More

    ದುಶ್ಚಟ ಬಿಟ್ಟು ಉತ್ತಮ ಜೀವನ ನಡೆಸಿ: ಫಕೀರಸಿದ್ಧರಾಮೇಶ್ವರ ಶ್ರೀಗಳ ಸಲಹೆ

    ಅಳವಂಡಿ: ಧಾರ್ಮಿಕ ಸಭೆ, ಕಾರ್ಯಕ್ರಮಗಳಲ್ಲಿ ಊರಿನ ಜನ ಪಾಲ್ಗೊಳ್ಳುವುದರಿಂದ ಸಾಮರಸ್ಯ ಮೂಡುತ್ತದೆ ಎಂದು ಶಿರಹಟ್ಟಿಯ ಫಕೀರೇಶ್ವರ ಮಠದ ಫಕೀರಸಿದ್ಧರಾಮೇಶ್ವರ ಶ್ರೀಗಳು ಹೇಳಿದರು.

    ತಿಗರಿ ಗ್ರಾಮದಲ್ಲಿ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನದ ಕಲಶಾರೋಹಣ ನಿಮಿತ್ತ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಯುವಕರು ದುಶ್ಚಟಗಳಿಂದ ದೂರವಿರುವ ಮೂಲಕ ಅಮೂಲ್ಯ ಜೀವನ ಕಾಪಾಡಿಕೊಳ್ಳಬೇಕು ಎಂದರು.

    ಫಕೀರೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ಪ್ರತಿಯೊಬ್ಬರೂ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜದ ಶ್ರೇಯೋಭಿವೃದ್ಧಿಗೆ ಪ್ರತಿಯೊಂದು ಧರ್ಮವನ್ನು ಗೌರವಿಸುವುದರ ಜತೆಗೆ ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು. ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿದರು. ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶ್ರೀಶಾಂತ ಭೀಷ್ಮ ಚೌಡಯ್ಯ ಶ್ರೀಗಳು, ಆಳವಂಡಿ ಶ್ರೀಮರುಳಾರಾಧ್ಯ ಶಿವಾಚಾರ್ಯರು, ಮೈನಳ್ಳಿ-ಬಿಕನಳ್ಳಿಯ ಸಿದ್ಧೇಶ್ವರ ಶಿವಾಚಾರ್ಯರು, ಹಿರೇಸಿಂದೋಗಿಯ ಚಿದಾನಂದ ಶ್ರೀಗಳು, ಹಡಗಲಿಯ ಡಾ.ಹಿರಿಶಾಂತವೀರ ಸ್ವಾಮೀಜಿ, ಪ್ರಮುಖರಾದ ವೆಂಕನಗೌಡ ಹಿರೇಗೌಡರ, ಭರಮಪ್ಪ ನಗರ, ತೋಟಪ್ಪ ಶೀಂಟ್ರ, ಗೋಣೆಪ್ಪ, ಭೀಮನಗೌಡ, ಮಲ್ಲಪ್ಪ, ಸಂಗಮೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts