More

    ಮಕ್ಕಳ ಕಲ್ಯಾಣ ಸಮಿತಿ ಮತ್ತು ಆರೈಕೆ ಸಂಸ್ಥೆಗಳ ಕಾನೂನು ಬದಲಾವಣೆ

    ನವದೆಹಲಿ: ದೇಶಾದ್ಯಂತ ಕಾರ್ಯನಿರ್ವಹಿಸುವ ಮಕ್ಕಳ ಕಲ್ಯಾಣ ಸಮಿತಿಗಳು ಮತ್ತು ಅನುದಾನಿತ ಮಕ್ಕಳ ಆರೈಕೆ ಸಂಸ್ಥೆಗಳ ಉತ್ತಮ ನಿರ್ವಹಣೆಗಾಗಿ ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಹೆಚ್ಚಿನ ಪಾತ್ರವನ್ನು ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟವು 2015 ರ ಜುವಿನೈಲ್ ಜಸ್ಟೀಸ್ (ಕೇರ್ ಅಂಡ್ ಪ್ರೊಟೆಕ್ಷನ್ ಆಫ್ ಚಿಲ್ರನ್) ಆ್ಯಕ್ಟ್​​ಗೆ ಅಗತ್ಯವಾದ ತಿದ್ದುಪಡಿಗಳನ್ನು ಬುಧವಾರ (ಫೆಬ್ರವರಿ 17) ಅಂಗೀಕರಿಸಿದೆ.

    ಇನ್ನು ಮುಂದೆ, ಪ್ರತಿ ಜಿಲ್ಲೆಯಲ್ಲೂ ಬಾಲಾಪರಾಧಿ ನ್ಯಾಯ ಕಾಯ್ದೆ ಅಡಿ ಬರುವ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ಜಿಲ್ಲಾ ಮ್ಯಾಜಿಸ್ಟ್ರೇಟರು ಮತ್ತು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟರು ಹೆಚ್ಚಿನ ಅಧಿಕಾರ ಹೊಂದಿರುತ್ತಾರೆ. ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕವೂ ಜಿಲ್ಲಾ ಮ್ಯಾಜಿಸ್ಟ್ರೇಟರ ಕೆಳಗೆ ಕೆಲಸ ಮಾಡಲಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಸ್ಮೃತಿ ಇರಾನಿ ತಿಳಿಸಿದ್ದಾರೆ.

    ಇದನ್ನೂ ಓದಿ: ಫೆಬ್ರವರಿ 27 ರಿಂದ ಬಹುದೊಡ್ಡ ವರ್ಚುವಲ್ ಆಟಿಕೆ ಮೇಳ

    ಕಾಯ್ದೆಯ ವ್ಯಾಪ್ತಿಯನ್ನು ಕೂಡ ಹೆಚ್ಚಿಸಲಾಗಿದೆ. ಟ್ರಾಫಿಕ್ಕಿಂಗ್ ಮತ್ತು ಡ್ರಗ್ ಅಬ್ಯೂಸ್​ಗಳ ಸಂತ್ರಸ್ತರಾದ ಮಕ್ಕಳಿಗೆ, ಗಾರ್ಡಿಯನ್​ಗಳಿಂದ ಪರಿತ್ಯಕ್ತರಾದ ಮಕ್ಕಳಿಗೆ ಸಂರಕ್ಷಣೆ ಒದಗಿಸಲಾಗುವುದು. ಬದಲಾದ ಮತ್ತೊಂದು ಅಂಶವೆಂದರೆ ಮಕ್ಕಳ ಆರೈಕೆ ಸಂಸ್ಥೆಗಳನ್ನು ನಡೆಸಬೇಕೆಂದು ಯಾವುದಾದರೂ ಸಂಘಟನೆ ಪ್ರಸ್ತಾವನೆ ನೀಡಿದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟರು ಅದರ ಹಿನ್ನೆಲೆ ಮತ್ತು ಸಾಮರ್ಥ್ಯಗಳನ್ನು ಪರಿಶೀಲಿಸಿ, ರಾಜ್ಯ ಸರ್ಕಾರಕ್ಕೆ ಶಿಫಾರಸು ನೀಡಬೇಕು. ಈ ಮುನ್ನ ಯಾವುದೇ ಸಂಘಟನೆ ಈ ಬಗ್ಗೆ ಉದ್ದೇಶವನ್ನು ಪ್ರಸ್ತಾಪಿಸಿದರೆ ಸಾಕಾಗಿತ್ತು, ಅನುಮತಿ ದೊರೆಯುತ್ತಿತ್ತು.

    ಈ ಮುನ್ನ ಮಕ್ಕಳ ಕಲ್ಯಾಣ ಸಮಿತಿಗಳ ಸದಸ್ಯರಾಗುವ ವ್ಯಕ್ತಿಗಳ ಹಿನ್ನೆಲೆ ತಿಳಿದುಕೊಳ್ಳುವ ಬಗ್ಗೆ ಯಾವುದೇ ನಿರ್ದಿಷ್ಟ ನಿರ್ದೇಶನ ಇರಲಿಲ್ಲ. ಆದರೆ ಈ ತಿದ್ದುಪಡಿಗಳ ದೆಸೆಯಿಂದ ಸದಸ್ಯರಾಗುವವರ ಹಿನ್ನೆಲೆಯನ್ನು ಪರಿಶೀಲಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಸದಸ್ಯರಿಗೆ ಶೈಕ್ಷಣಿಕ ಅರ್ಹತೆಯನ್ನು ಕೂಡ ನಿಗದಿಪಡಿಸಲಾಗಿದೆ ಎಂದು ಇರಾನಿ ಹೇಳಿದ್ದಾರೆ.(ಏಜೆನ್ಸೀಸ್)

    ರಾಜೀವ್ ಗಾಂಧಿ ಹತ್ಯೆ ವಿಚಾರ ಮತ್ತೆ ಪ್ರಸ್ತಾಪ; ರಾಹುಲ್​ ಗಾಂಧಿ ಹೇಳಿದ್ದೇನು?

     

    ಬಾಲಿವುಡ್ ನಟಿ ದಿಯ ಮಿರ್ಜಾ ಮದುವೆ ಮಾಡಿಸಿದ್ದು ಯಾರು ಗೊತ್ತಾ?!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts