More

    ಮೇಲಧಿಕಾರಿಗಳ ಗೈರಿಗೆ ಗ್ರಾಮಸ್ಥರ ಆಕ್ರೋಶ

    ಮಸ್ಕಿ: ತಾಲೂಕಿನ ಅಂಕುಶದೊಡ್ಡಿ ಗ್ರಾಪಂ ವ್ಯಾಪ್ತಿಯ ಬುದ್ದಿನ್ನಿಯಲ್ಲಿ ಸೋಮವಾರ ಆಯೋಜಿಸಿದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು, ಮೇಲಧಿಕಾರಿಗಳು ಗೈರಾದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಕಾರ್ಯಕ್ರಮವನ್ನೇ ರದ್ದು ಮಾಡಿದರು.

    ನಿಗದಿಯಂತೆ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಬೇಕಿತ್ತು. ಯಾವೊಬ್ಬ ಅಧಿಕಾರಿಯೂ ಬಂದಿರಲಿಲ್ಲ. ಮೇಲಾಗಿ ಡಿಸಿ, ಎಸಿ ಅಥವಾ ತಹಸೀಲ್ದಾರ್, ಶಾಸಕರು ಹಾಜರಿಯಾಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ‘ಇದು ಕಾಟಾಚಾರದ ಸಭೆಯಾಗಿದೆ. ಮೇಲಧಿಕಾರಿಗಳೇ ಇಲ್ಲ ಎಂದ ಮೇಲೆ ಗ್ರಾಮದ ಸಮಸ್ಯೆ ಯಾರ ಮುಂದೆ ಹೇಳಿಕೊಳ್ಳಬೇಕು?’ ಎಂದು ಪ್ರಶ್ನಿಸಿದರು.
    ಸ್ಥಳದಲ್ಲಿದ್ದ ಗ್ರೇಡ್-2 ತಹಸೀಲ್ದಾರ್, ಪಿಡಿಒ ಸೇರಿ ಇತರೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಇದು ಕೇವಲ ಭಾಷಣ ಮಾಡಿ, ಅನ್ನ-ಸಾಂಬರ್ ಉಂಡು ಹೋಗುವ ಕಾರ್ಯಕ್ರಮವಾಗಿದೆ ಇದನ್ನು ರದ್ದುಪಡಿಸಿ ಜಿಲ್ಲಾಧಿಕಾರಿ ಬಂದ ಮೇಲೆಯೇ ಕಾರ್ಯಕ್ರಮ ನಡೆಸಿ ಎಂದು ಒತ್ತಾಯಿಸಿದರು.

    ನಂಗರ ಬಂದಿದ್ದ ಅಧಿಕಾರಿಗಳನ್ನೇ ಊರೊಳಗೆ ಕರೆದೊಯ್ದು, ಚರಂಡಿಗಳಿಲ್ಲದ, ತಗ್ಗು-ಗುಂಡಿ ಬಿದ್ದಿರುವ ರಸ್ತೆಗಳು, ರಸ್ತೆಯೇ ಇಲ್ಲದ ಓಣಿಗಳು, ಎಲ್ಲೆಂದರಲ್ಲಿ ತಿಪ್ಪೆಗುಂಡಿ ಇರುವ ಸ್ಥಳಗನ್ನು ತೋರಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಗ್ರಾಪಂ ಅಧ್ಯಕ್ಷ ಸುಂದರಮ್ಮ ಅಂಕುಶದೊಡ್ಡಿ ಸದಸ್ಯರಾದ ಹಂಪಮ್ಮ, ಗುರುರಾಜ, ಎಸ್ಡಿಎಂಸಿ ಅಧ್ಯಕ್ಷ ನಾಗರೆಡ್ಡಿ ದೇವರಮನಿ, ಗ್ರೇಡ್-2 ತಹಸೀಲ್ದಾರ್ ಷಣ್ಮುಖಪ್ಪ, ಕೃಷಿ ಇಲಾಖೆ ಎಎಒ ಅಮರಪ್ಪ ಇತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts