More

    ಫೈಟ್‌ಗೆ ಸಜ್ಜು: ₹38 ಸಾವಿರ ಕೋಟಿ ವೆಚ್ಚದ ಯುದ್ಧವಿಮಾನ, ಕ್ಷಿಪಣಿ ಖರೀದಿಗೆ ತಯಾರಿ

    ನವದೆಹಲಿ: ಒಂದೆಡೆ ಚೀನಾ, ಇನ್ನೊಂದೆಡೆ ಪಾಕಿಸ್ತಾನ. ಎರಡರೊಂದಿಗೂ ಭಾರತ ಗುದ್ದಾಡಬೇಕಿದೆ. ಸದ್ಯ ಚೀನಾದೊಂದಿಗಿನ ಭಾರತದ ಉದ್ವಿಗ್ನ ಗಡಿ ವಿವಾದದ ಹಿನ್ನೆಲೆಯಲ್ಲಿ ಸಶಸ್ತ್ರ ಪಡೆಗಳ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕಾರಣದಿಂದ 38,900 ಕೋಟಿ ರೂ.ಗಳ ವೆಚ್ಚದಲ್ಲಿ ಹಲವಾರು ಮುಂಚೂಣಿಯ ಯುದ್ಧವಿಮಾನಗಳು, ಕ್ಷಿಪಣಿಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯ ಇಂದು ಅನುಮೋದನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

    21 ಮಿಗ್ -29 ಯುದ್ಧವಿಮಾನಗಳನ್ನು ರಷ್ಯಾದಿಂದ ಖರೀದಿಸಲಾಗುತ್ತಿದ್ದು, 12 ಸು -30 ಎಂಕೆಐ ವಿಮಾನಗಳನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ ಖರೀದಿಸಲಾಗುತ್ತಿದೆ. ಹಾಲಿ ಇರುವ 59 ಮಿಗ್ -29 ವಿಮಾನಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರತ್ಯೇಕ ಪ್ರಸ್ತಾವಕ್ಕೂ ಸಚಿವಾಲಯ ಅನುಮೋದನೆ ನೀಡಿದೆ.

    ಇದನ್ನೂ ಓದಿ: ಇಂಗು ತಿಂದ ಮಂಗನಂತಾದ ರಾಜ್ಯ ಸರ್ಕಾರ: ಕುಮಾರಸ್ವಾಮಿ ಟೀಕೆ

    ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

    21 ಮಿಗ್ -29 ಖರೀದಿ ಮತ್ತು ಈಗಿರುವ ಮಿಗ್ -29 ನೌಕಾಪಡೆಯ ನವೀಕರಣಕ್ಕೆ ಸರ್ಕಾರಕ್ಕೆ 7,418 ಕೋಟಿ ರೂ. ವೆಚ್ಚವಾಗಲಿದ್ದು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ 12 ಹೊಸ ಸು -30 ಎಂಕೆಐ ಖರೀದಿಸಲು 10,730 ಕೋಟಿ ರೂ ವೆಚ್ಚ ಮಾಡಲಾಗುವುದು ಎಂದು ಹೇಳಲಾಗಿದೆ.

    ನೌಕಾಪಡೆ ಮತ್ತು ವಾಯುಪಡೆಗಾಗಿ 1,000 ಕಿ.ಮೀ ಮತ್ತು ಅಸ್ಟ್ರಾ ಕ್ಷಿಪಣಿಗಳನ್ನು ಹೊಂದಿರುವ ದೀರ್ಘ ಶ್ರೇಣಿಯ ಭೂ ದಾಳಿ ಕ್ರೂಸ್ ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸಲು ಕೂಡ ಈ ಸಂದರ್ಭದಲ್ಲಿ ಅನುಮೋದನೆ ದೊರೆತಿದೆ.

    ವೈದ್ಯರಿಗೆ ವರ್ಷಾಂತ್ಯದವರೆಗೂ ವಿಮಾನದಲ್ಲಿ ರಿಯಾಯಿತಿ ನೀಡಿದ ಇಂಡಿಗೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts