.

    ನಾಸಿರ್​​ನ ಸೂಚನೆಗಳ ಮೇರೆಗೆ ತಾನು ಜಮ್ಮು ಮತ್ತು ಕಾಶ್ಮೀರಕ್ಕೆ ಬಹು ಬಾರಿ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಲು ಹೋಗಿದ್ದಾಗಿ ಮತ್ತು ಐಎಸ್​ಐ ಅಧಿಕಾರಿಗಳೊಂದಿಗೆ ಯಾವಾಗಲೂ ಈ-ಮೇಲ್​ ಮೂಲಕ ವ್ಯವಹರಿಸುತ್ತಿದ್ದುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಬಂಧಿತ ಉಗ್ರ ಅಸ್ರಫ್​ನ ಮಾತುಗಳ ಸತ್ಯಾಸತ್ಯತೆ ಮತ್ತು ಇನ್ನಷ್ಟು ಮಾಹಿತಿಗಾಗಿ ಪೊಲೀಸರು ವಿಚಾರಣೆ ಮತ್ತು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)

    ಹಲವು ಮುಖಗಳನ್ನು ಹೊಂದಿದ್ದ ಪಾಕಿಸ್ತಾನಿ ಉಗ್ರ… ಭಾರತೀಯ ಮಹಿಳೇನ ಮದುವೆ ಆಗಿದ್ದ!

    ದೆಹಲಿಯಲ್ಲಿ ವಿದ್ಯುತ್ ಕೊರತೆ ಇಲ್ಲ! ವಿದ್ಯುತ್ ಪೂರೈಕೆಯ ಫ್ಯಾಕ್ಟ್​ಶೀಟ್​ ಪ್ರಕಟಿಸಿದ ಕೇಂದ್ರ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts