More

    ಮತ್ತೆ ಅಗ್ರಸ್ಥಾನಕ್ಕೇರಿದ ಜೈಪುರ ಪಿಂಕ್‌ ಪ್ಯಾಥರ್ಸ್‌: ಅರ್ಜುನ್‌ ದೇಶ್ವಾಲ್‌ ಮಿಂಚಿನ ಆಟ  

    ಕೋಲ್ಕೊತಾ: ಸ್ಟಾರ್‌ ರೇಡರ್‌ ಅರ್ಜುನ್‌ ದೇಶ್ವಾಲ್‌ (20 ಅಂಕ) ಅವರ ಸೂಧಿರ್ತಿದಾಯಕ ಆಟದ ಜತೆಗೆ ಸಂಘಟಿತ ಪ್ರದರ್ಶನ ನೀಡಿದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯ 117ನೇ ಪಂದ್ಯದಲ್ಲಿ ಯು.ಪಿ. ಯೋಧಾಸ್‌ ವಿರುದ್ಧ 37 ಅಂಕಗಳ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ 14ನೇ ಜಯ ದಾಖಲಿಸಿದ ಪ್ಯಾಂಥರ್ಸ್‌, ಒಟ್ಟಾರೆ 83 ಅಂಕಗಳೊಂದಿಗೆ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಅಂತೆಯೇ 81 ಅಂಕಗಳನ್ನು ಹೊಂದಿರುವ ಪುಣೇರಿ ಪಲ್ಟನ್‌ ತಂಡ ದ್ವಿತೀಯ ಸ್ಥಾನಕ್ಕೆ ತಳ್ಳಿದೆ.

    ನೇತಾಜಿ ಒಳಾಗಂಣ ಕ್ರೀಡಾಂಗಣದಲ್ಲಿಸೋಮವಾರ ನಡೆದ ಮೊದಲ ಪಂದ್ಯದಲ್ಲಿಜೈಪುರ 67-30 ಅಂಕಗಳ ಅಂತರದಿಂದ ಯೋಧಾಸ್‌ ವಿರುದ್ಧ ಬೃಹತ್‌ ಅಂತರದ ಗೆಲುವು ಸಾಧಿಸಿತಲ್ಲದೆ, ಎದುರಾಳಿ ತಂಡಗಳಿಗೆ ತಾನೇಷ್ಟು ಬಲಿಷ್ಠ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿತು. ಪಂದ್ಯದಲ್ಲಿ20 ಅಂಕ ಕಲೆಹಾಕಿ ಪ್ಯಾಂಥರ್ಸ್‌ ಜಯದಲ್ಲಿಪ್ರಮುಖ ಪಾತ್ರವಹಿಸಿದ ಅರ್ಜುನ್‌, ಒಟ್ಟಾರೆ 900 ರೇಡಿಂಗ್‌ ಪಾಯಿಂಟ್ಸ್‌ ಕಲೆಹಾಕಿದ ಸಾಧನೆ ಮಾಡಿದರು.

    ಅಂಕಪಟ್ಟಿಯಲ್ಲಿಮೊದಲೆರಡು ಸ್ಥಾನ ಗಳಿಸುವ ತಂಡಗಳು ನೇರವಾಗಿ ಸೆಮಿಫೈನಲ್ಸ್‌ಗೆ ಅರ್ಹತೆ ಗಳಿಸಲಿರುವ ಹಿನ್ನೆಲೆಯಲ್ಲಿಜೈಪುರ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿತು. ಫೆ.16ರಂದು ಟೈಟನ್ಸ್‌ ವಿರುದ್ಧ ಹಾಗೂ ಫೆ.19ರಂದು ಗುಜರಾತ್‌ ವಿರುದ್ಧ ಎರಡು ಪಂದ್ಯಗಳನ್ನು ಹೊಂದಿರುವ ಜೈಪುರ, ಪೂರ್ಣ ಅಂಕ ಕಲೆಹಾಕುವ ಇರಾದೆಯಲ್ಲಿದೆ. ಮತ್ತೊಂದೆಡೆ ಗೆಲುವಿನೊಂದಿಗೆ ಲೀಗ್‌ ಮುಗಿಸುವ ಯತ್ನದಲ್ಲಿರುವ ಯೋಧಾಸ್‌ಗೆ
    ಫಲ ಸಿಗುತ್ತಿಲ್ಲ. ಮೊದಲ ಅವಧಿಯ ಮುನ್ನಡೆಯಿಂದ ಆತ್ಮವಿಶ್ವಾಸದಲ್ಲಿದ್ವಿತೀಯಾರ್ಧ ಆರಂಭಿಸಿದ ಜೈಪುರ ಆಟಗಾರರು, ಆರಂಭದಲ್ಲೇ ಯೋಧಾಸ್‌ ತಂಡವನ್ನು ಆಲೌಟ್‌ ಮಾಡಿ ತಂಡದ ಮುನ್ನಡೆಯನ್ನು 15 ಅಂಕಗಳಿಗೆ ವಿಸ್ತರಿಸಿಕೊಂಡರು. ಹಿನ್ನಡೆ ತಗ್ಗಿಸಲು ಯೋಧಾಸ ಎಲ್ಲಾರೀತಿಯಲ್ಲೂಯತ್ನಿಸಿದರೂ ಎದುರಾಳಿಯ ರಕ್ಷ ಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ.

    29ನೇ ನಿಮಿಷದಲ್ಲಿಯೋಧಾಸ್‌ ತಂಡವನ್ನು ಮೂರನೇ ಬಾರಿ ಆಲೌಟ್‌ ಬಲೆಗೆ ಬೀಳಿಸಿದ ಜೈಪುರ, ಆಟ ಮುಗಿಯಲು ಹತ್ತು ನಿಮಿಷಗಳು ಬಾಕಿ ಇರುವಾಗಲೇ ಗೆಲುವನ್ನು ಖಾತರಿಪಡಿಸಿಕೊಂಡಿತು. ಅರ್ಜುನ್‌ ದೇಶ್ವಾಲ್‌ ತಮ್ಮ ಅತ್ಯುದ್ಭುತ  ರೇಡಿಂಗ್‌ನಿಂದ ಮಿಂಚಿದರೆ, ಡಿಫೆಂಡರ್‌ಗಳಾದ ಸುನಿಲ್‌ ಕುಮಾರ್‌ ಮತ್ತು ಅಂಕುಶ್‌ ನಾಯಕನಿಗೆ ಉತ್ತಮ ಸಾಥ್‌ ನೀಡಿದರು.

    ಫೆಬ್ರವರಿ 13ರಂದು ಪಟನಾ ಪೈರೇಟ್ಸ್‌ ಮತ್ತು ತೆಲುಗು ಟೈಟನ್ಸ್‌ ತಂಡಗಳು ಪೈಪೋಟಿ ನಡೆಸಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts