More

    ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಎ.ಅಮೃತರಾಜ್ ಪುನರಾಯ್ಕೆ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಮತ್ತೆ ಎ.ಅಮೃತರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಉಪಾಧ್ಯಕ್ಷರಾಗಿ ಡಿ. ರಾಮಚಂದ್ರ, ಡಾ.ಶೋಭಾ, ಪ್ರಧಾನ ಕಾರ್ಯದರ್ಶಿರಾಗಿ ಕೆ.ಜಿ.ರವಿ, ಖಜಾಂಚಿಯಾಗಿ ಎನ್.ಎಸ್. ಸೋಮಶೇಖರ್, ಕಾರ್ಯಾಧ್ಯಕ್ಷರಾಗಿ ಬಿ.ರುದ್ರೇಶ್,ಜಂಟಿ ಕಾರ್ಯದರ್ಶಿಯಾಗಿ ಎಚ್.ಕೆ.ತಿಪ್ಪೇಶ್, ಕೆ.ನರಸಿಂಹ, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಮಂಜೇಗೌಡ, ಎಸ್.ಜಿ.ಸುರೇಶ್ ಹಾಗೂ ಸಂಚಾಲಕರಾಗಿ ಆರ್. ರೇಣುಕಾಂಬ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಭಾನುವಾರ ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಡಾ.ರಾಜ್‌ಕುಮಾರ್ ಗಾಜಿನಮನೆಯಲ್ಲಿ ನಡೆದ ಸಂಘದ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಎ. ಅಮೃತರಾಜ್ ನೇತೃತ್ವದ ತಂಡ ಎಲ್ಲ 17 ಸ್ಥಾನಗಳಲ್ಲಿ ಗೆದ್ದು ಬೀಗಿತ್ತು. ನಂತರ, ನೂತನ ಪದಾಧಿಕಾರಿಗಳ ಆಯ್ಕೆ ಚುನಾವಣೆಯಲ್ಲಿ ಅಮೃತ್‌ರಾಜ್ ತಂಡವು ಅವಿರೋಧವಾಗಿ ಆಯ್ಕೆಯಾಯಿತು. 17 ಕಾರ್ಯಕಾರಿ ನಿರ್ದೇಶಕರ ಸ್ಥಾನಗಳಿಗೆ ಒಟ್ಟು 33 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 2,700 ಮತಗಳ ಪೈಕಿ 2,171 ಮತಗಳ ಚಲಾವಣೆಯಾದರೆ,74 ಮತಗಳು ಅಸಿಂಧುವಾಗಿತ್ತು. ಎ.ಅಮೃತ್‌ರಾಜ್ 1,892 ಅತ್ಯಧಿಕ ಮತ ಪಡೆದು ಗೆಲುವಿನ ನಗೆ ಬೀರಿದ್ದರು. ಕೆ.ಜಿ. ರವಿ, ಡಾ.ಶೋಭಾ, ಎನ್.ಎಸ್.ಸೋಮಶೇಖರ್, ಎಚ್.ಕೆ.ತಿಪ್ಪೇಶ್, ಆರ್.ರೇಣುಕಾಂಬ, ಕೆ. ಮಂಜೇಗೌಡ, ಎಸ್.ಜಿ.ಸುರೇಶ್, ಎನ್.ಶ್ರೀಧರ್, ಎಂ.ಸಂತೋಷ್ ಕುಮಾರ್, ಎನ್. ಮಂಜುನಾಥ್, ಕೆ.ನರಸಿಂಹ, ಎಚ್.ಬಿ.ಹರೀಶ್, ಕೆ.ಸಂತೋಷ್ ಕುಮಾರ್ ನಾಯ್ಕ ಹಾಗೂ ಬಿ. ರುದ್ರೇಶ್ ಗೆಲುವು ಸಾಧಿಸಿದ್ದರು.

    ನನ್ನ ಅವಧಿಯಲ್ಲಿ ಪಾಲಿಕೆ ನೌಕರರ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಈಡೇರಿಸುವ ಕೆಲಸ ಮಾಡಿದ್ದೇನೆ. ವೃಂದ ಮತ್ತು ನೇಮಕಾತಿ (ಸಿಆ್ಯಂಡ್‌ಆರ್) ನಿಯಮದಂತೆ ಅಧಿಕಾರಿಗಳಿಗೆ ಬಡ್ತಿ ಸಿಗುವಂತೆ ಮಾಡಿದ್ದೇನೆ. ನೌಕರರ ಸಮಸ್ಯೆಗಳನ್ನು ಈಡೇರಿಸಲು ಹೋರಾಟ ನಡೆಸಿದ್ದೇನೆ. ಕೋವಿಡ್ ವೇಳೆ ನೌಕರರ ಹಿತರಕ್ಷಣೆಗಾಗಿ ಕೆಲಸ ಮಾಡಿದ್ದೇನೆ. ಎಲ್ಲರ ಸಹಕಾರದಿಂದ ಕಾಶಿಯಲ್ಲಿ ಕನ್ನಡದ ಕಂಪು ಹಾರಿಸಲು ಕಾರ್ಯಕ್ರಮವನ್ನು ನಡೆಸಿದ್ದೇವೆ. ಹೀಗಾಗಿ, ಎಲ್ಲ ಬೆಂಬಲದಿಂದ ಮತ್ತೆ ಸಂಘದ ಅಧ್ಯಕ್ಷನಾಗಿ ಆಯ್ಕೆಯಾಗಲು ಸಾಧ್ಯವಾಯಿತು ಎಂದು ಅಮೃತರಾಜ್ ಹರ್ಷ ವ್ಯಕ್ತಪಡಿಸಿದರು.

    ಇದನ್ನೂ ಓದಿ: ತೃತೀಯ ಲಿಂಗಿಗಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಅಗತ್ಯ: ಮಂಜಮ್ಮ ಜೋಗತಿ

    ನೌಕರರ ಸಂಕಷ್ಟಕ್ಕೆ ಸ್ಪಂದನೆ: ನೌಕರರಿಗಾಗಿ ಸಮುದಾಯ ಭವನ ನಿರ್ಮಾಣ ಹಾಗೂ ಅಧೀಕ್ಷಕರ ಅಭಿಯಂತರ ಶಿವಕುಮಾರ್ ನೆನಪಿನ ಅಂಗವಾಗಿ ಎರಡು ಅಂಬುಲೆನ್ಸ್ ನೀಡುವುದಕ್ಕೆ ಗುರಿ ಹಾಕಿಕೊಂಡಿದ್ದೇವೆ. ಬಿಬಿಎಂಪಿಯಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿ ಹಾಗೂ ಮುಂಬಡ್ತಿ ಸೌಲಭ್ಯ ಸೇರಿ ಇತರ ಸಮಸ್ಯೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಅಧಿಕಾರಿ ಮತ್ತು ನೌಕರರ ಸಂಕಷ್ಟಗಳಿಗೆ ಶ್ರಮಿಸಲಾಗುವುದು. ನಮ್ಮ ತಂಡದ ಗೆಲುವಿಗೆ ಶ್ರಮಿಸಿದವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅಮೃತರಾಜ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts