More

    ಹತ್ತು ಲಕ್ಷ ಜನರಿಗೆ ಬಡ್ಡಿರಹಿತ ಸಾಲ: ಮಹತ್ವದ ಯೋಜನೆಗೆ ಪ್ರಜಾ ಸಂಕಲ್ಪ ಯಾತ್ರೆಯೇ ಸ್ಫೂರ್ತಿ!

    ವಿಜಯವಾಡ: ಆಂಧ್ರ ಪ್ರದೇಶದ ಸರ್ವತೋಮುಖ ಬೆಳವಣಿಗೆಗೆ ಪಣತೊಟ್ಟಿರುವ ಮುಖ್ಯಮಂತ್ರಿ ವೈ. ಎಸ್​. ಜಗನ್​ಮೋಹನ್​ ರೆಡ್ಡಿ ನೇತೃತ್ವದ ವೈಎಸ್​ಆರ್​ಸಿಪಿ ಸರ್ಕಾರ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

    ಜಗನ್ನಣ ಥೋಡು ಯೋಜನೆಯನ್ನು ಸಿಎಂ ಜಗನ್​ ಇಂದು ಉದ್ಘಾಟನೆ ಮಾಡಿದ್ದು, ಈ ಯೋಜೆನಯ ಅಡಿಯಲ್ಲಿ ರಾಜ್ಯದ ಎಲ್ಲ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ನೆರವಿನ ಹಸ್ತವನ್ನು ಸರ್ಕಾರ ನೀಡಲಿದೆ.

    1 ಸಾವಿರ ಕೋಟಿ ರೂ. ಯೋಜನೆ ಇದಾಗಿದ್ದು, ಯಾವುದೇ ಬಡ್ಡಿಯಿಲ್ಲದೆ ಸುಮಾರು 10 ಲಕ್ಷ ಜನರಿಗೆ ಯೋಜನೆಯಡಿ ತಲಾ 10 ಸಾವಿರ ರೂ. ಸಾಲ ನೀಡಲಾಗುತ್ತದೆ. ಫಲಾನುಭವಿಗಳ ಬ್ಯಾಂಕ್​ ಖಾತೆಗೆ ಸಿಎಂ ಜಗನ್​ ನೇರವಾಗಿ ಹಣವನ್ನು ಜಮಾ ಮಾಡುವ ಮೂಲಕ ಯೋಜನೆ ಉದ್ಘಾಟಿಸಿದ್ದಾರೆ.

    ಇದನ್ನೂ ಓದಿ: 25 ವರ್ಷ ಹಿಂದೆ ಕೊಲೆ ಮಾಡಿದ್ದ ವ್ಯಕ್ತಿ ಈಗ ಸಿಕ್ಕಿಬಿದ್ದ; ಕೇಸ್ ಸಾಲ್ವ್​ ಆದ ಬಗೆಯೇ ರೋಚಕ

    ಅಧಿಕಾರಕ್ಕೂ ಮುನ್ನ ಜಗನ್​ ಮಾಡಿದ್ದ 3,648 ಕಿಮೀ ವರೆಗಿನ ಪ್ರಜಾ ಸಂಕಲ್ಪ ಯಾತ್ರಾ ಸಮಯದಲ್ಲಿ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಸ್ಥಿತಿಯನ್ನು ನೋಡಿದ್ದ ಜಗನ್​ ಇದೀಗ ಯೋಜನೆಗೆ ಒಂದು ರೂಪ ಕೊಟ್ಟಿದ್ದಾರೆ. ಬ್ಯಾಂಕ್​ಗಳು ಸಾಲ ನೀಡಲಿದ್ದು, ಸರ್ಕಾರವೇ ಬಡ್ಡಿಯನ್ನು ಬರಿಸಲಿದೆ.

    ಯೋಜನೆಗೆ ಪ್ರತ್ಯೇಕವಾಗಿ ವೆಬ್​ಸೈಟ್​ ಅನ್ನು ತೆರೆಯಲಾಗಿದ್ದು, ಇದರ ಮೂಲಕ ಬ್ಯಾಂಕ್​ಗಳೊಂದಿಗೆ ಸಹಕಾರ ಸಾಧಿಸಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಯಾವುದೇ ಭ್ರಷ್ಟಾಚಾರ ನಡೆಯದಂತೆ ನೋಡಿಕೊಳ್ಳಲು ವೆಬ್​ಸೈಟ್​ ಸಹ ಪೂರಕವಾಗಿದ್ದು, ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಆಗಲಿದ್ದು, ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ.

    ಇನ್ನು ಫಲಾನುಭವಿಗಳಿಗೆ ಕ್ಯೂಆರ್​ ಕೋಡ್​ ಒಳಗೊಂದ ಗುರುತಿನ ಚೀಟಿಯನ್ನು ನೀಡಲಾಗಿದ್ದು, ಅದರ ಮೇಲೆ ನಿಗಾವನ್ನು ಇಡಲಾಗುತ್ತದೆ. ತರಕಾರಿ, ಹಣ್ಣು ಮಾರಾಟಗಾರರು, ಸಣ್ಣ ಅಂಗಡಿ ಹೊಂದಿರುವವರು ಸೇರಿದಂತೆ ಅನೇಕರು ಯೋಜನೆಯ ಲಾಭ ಪಡೆಯಲು ಅರ್ಜಿ ಅಲ್ಲಿಸಬಹುದಾಗಿದೆ. (ಏಜೆನ್ಸೀಸ್​)

    ಪಾಕ್​ನಲ್ಲಿ ಇನ್ಮುಂದೆ ರೇಪ್​ ಹೆಸ್ರು ಕೇಳಿದ್ರೆ ಬೆಚ್ಚಿಬೀಳಲಿದ್ದಾರೆ ಕಾಮುಕರು- ಇದೆಂಥ ಶಿಕ್ಷೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts