More

    ಬ್ರೇಕ್ ಅಪ್ ಆದ್ರೂ ಸುಶಾಂತ್​ಗಾಗಿ 2 ವರ್ಷ ಕಾದಿದ್ದೆ ಎಂದು ನೋವು ತೋಡಿಕೊಂಡ ಅಂಕಿತಾ

    ಬೆಂಗಳೂರು: ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್  ಹಿಂದಿ ಚಿತ್ರರಂಗದಲ್ಲಿ ಅವರ ಕೆಲಸಕ್ಕಾಗಿ ಹೆಸರುವಾಸಿಯಾದ ಭಾರತೀಯ ನಟ. 2020 ಜೂನ್ 14 ರಂದು ಮುಂಬೈನ ಬಾಂದ್ರಾದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಸುಶಾಂತ್ ದೇಹ ಪತ್ತೆಯಾಗಿತ್ತು. ಸುಶಾಂತ್ ಅವರು ಸಾವನ್ನಪ್ಪಿ ನಾಲ್ಕು ವರ್ಷಗಳು ಕಳೆದಿದೆ. ಮಾಜಿ ಗೆಳೆತಿ ಅಂಕಿತಾ ಲೋಖಂಡೆ ಸುಶಾಂತ್ ನನ್ನು ತಾವು ಎಷ್ಟು ಪ್ರೀತಿಸುತ್ತಿದ್ದೆ ಎನ್ನುವುದನ್ನು ಅವರು ಹೇಳಿಕೊಂಡಿದ್ದಾರೆ.

    ಸುಶಾಂತ್​​ ಅವರ ಮಾಜಿ ಗೆಳೆತಿ ಅಂಕಿತಾ ಲೋಖಂಡೆ ಮಾತನಾಡಿ, ಸುಶಾಂತ್ ನನ್ನ ಪ್ರಪಂಚವಾಗಿದ್ದ. ನಾನು ತುಂಬಾ ಅವನನ್ನು ಪ್ರೀತಿ ಮಾಡಿದ್ದೆ. ಬ್ರೇಕ್ ಅಪ್ ಆದ ನಂತರ ಬರೋಬ್ಬರಿ 2 ವರ್ಷಗಳ ಕಾಲ ನಾನು ಅವನಿಗಾಗಿ ಕಾದೆ ಎಂದಿದ್ದಾರೆ.

    ನಮ್ ಬ್ರೇಕ್ ಅಪ್ ವಿಚಾರ ಯಾರ ಮುಂದೆಯೂ ಹೇಳಿರಲಿಲ್ಲ. ಆದರೂ, ಅವರು ನನಗೆ ಸಿಗಲಿಲ್ಲ ಎನ್ನುವ ವಿಚಾರವನ್ನೂ ಅತ್ಯಂತ ನೋವಿನಿಂದ ಹೇಳಿಕೊಂಡಿದ್ದಾರೆ.

    ಸುಶಾಂತ್ ಮತ್ತು ಅಂಕಿತಾ ಹಲವು ವರ್ಷಗಳ ಕಾಲ ಪ್ರೀತಿಸಿದವರು. ಲೀವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದವರು. ಆನಂತರ ಮುನಿಸಿಕೊಂಡು ದೂರವಾದರು. ಪ್ರೀತಿ ಅವರನ್ನು ಮತ್ತೆ ಒಂದಾಗೋಕೆ ಬಿಡಲಿಲ್ಲ. ಈ ನೋವನ್ನು ಅಂಕಿತಾ ಮಾಧ್ಯಮವೊಂದರ ಮುಂದೆ ಹೇಳಿಕೊಂಡಿದ್ದಾರೆ.

    ಅಂಕಿತಾ ಸುಶಾಂತ್ ಜೊತೆಗಿನ ಬ್ರೇಕಪ್ ನಂತರ ಎರಡೂವರೆ ವರ್ಷಗಳ ನಂತರ ಜೀವನದಲ್ಲಿ ಮೂವ್ ಆನ್ ಆದರು. ಅಂಕಿತಾ ಮತ್ತು ವಿಕ್ಕಿ ಜೈನ್ ಡಿಸೆಂಬರ್ 2021 ರಲ್ಲಿ ವಿವಾಹವಾದರು. ಅಂಕಿತಾ ಧಾರಾವಾಹಿ ಮಾತ್ರವಲ್ಲದೆ ಬಾಲಿವುಡ್​ನಲ್ಲಿ ಕೆಲವು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts