More

    ಬಾಲಕಿ ಅತ್ಯಾಚಾರಕ್ಕೆ ಯತ್ನಿಸಿದದನ ಬಂಧನ

    ಗುತ್ತಲ: ಮೂರೂವರೆ ವರ್ಷದ ಬಾಲಕಿಯ ಮೇಲೆ ಯುವಕ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಸಮೀಪದ ಬೆಳವಿಗಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಜರುಗಿದೆ.

    ಭೀಮಪ್ಪ ಕೋಟೆಪ್ಪ ಹೊಳಲ (24) ಎಂಬ ಯುವಕ ಶುಕ್ರವಾರ ರಾತ್ರಿ ಬಾಲಕಿಯನ್ನು ಪುಸಲಾಯಿಸಿ ಮನೆಯ ಮೇಲೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಕಿರುಚಿದಾಗ ಬಾಲಕಿಯ ಮನೆಯವರು ಹಾಗೂ ಓಣಿಯ ಜನರು ಆಗಮಿಸಿ ಭೀಮಪ್ಪನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಿಎಸ್​ಐ ಶಂಕರಗೌಡ ಪಾಟೀಲ ಆರೋಪಿ ಭೀಮಪ್ಪನನ್ನು ಬಂಧಿದ್ದಾರೆ. ಘಟನೆಯ ಕುರಿತು ಹಾವೇರಿ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts