More

    ಅಳವಂಡಿಯಲ್ಲಿ ಸಿದ್ಧೇಶ್ವರ ಮಠದ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ

    ಅಳವಂಡಿ: ಜನರಲ್ಲಿ ಒಗ್ಗಟ್ಟು ಹಾಗೂ ನಾವು ಎಂಬ ಪರಿಕಲ್ಪನೆ ಮೂಡಲು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಅಳವಂಡಿ ಸಿದ್ಧೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.

    ದಸರಾ ಹಬ್ಬದ ನಿಮಿತ್ತ ಗ್ರಾಮದ ಸಿದ್ಧೇಶ್ವರ ಮಠದಲ್ಲಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿಬುಧವಾರ ಮಾತನಾಡಿದರು. ಬನ್ನಿ ವಿನಿಮಯ ಸಂಬಂಧಗಳನ್ನು ಗಟ್ಟಿಗೊಳಿಸುವ ಹಾಗೂ ಎಲ್ಲರೂ ಸಮಾನರು ಎಂಬ ಭಾವನೆ ಮೂಡಿಸುತ್ತದೆ. ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು ಎಂದು ಸಲಹೆ ನೀಡಿದರು. ನಂತರ ಹೂಗಳಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಮರುಳಾರಾಧ್ಯರ ಉತ್ಸವ ಮಾಡಲಾಯಿತು. ಪ್ರಮುಖರಾದ ಈಶಪ್ಪ ಜೋಳದ, ಡಾ.ಸಿದ್ದಲಿಂಗಸ್ವಾಮಿ ಇನಾಮದಾರ್, ನಜರುದ್ದೀನ್, ಗಿರೀಶ ಕಣವಿ, ರಮೇಶ ಭಾವಿಹಳ್ಳಿ, ಪ್ರಕಾಶ ಇಳಿಗೇರ, ಅನ್ವರ ಗಡಾದ, ಸಾಗರ ಉಪ್ಪಾರ, ಇಸ್ಮಾಯಿಲ್ ಕವಲೂರು, ಹನುಮಂತ ಮೂಲಿಮನಿ, ಅರವಿಂದಪ್ಪ ಬಿರಾದಾರ, ಶ್ರೀಶೈಲಪ್ಪ ಹಕ್ಕಂಡಿ, ಅಶೋಕ ಬಂಡಿ, ರವಿ ಇನಾಮದಾರ್ ಇತರರಿದ್ದರು. ಬೋಚನಹಳ್ಳಿ ಗ್ರಾಮದಲ್ಲಿ ಶ್ರೀದೇವಿ ಪುರಾಣ ಮಂಗಲದ ಅಂಗವಾಗಿ ದೇವಿ ಭಾವಚಿತ್ರ ಹಾಗೂ ಮಹಿಳೆಯರಿಂದ ಕುಂಭ ಮೆರವಣಿಗೆ ಬುಧವಾರ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts