More

    ‘ಮಾಸ್ಕ್’ ಪದ ಹಿಂದಿಗೆ ಅನುವಾದಿಸಿ ಅಭಿಮಾನಿಗಳನ್ನು ಬೇಸ್ತು ಬೀಳಿಸಿದ ಬಿಗ್‌ಬಿ

    ಮುಂಬಯಿ: ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್, ‘ಮಾಸ್ಕ್’ ಎಂಬ ಎರಡಕ್ಷರದ ಪದವನ್ನು ಹಿಂದಿಗೆ ಅನುವಾದಿಸಿ ಅಭಿಮಾನಿಗಳನ್ನು ಬೇಸ್ತು ಬೀಳಿಸಿದ್ದಾರೆ. ‘‘ಮಿಲ್ ಗಯಾ! ಮಿಲ್ ಗಯಾ! ಮಿಲ್ ಗಯಾ! ಬಹುತ್ ಪರಿಶ್ರಮ್ ಕೆ ಬಾದ್ ಮಾಸ್ಕ್ ಕಾ ಅನುವಾದ್ ಮಿಲ್ ಗಯಾ’’ (ಸಿಕ್ಕಿತು, ಸಿಕ್ಕಿತು, ಸಿಕ್ಕಿತು, ಬಹಳ ಪರಿಶ್ರಮದ ಬಳಿಕ ಮಾಸ್ಕ್‌ನ ಹಿಂದಿ ಪದ ಸಿಕ್ಕಿತು) ಎಂದು ಟ್ವಿಟರ್‌ನಲ್ಲಿ ಅತ್ಯಂತ ಸಂತೋಷದಿಂದ ಹೇಳಿದ್ದಾರೆ.

    ಮಾಸ್ಕ್‌ಗೆ ಅವರ ಹಿಂದಿ ಅನುವಾದ ಏನು ಗೊತ್ತೆ? ‘ನಾಸಿಕ ಮುಖ ಸಂರಕ್ಷಕ ಕೀಟಾಣು ರೋಧಕ ವಾಯುಚಾನಕ ವಸ್ತ್ರಡೋರಿಯುಕ್ತ ಪಟ್ಟಿಕಾ’! ಇಷ್ಟು ಉದ್ದನೆಯ ಅನುವಾದವನ್ನು ನೋಡಿ ಅಭಿಮಾನಿಗಳಿಗೆ ಅಚ್ಚರಿ, ಆಘಾತ, ಗೊಂದಲಗಳು ಏಕಕಾಲಕ್ಕೆ ಆಗಿವೆ! ಈ ಪೋಸ್ಟ್ ಜತೆ ತಾವು ಮಾಸ್ಕ್ ಧರಿಸಿರುವ ಚಿತ್ರವನ್ನೂ ಅಮಿತಾಭ್ ಹಾಕಿದ್ದಾರೆ.

    ಇದನ್ನೂ ಓದಿ: ವಾರ ಮೊದಲೇ ಎಸ್​ಎಸ್​ಎಲ್​ಸಿ ಪರೀಕ್ಷಾರ್ಥಿಗಳ ಆರೋಗ್ಯ ತಪಾಸಣೆ

    ಈ ಪೋಸ್ಟ್‌ಗೆ ತರಹೇವಾರಿ ಪ್ರತಿಕ್ರಿಯೆಗಳೂ ಬಂದಿವೆ. ‘‘ಇಷ್ಟು ದೊಡ್ಡ ಪದಗುಚ್ಛವನ್ನು ನೆನಪಿಟ್ಟುಕೊಳ್ಳುವುದು ಹೇಗೆ? ಇದನ್ನು ನಾವು ಅನ್ನಲು ಕಲಿಯುವ ಹೊತ್ತಿಗೆ ಕರೊನಾ ವೈರಸ್ ಸತ್ತೇ ಹೋಗಿರುತ್ತದೆ’’ ಎಂದು ಕೆಲವರು ಕಾಲೆಳೆದಿದ್ದಾರೆ. ಇನ್ನು ಕೆಲವರು ಇದು ಹಿಂದಿ ಅಲ್ಲ, ಸಂಸ್ಕೃತ. ಈಗಾಗಲೇ ಬೇಕಾದಷ್ಟು ಇಂಗ್ಲಿಷ್ ಪದಗಳನ್ನು ಹಿಂದಿಯಲ್ಲಿ ಹಾಗೇ ಬಳಸುತ್ತಿದ್ದೇವೆ. ಇದನ್ನೂ ಹಾಗೇ ಬಳಸಿದರಾಯಿತು ಎಂದಿದ್ದಾರೆ. ಬರೀ ಮುಖರಕ್ಷಕ ಅಂತ ಹೇಳಿದರೆ ಸಾಕು ಎಂದು ಕೆಲವರು ಸಲಹೆ ನೀಡಿದ್ದರೆ, ಇನ್ನು ಕೆಲವರು ಇದು ಗುಲಾಬೊ ಸಿತಾಬೊ ಚಿತ್ರದ ಪ್ರಮೋಷನ್ ಗಿಮಿಕ್ ಎಂದು ಟೀಕಿಸಿದ್ದಾರೆ.

    ನಾಳೆಯಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ: ಶಿಕ್ಷಣ ಮತ್ತು ಗೃಹ ಸಚಿವರ ಜಂಟಿ ಸುದ್ದಿಗೋಷ್ಠಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts