More

    ಗ್ರಾಪಂ ವಿರುದ್ಧ ಅಕ್ರಮ ಸೈಟು ಹಂಚಿಕೆ ಆರೋಪ

    ಆಯನೂರು: ಯಾವುದೇ ಗ್ರಾಮಸಭೆ ನಡೆಸದೆ, ಅಧಿಕಾರಿಗಳು ಹಾಗೂ ಗ್ರಾಮಸ್ಥರ ಗಮನಕ್ಕೂ ತಾರದೇ ಪುಗಟೆಗೊಪ್ಪ ಗ್ರಾಮದಲ್ಲಿ ಗ್ರಾಪಂನಿಂದ ಗ್ರಾಮಠಾಣಾ ಜಾಗದಲ್ಲಿ 120 ಸೈಟ್‌ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಆಯನೂರು ಗ್ರಾಪಂ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

    ಆಯನೂರು ಗ್ರಾಪಂನಿಂದ ಸೈಟುಗಳ ಹಂಚಿಕೆ ಮಾಡಿಯೇ ಸುಮಾರು 30ರಿಂದ 35 ವರ್ಷಗಳಾಗಿವೆ. ಆದರೆ, ಇದೀಗ ಏಕಾಏಕಿ ಸರ್ಕಾರಿ ರಜಾದಿನವಾದ ಭಾನುವಾರ ಮನೆ, ಜಮೀನು, ತೋಟ ಹೀಗೆ ಆಸ್ತಿ ಹೊಂದಿರುವ, ತಮಗೆ ಬೇಕಾದವರಿಗೆ ಗ್ರಾಪಂ ಸದಸ್ಯರು ಕಾನೂನುಬಾಹಿರವಾಗಿ ನಿವೇಶನಗಳ ಹಂಚಿಕೆ ಮಾಡಿದ್ದಾರೆ ಎಂದು ಪ್ರತಿಭಟನಾನಿರತ ಗ್ರಾಮಸ್ಥರು ಆರೋಪಿಸಿದರು.
    ಕೆಲವು ಸದಸ್ಯರು 15ರಿಂದ 20 ಸಾವಿರ ರೂ. ಲಂಚ ಪಡೆದು ಸೈಟ್ ನೀಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಪಂಚಾಯಿತಿ ಸದಸ್ಯರು ತೋರಿಸಿರುವ ಜಾಗದಲ್ಲಿ ಈಗಾಗಲೇ ಕೆಲವರು ಗುಡಿಸಲು ಹಾಕಲು ತಯಾರಿ ನಡೆಸಿದ್ದಾರೆ. ಕೆಲವರು ಗೂಟನೆಟ್ಟು, ನೆಲವನ್ನು ಸಮತಟ್ಟು ಮಾಡುತ್ತಿದ್ದಾರೆ. ಇದರಿಂದ ನಿಜವಾಗಲೂ ನಿವೇಶನ ದೊರಕಬೇಕಾದ ನಿರ್ಗತಿಕರಿಗೆ ಅನ್ಯಾಯವಾಗಿದೆ ಎಂದು ದೂರಿದರು.
    ಅವಿನಾಶ್, ಲೋಹಿತಾ, ಮಹೇಶ್, ಧನರಾಜ್ ನಾಯ್ಕ, ಸಂಜು, ಹರೀಶ್, ಚಂದ್ರು, ಶ್ರೀಕಾಂತ, ಅತಾವುಲ್ಲ, ಸಭಿವುಲ್ಲ, ಚಂದನ್ ಗೌಡ, ಆಯಿಷಾ ಇತರರಿದ್ದರು.

    ಗ್ರಾಮಸ್ಥರು ಹೇಳುವಂತೆ ಗ್ರಾಪಂನಿಂದ ಯಾವುದೇ ಸೈಟ್‌ಗಳನ್ನು ಹಂಚಿಕೆ ಮಾಡಿಲ್ಲ. ಜನ ಗುಡಿಸಲು ಹಾಕುವ ವಿಚಾರ ನನಗೆ ತಿಳಿದಿಲ್ಲ. ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಜನರು ಹೇಳಿದ ಮೇಲೆಯೇ ವಿಷಯ ತಿಳಿದಿದ್ದು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಗುವುದು.
    ದೊರೆ, ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts