More

    9 ವರ್ಷಗಳ ಬಳಿಕ ಸೈನಿಕರಿಗೆ ಸಿಹಿಸುದ್ದಿ: ಕೆಲವೇ ದಿನದಲ್ಲಿ ಕೈ ಸೇರಲಿದೆ ಬುಲೆಟ್​ ಪ್ರೂಫ್​ ಜಾಕೆಟ್​!

    ನವದೆಹಲಿ: ಗಡಿಯಲ್ಲಿ ಶತ್ರುಗಳೊಂದಿಗೆ ಹೋರಾಡಲು ಕೆಲವೇ ತಿಂಗಳಲ್ಲಿ ಭಾರತೀಯ ಸೈನಿಕರಿಗೆ ಬುಲೆಟ್​ ಫ್ರೂಫ್​ ಜಾಕೆಟ್​ ಸಿಗಲಿದೆ. ಸತತ 9 ವರ್ಷಗಳ ಬಳಿಕ ಇದೀಗ ಸೈನಿಕರ ಕೈ ಗೆ ತಲುಪುವ ದಿನ ಹತ್ತಿರ ಬಂದಿದೆ.

    ಬರೋಬ್ಬರಿ 639 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿರುವ 1.86 ಲಕ್ಷ ಬುಲೆಟ್​ ಪ್ರೂಫ್​​ ಜಾಕೆಟ್​ಗಳು ಇನ್ನು ಕೆಲವೇ ದಿನದಲ್ಲಿ ಲಕ್ಷ ಸೈನಿಕರು ಬುಲೆಟ್​ ಪ್ರೂಫ್​ ಜಾಕೆಟನ್ನು ತೊಟ್ಟು ಶತ್ರುಗಳೊಂದಿಗೆ ಹೋರಾಡಬಹುದು.
    2009 ಅಕ್ಟೋಬರ್​​ 16 ರಂದು ಬುಲೆಟ್​ ಪ್ರೂಫ್​ ಜಾಕೆಟ್ ಪ್ರಸ್ತಾವನೆಯನ್ನು ಅಂದಿನ ಸರ್ಕಾರ ಪುರಸ್ಕರಿಸಿತ್ತು. ಆದರೆ ಹಲವು ಕಾರಣಗಳಿಂದ ಜಾರಿಯಾಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ರಕ್ಷಣಾ ವ್ಯವಸ್ಥೆಗೆ ವಿಶೇಷ ಒತ್ತು ನೀಡಿ, ಸೈನಿಕರಿಗೆ ತೀರ ಅಗತ್ಯವಿರುವ ಬುಲೆಟ್​ ಪ್ರೂಫ್​ ಜಾಕೆಟ್​ ತಯಾರಿಕೆಗೆ ಅನುಮತಿ ನೀಡಿತ್ತು.

    2016ರಲ್ಲಿ 50,000 ಜಾಕೆಟ್​ಗಳನ್ನು ತುರ್ತು ಖರೀದಿ ಮಾಡಲಾಗಿತ್ತು. ಅದನ್ನು ಸೈನಿಕರಿಗೆ ಈಗಾಗಲೇ ಹಂಚಲಾಗಿದೆ. ಎಸ್​ಎಂಪಿಪಿ ಪ್ರೈವೆಟ್​ ಲಿಮಿಟೆಡ್​ ಕಳೆದ ವರ್ಷ ಈ ಬುಲೆಟ್​ ಪ್ರೂಫ್​​ ಜಾಕೆಟ್​ಗಳ ಪರಿಶೀಲನೆಗೊಳಪಡಿಸಿತ್ತು. ಇದೀಗ ಎಲ್ಲಾ ಹಂತ ಮುಗಿದಿದ್ದು, ಕೆಲವೇ ದಿನದಲ್ಲಿ ಸೈನಿಕರ ಕೈಸೇರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts