More

    ಊರಿನ ಹಿತಕ್ಕೆಪಕ್ಷ, ಜಾತಿ ಮರೆತು ಶ್ರಮಿಸುವುದೇ ಹೆಮ್ಮೆ

    ಅಳವಂಡಿ: ಹಳ್ಳಿಗಳು ಬದಲಾವಣೆ ಹೊಂದಬೇಕು. ಊರಿನ ಹಿತಕ್ಕಾಗಿ ಪಕ್ಷ, ಜಾತಿ ಮರೆತು ಒಗ್ಗಟ್ಟಿನಿಂದ ದುಡಿಯುವುದೇ ನಿಜವಾದ ಹೆಮ್ಮೆ ಮತ್ತು ಗೌರವ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

    ನೀರಲಗಿ ಗ್ರಾಮದಲ್ಲಿ ಅನ್ನದಾನೇಶ್ವರ ಜಾತ್ರೆ ಅಂಗವಾಗಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮದಲ್ಲಿ ಶ್ರೀಮಂತರು, ಜಮೀನುದಾರರು ಇರುವುದು ಹೆಮ್ಮೆ ಹಾಗೂ ಗೌರವ ಅಲ್ಲ. ಎಲ್ಲರೂ ಜಾತಿ, ಮತ, ಬೇಧ, ಭಾವ ಎಣಿಸದೆ ಸೌಹಾರ್ದದಿಂದ ಜೀವನ ನಡೆಸುವ ಹಾಗೂ ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವ ಮತ್ತು ಗ್ರಾಮದ ಅಭಿವೃದ್ಧಿಗೆ ಹೆಗಲು ಕೊಟ್ಟು ದುಡಿಯುವ ಯುವಕರು ಗ್ರಾಮದ ಹೆಮ್ಮೆ ಎಂದರು.

    ಇದನ್ನೂ ಓದಿ: ಎಲ್ಲರೂ ಕೂಡಿ ಬದುಕುವುದೇ ಸಹಕಾರ ಧರ್ಮ: ಕೊಪ್ಪಳದ ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ

    ಪ್ರಮುಖರಾದ ದೇವಪ್ಪ ಭಂಗಿ, ನಾಗಪ್ಪ ಗೊಂಡಬಾಳ, ಪಾಲಪ್ಪ ಉಳ್ಳಾಗಡ್ಡಿ, ಅಂದಪ್ಪೃ ಡೊಳ್ಳಿನ, ವಿರುಪಣ್ಣ ಗುಡ್ಲಾನೂರ, ಸುರೇಶ, ಜಗದೀಶಯ್ಯ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts