More

    ಮಹಿಳೆಯರ ಶೌಚಗೃಹದಲ್ಲಿ ಕ್ಯಾಮರಾ ಆನ್​ ಮಾಡಿ ಮೊಬೈಲ್​ ಇಟ್ಟುಬಂದ ಅಸಿಸ್ಟೆಂಟ್​ ಪ್ರೊಫೆಸರ್​: ಮಹಿಳೆಯ ಉಪಾಯದಿಂದ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ

    ಚೆನ್ನೈ: ಐಐಟಿ ಮದ್ರಾಸ್​ ಕಾಲೇಜಿನ ಮಹಿಳಾ ಶೌಚಗೃಹದಲ್ಲಿ ಅಸಿಸ್ಟೆಂಟ್​ ಪ್ರೊಫೆಸರ್​ ಒಬ್ಬ ತನ್ನ ಮೊಬೈಲ್​ ಕ್ಯಾಮರಾ ಆನ್​ ಮಾಡಿ ಇಟ್ಟುಬಂದಿರುವ ಘಟನೆ ನಡೆದಿದೆ. ಆರೋಪಿಯು ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿರುವುದು ವರದಿಯಾಗಿದೆ.

    ಬುಧವಾರ ಸಂಜೆ ಕಾಲೇಜಿನ ಮಹಿಳಾ ಶೌಚಗೃಹಕ್ಕೆ ಪಿಎಚ್​ಡಿ ವಿದ್ಯಾರ್ಥಿನಿಯೊಬ್ಬಳು ಹೋದಾಗ ಅಲ್ಲಿ ಮೊಬೈಲ್​ ಇರುವುದು ಕಂಡುಬಂದಿದೆ. ಆ ಮೊಬೈಲ್​ ಕ್ಯಾಮರಾ ತನ್ನತ್ತಲೇ ತಿರುಗಿರುವುದನ್ನು ಗಮನಿಸಿದ ವಿದ್ಯಾರ್ಥಿನಿ ತಕ್ಷಣ ಆ ಮೊಬೈಲ್​ನ್ನು ತೆಗೆದು ನೋಡಿದ್ದಾಳೆ. ಆಗ ಅದರಲ್ಲಿ ಕ್ಯಾಮರಾ ಆನ್​ ಇರುವುದು ಗೊತ್ತಾಗಿದೆ. ಕೂಡಲೇ ಪುರುಷರ ಶೌಚಗೃಹದತ್ತ ಹೋದ ಮಹಿಳೆ ಅಲ್ಲಿನ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ ಸೆಕ್ಯುರಿಟಿಯನ್ನು ಕರೆದಿದ್ದಾಳೆ. ಸೆಕ್ಯುರಿಟಿ ಬಂದು ಶೌಚಗೃಹದೊಳಗೆ ನೋಡಿದಾಗ ಅಲ್ಲಿ ಆ ಮೊಬೈಲ್​ ಇಟ್ಟ ವ್ಯಕ್ತಿ​ ಇರುವುದು ಪತ್ತೆಯಾಗಿದೆ.

    ಆರೋಪಿಯನ್ನು ಏರೋಸ್ಪೇಸ್​ ಇಂಜಿನಿಯರಿಂಗ್​ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ​ ಸುಭಾಮ್​ ಬ್ಯಾನರ್ಜಿ ಎಂದು ಪೊಲೀಸರು ಗುರುತಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts