More

    75ನೇ ಸ್ವಾತಂತ್ರ್ಯ ವರ್ಷಾಚರಣೆಗೆ ಸರ್ಕಾರದ ಸಿದ್ಧತೆ; ವರ್ಷಪೂರ್ತಿ ಅಮೃತ ಭಾರತಿಗೆ ಕನ್ನಡದಾರತಿ

    |ರಮೇಶ ದೊಡ್ಡಪುರ ಬೆಂಗಳೂರು

    ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರೂಪಿಸಿದ ‘ಮಾತಾಡ್ ಮಾತಾಡ್ ಕನ್ನಡ’ ಕಾರ್ಯಕ್ರಮಕ್ಕೆ ಸಿಕ್ಕ ಅಭೂತಪೂರ್ವ ಸ್ಪಂದನೆಯಿಂದ ಉತ್ತೇಜಿತಗೊಂಡಿರುವ ರಾಜ್ಯ ಸರ್ಕಾರ, ಇದೀಗ ದೇಶದ 75ನೇ ಸ್ವಾತಂತ್ರೋತ್ಸವ ನಿಮಿತ್ತ ವರ್ಷಪೂರ್ತಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿದೆ.

    ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ದೇಶಾದ್ಯಂತ ಆಚರಿಸಬೇಕು ಎಂದು ಕೇಂದ್ರ ಸರ್ಕಾರ ಈ ಹಿಂದೆಯೇ ತಿಳಿಸಿದ್ದರೂ ಕರೊನಾ ಕಾರಣಕ್ಕೆ ಸಾಧ್ಯವಾಗಿಲ್ಲ. ಈ ಕೊರತೆ ನೀಗಿಸಿಕೊಂಡು ‘ಅಮೃತ ಭಾರತಿಗೆ ಕನ್ನಡದಾರತಿ’ ಶೀರ್ಷಿಕೆಯಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದೆ.

    ವರ್ಷಪೂರ್ತಿ ಕಾರ್ಯಕ್ರಮ: ಕನ್ನಡ ರಾಜ್ಯೋತ್ಸವ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ವಿನೂತನ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿತ್ತು. ಗಾಯನ ಸ್ಪರ್ಧೆ, ರಾಜ್ಯಾದ್ಯಂತ ಏಕಕಾಲದಲ್ಲಿ ಲಕ್ಷಾಂತರ ಜನರು ಕನ್ನಡ ಗೀತೆಗಳನ್ನು ಹಾಡುವ ಮೂಲಕ ದಶದಿಕ್ಕುಗಳಲ್ಲೂ ಕನ್ನಡದ ಕಂಪು ಹರಿಸಿದರು. ಇದೀಗ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ಕರ್ನಾಟಕದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಹೋರಾಟ ಎಂದ ಕೂಡಲೆ ಕರ್ನಾಟಕದ ಕೆಲ ಸ್ಥಳ, ವ್ಯಕ್ತಿಗಳನ್ನು ಹೊರತುಪಡಿಸಿ ಅಸಂಖ್ಯಾತ ಸ್ಥಳಗಳು, ವೀರರ ಪರಿಚಯ ಕರ್ನಾಟಕದವರಿಗೇ ಇಲ್ಲ. 75 ನೇ ವರ್ಷದ ಸಂದರ್ಭದಲ್ಲಿ ಇಂತಹ ಸ್ಥಳಗಳು, ವ್ಯಕ್ತಿಗಳ ಕುರಿತು ಪ್ರೇರಣಾದಾಯಿ ಮಾಹಿತಿ ನೀಡುವ 75 ಕಿರು ಪುಸ್ತಕಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಮೂಲಕ ಹೊರತರಲಾಗುತ್ತದೆ. ಮತ್ತಷ್ಟು ವಿಶಿಷ್ಠ ಯೋಜನೆಗಳಿಗೆ ಇನ್ನಿತರ ಅಕಾಡೆಮಿಗಳನ್ನೂ ತೊಡಗಿಸಿಕೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.

    ಶೀಘ್ರದಲ್ಲೆ ಘೋಷಣೆ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ ಹಾಗೂ ಕನ್ನಡಿಗರ ಪಾತ್ರವನ್ನು ಯುವಜನತೆಗೆ ತಿಳಿಸಿಕೊಡಬೇಕಿದೆ. 3 ಹಂತಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಜ್ಯಮಟ್ಟ ದಲ್ಲಿ ಬೆಂಗಳೂರು ಸೇರಿ ಕೆಲವೆಡೆ ಬೃಹತ್ ಕಾರ್ಯಕ್ರಮ ಆಯೋಜನೆಯಾಗಲಿದೆ. ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲೆಯ ಮಹತ್ವ ತಿಳಿಸುವ ಕಾರ್ಯಕ್ರಮಗಳನ್ನು ಸ್ಥಳೀಯ ಆಡಳಿತಗಳೇ ಯೋಜಿಸಿ ಅನುಷ್ಠಾನ ಮಾಡುತ್ತವೆ. ಮೂರನೆಯದಾಗಿ ಯುವಜನ ಸಬಲೀಕರಣ, ಶಿಕ್ಷಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವೈವಿದ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. 2022ರ ಜ.12ರ ಸ್ವಾಮಿ ವಿವೇಕಾನಂದ ಜಯಂತಿಯಿಂದ 2023ರ ಜ.12ರವರೆಗೆ ಕಾರ್ಯಕ್ರಮ ಆಯೋಜಿಸ ಬೇಕಿತ್ತು. ಆದರೆ, ಕೋವಿಡ್ ನಿರ್ಬಂಧದ ಕಾರಣಕ್ಕೆ ಸಾಧ್ಯವಾಗಿಲ್ಲ. ಒಂದೆರಡು ದಿನದಲ್ಲಿ ಈ ಕುರಿತು ಅಧಿಕೃತ ಘೊಷಣೆ ಹೊರಬೀಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.

    75ನೇ ಸ್ವಾತಂತ್ರ್ಯ ವರ್ಷಾಚರಣೆಗೆ ಸರ್ಕಾರದ ಸಿದ್ಧತೆ; ವರ್ಷಪೂರ್ತಿ ಅಮೃತ ಭಾರತಿಗೆ ಕನ್ನಡದಾರತಿದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಪಾತ್ರವನ್ನು ಯುವಜನತೆಗೆ ಮನವರಿಕೆ ಮಾಡಿ ಕೊಡಲು ‘ಅಮೃತ ಭಾರತಿಗೆ ಕನ್ನಡದಾರತಿ’ ಶೀರ್ಷಿಕೆಯಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಸದ್ಯದಲ್ಲೆ ವಿಸõತ ಮಾಹಿತಿಗಳನ್ನು ಅಧಿಕೃತ ಘೊಷಣೆ ಮಾಡಲಾಗುತ್ತದೆ.

    |ವಿ.ಸುನಿಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts