More

    ಬಡವರಿಗೆ ಉಚಿತ ರೇಷನ್​, 1000 ರೂ. ನೀಡುವುದಾಗಿ ಆಂಧ್ರ ಸಿಎಂ ಜಗನ್​ ಮೋಹನ್​ ರೆಡ್ಡಿ ಘೋಷಣೆ

    ವಿಶಾಖಪಟ್ಟಣಂ: ಉತ್ತರ ಪ್ರದೇಶ ಬೆನ್ನಲ್ಲೇ ಆಂಧ್ರ ಪ್ರದೇಶ ಸರ್ಕಾರವೂ ಕೂಡ ಕರೊನಾ ವೈರಸ್​ ಲಾಕ್​ಡೌನ್​ನಿಂದ ನಲುಗಿಹೋಗಿರುವ ಬಡ ಜನತೆಯ ಬೆನ್ನಿಗೆ ನಿಂತಿದೆ.

    ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಸಿಎಂ ವೈ.ಎಸ್​. ಜಗನ್​ ಮೋಹನ್​ ರೆಡ್ಡಿ, ಬಡವರಿಗೆ ಉಚಿತ ರೇಷನ್​ ಮತ್ತು ಒಂದು ಕುಟಂಬಕ್ಕೆ 1000 ರೂ. ಅನ್ನು ಕರೊನಾ ವೈರಸ್​ನಿಂದ ಉಂಟಾಗಿರುವ ಲಾಕ್​ಡೌನ್​ ತೆರವು ಆಗುವವರೆಗೂ ನೀಡುವುದಾಗಿ ಘೋಷಿಸಿದ್ದಾರೆ.

    ಆಂಧ್ರದಲ್ಲೂ ಕೂಡ ಅಂತಾರಾಜ್ಯ ಸಾರಿಗೆ ವ್ಯವಸ್ಥೆಯನ್ನು ಮಾರ್ಚ್​ 31ರವರೆಗೆ ನಿರ್ಬಂಧಿಸಲಾಗಿದೆ. ಅಲ್ಲದೆ, ಮನೆಯಿಂದ ಯಾರೂ ಹೊರಬರಬೇಡಿ, ಅಗತ್ಯವಿದ್ದಲ್ಲಿ ಮಾತ್ರ ಹೊರಬನ್ನಿ ಎಂದು ಜನತೆಯಲ್ಲಿ ಜಗನ್​ ಮನವಿ ಮಾಡಿಕೊಂಡಿದ್ದಾರೆ. ಸರ್ಕಾರಿ ನೌಕರರನ್ನು ರೊಟೇಶನ್​ ಆಧಾರದ ಮೇಲೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ.

    ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪರಿಸ್ಥಿತಿ ಉತ್ತಮವಾಗಿದೆ. ಈವರೆಗೂ ರಾಜ್ಯದಲ್ಲಿ ಆರು ಸೋಂಕಿತ ಪ್ರಕರಣಗಳು ಮಾತ್ರ ವರದಿಯಾಗಿವೆ. ಅದರಲ್ಲಿ ಓರ್ವ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಕರೊನಾ ಭೀತಿ: ಸಂಕಷ್ಟದಲ್ಲಿರೋ ದಿನಗೂಲಿ ನೌಕರರಿಗೆ ಪ್ರತಿದಿನ 1000 ರೂ. ನೀಡುವುದಾಗಿ ಸಿಎಂ ಯೋಗಿ ಘೋಷಣೆ

    PHOTOS| ಕರೊನಾ ಸೋಂಕು ತಗುಲದಂತೆ ಏನು ಮಾಡಬೇಕು? ಮಾಡಬಾರದು?: ಉಪಯುಕ್ತ ಮಾಹಿತಿ ಫೋಟೋಗಳಲ್ಲಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts