More

    ಮೂಲ ಹಕ್ಕುಗಳ ತಿಳಿವಳಿಕೆ ಅಗತ್ಯ – ಕೆಎಚ್‌ಪಿಟಿಯ ಸಮುದಾಯ ಸಂಘಟಕ ಯಲ್ಲಪ್ಪ ಮೆಣೆಗಾರ ಅನಿಸಿಕೆ

    ಅಳವಂಡಿ: ಸರ್ಕಾರ ನೀಡುವ ಸೌಲಭ್ಯಗಳನ್ನು ಎಲ್ಲ ಅರ್ಹ ಮಹಿಳೆಯರಿಗೂ ತಲುಪಿಸಿ ಜಾಗೃತಿ ಮೂಡಿಸುವುದು ಸಂಘ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ಕೆಎಚ್‌ಪಿಟಿಯ ಸಮುದಾಯ ಸಂಘಟಕ ಯಲ್ಲಪ್ಪ ಮೆಣೆಗಾರ ಹೇಳಿದರು.

    ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಕರ್ನಾಟಕ ಆರೋಗ್ಯ ಸಂವರ್ಧನಾ ಸಂಸ್ಥೆ (ಕೆಎಚ್‌ಪಿಟಿ)ಯ ಸ್ಫೂರ್ತಿ ಯೋಜನೆಯಿಂದ ಗ್ರಾಮದ ಮಹಿಳಾ ಸ್ವ ಸಹಾಯ ಸಂಘದ ಸದಸ್ಯೆಯರು ಹಾಗೂ ಮಹಿಳೆಯರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿ ಬುಧವಾರ ಮಾತನಾಡಿದರು.

    ಪ್ರತಿ ಮಹಿಳೆಯು ಶಿಕ್ಷಣ ಪಡೆದು ಸಬಲರಾಗಬೇಕು ಹೊರತು ವಂಚಿತರಾಗಬಾರದು. ಎಲ್ಲ ಕ್ಷೇತ್ರಗಳಲ್ಲಿ ಭಾಗಿಯಾಗಿ ಮೂಲ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಮಹಿಳೆಯು ಶೈಕ್ಷಣಿಕ, ಆರ್ಥಿಕ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಬೆಳವಣಿಗೆ ಹೊಂದುತ್ತಿದ್ದು ಪುರುಷರಷ್ಟೇ ಸಮಾನರಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ ಎಂದರು.

    ಕೆಎಚ್‌ಪಿಟಿಯ ಸಮುದಾಯ ಸಂಘಟಕಿ ಎಸ್.ಸುಷ್ಮಾ ಮಾತನಾಡಿದರು. ಗ್ರಾಪಂ ಸದಸ್ಯೆ ಪುಷ್ಪಾ ಸಂಗರಡ್ಡಿ, ಪ್ರಮುಖರಾದ ಪವಿತ್ರಾ, ಪಕೀರಮ್ಮ, ಜುನಾಬೀ, ವಿಶಾಲಾಕ್ಷಿ, ಹೇಮಾವತಿ, ಸುಮಂಗಲಾ, ಶೃತಿ, ಕವಿತಾ, ರೇಣುಕಾ, ಲಲಿತಾ, ಶಿವಮ್ಮ, ಬುಡಾನಬೀ, ವೀಣಾ, ಸವಿತಾ, ಚೈತ್ರಾ, ಭಾಗ್ಯ, ಪ್ರತಿಭಾ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts