More

    ಗುಲಾಮಗಿರಿಯ ಮತ್ತೊಂದು ಗುರುತನ್ನು ಇಂದು ತೆಗೆಯಲಾಗಿದೆ ಎಂದ ಮೋದಿ: ಕರ್ತವ್ಯ ಪಥ ಉದ್ಘಾಟನೆ..

    ನವದೆಹಲಿ: ದೇಶದಲ್ಲಿ ಇಂದು ಮತ್ತೊಂದು ಗುಲಾಮಗಿರಿಯ ಗುರುತನ್ನು ತೆಗೆದು ಹಾಕಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ರಾಜಪಥಕ್ಕೆ ಕರ್ತವ್ಯಪಥ ಎಂದು ಮರು ನಾಮಕರಣ ಮಾಡಿದ್ದು, ಅದರ ಉದ್ಘಾಟನೆ ಬಳಿಕ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಕರ್ತವ್ಯಪಥ ಬರೀ ಇಟ್ಟಿಗೆ ಮತ್ತು ಕಲ್ಲುಗಳ ರಸ್ತೆಯಲ್ಲ, ಅದು ಭಾರತೀಯ ಪ್ರಜಾಸತ್ತಾತ್ಮಕ ಇತಿಹಾಸ ಮತ್ತು ಆದರ್ಶಗಳ ಪಥ. ದೇಶದ ಪ್ರಜೆಗಳು ಇಲ್ಲಿಗೆ ಬಂದಾಗ ಇಲ್ಲಿನ ನೇತಾಜಿ ಪ್ರತಿಮೆ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕ ಅವರಲ್ಲಿ ಸ್ಫೂರ್ತಿಯನ್ನು ತುಂಬಬೇಕು ಎಂದರು.

    ರಾಜಪಥ ಗುಲಾಮಿತನದ ಸಂಕೇತ, ಅದು ಈಗ ಇತಿಹಾಸಕ್ಕೆ ಸೇರಿದೆ. ಅದನ್ನು ಎಂದೆಂದಿಗೂ ಅಳಿಸಲಾಗಿದೆ. ಇಂದು ಕರ್ತವ್ಯಪಥದ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಲಾಗಿದೆ. ದೇಶದ ಜನರು ಇನ್ನೊಂದು ಗುಲಾಮಿತನದಿಂದ ಮುಕ್ತರಾಗಿದ್ದಕ್ಕೆ ನಾನು ಅವರನ್ನು ಅಭಿನಂದಿಸುತ್ತೇನೆ ಎಂಬುದಾಗಿ ಮೋದಿ ಹೇಳಿದರು.

    ನಮ್ಮ ರಾಷ್ಟ್ರೀಯ ನಾಯಕ ನೇತಾಜಿ ಸುಭಾಷ್​ಚಂದ್ರ ಬೋಸ್ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾಗಿದೆ. ಬ್ರಿಟಿಷರ ಆಡಳಿತದಲ್ಲಿ ಅದನ್ನು ಪ್ರತಿನಿಧಿಸುವ ಪ್ರತಿಮೆ ಇತ್ತು. ಇಂದು ಅಲ್ಲಿ ನೇತಾಜಿ ಪ್ರತಿಮೆ ಸ್ಥಾಪಿಸುವ ಮೂಲಕ ಆಧುನಿಕ ಹಾಗೂ ಸಶಕ್ತ ಭಾರತಕ್ಕೆ ಬುನಾದಿ ಹಾಕಲಾಗಿದೆ ಎಂದರು.

    ಗುಲಾಮಗಿರಿಯ ಮತ್ತೊಂದು ಗುರುತನ್ನು ಇಂದು ತೆಗೆಯಲಾಗಿದೆ ಎಂದ ಮೋದಿ: ಕರ್ತವ್ಯ ಪಥ ಉದ್ಘಾಟನೆ..

    ಹಿಜಾಬ್ ಜತೆ ಸಿಖ್ಖರ ಕಿರ್ಪನ್​ ಮತ್ತು ಟರ್ಬನ್​ ಹೋಲಿಕೆ ಇಲ್ಲ: ಸುಪ್ರೀಂ ಕೋರ್ಟ್​

    ಕತ್ತಿಯಿಂದ ಕುತ್ತಿಗೆ ಕಡಿದು ಅತ್ತಿಗೆಯ ಕೊಲೆ; ಆರೋಪಿ ಮೈದುನ ಪರಾರಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts