More

    ಸಂವಿಧಾನ ವಿರೋಧಿ ಹೇಳಿಕೆಗೆ ಆಕ್ರೋಶ ; ಅಳವಂಡಿ ಶ್ರೀ ಸಿದ್ಧೇಶ್ವರ ಮಠದ ವಂಶಸ್ಥ ವಿರುದ್ಧ ಕ್ರಮಕ್ಕೆ ಆಗ್ರಹ

    ಅಳವಂಡಿ: ಗ್ರಾಮದ ಶ್ರೀ ಸಿದ್ಧೇಶ್ವರ ಮಠದ ವಂಶಸ್ಥ ಗುರುಮೂರ್ತಿಸ್ವಾಮಿ ಇನಾಮದಾರ್, ಆಸ್ತಿ ವಿಚಾರಕ್ಕೆ ಸಹೋದರನ ಜತೆ ಫೋನ್‌ನಲ್ಲಿ ಮಾತನಾಡುವಾಗ ಸಂವಿಧಾನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಈ ಸಂಬಂಧ ಮುಖಂಡ ಮೈಲಾರಪ್ಪ ಭರಮಪ್ಪ ಪುರದ ನೀಡಿದ ದೂರಿನ ಮೇರೆಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಗುರುಮೂರ್ತಿ ಹೇಳಿಕೆ ಖಂಡಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ದಲಿತ ಸಂಘಟನೆ ಹಾಗೂ ನಮ್ಮ ಕರವೇ (ಸ್ವಾಭಿಮಾನಿ ಬಣ) ಕಾರ್ಯಕರ್ತರು ಭಾನುವಾರ ಸಂಜೆ ಪೊಲೀಸ್ ಠಾಣೆ ಪಿಎಸ್‌ಐ ಮಾರ್ತಂಡಪ್ಪಗೆ ಮನವಿ ಸಲ್ಲಿಸಿದರು.

    ಮಾದಿಗ ದಂಡೋರಾ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಕೆ.ಎಸ್.ಮೈಲಾರಪ್ಪ, ನಮ್ಮ ಕರವೇ ಜಿಲ್ಲಾಧ್ಯಕ್ಷ ಚಂದ್ರಶೇಖರ ಪೂಜಾರ ಮಾತನಾಡಿ, ಭಾರತಕ್ಕೆ ಡಾ.ಅಂಬೇಡ್ಕರ್ ಕೊಟ್ಟ ಶ್ರೇಷ್ಠ ಸಂವಿಧಾನ ಹಾಗೂ ಜಾತಿ ನಿಂದನೆ, ದಲಿತ ಮಹಿಳೆಯರ ಬಗ್ಗೆ ಹಗುರವಾಗಿ ಹೇಳಿಕೆ ನೀಡಿದ ಗುರುಮೂರ್ತಿಸ್ವಾಮಿ ವಿರುದ್ಧ ಕಠಿಣ ಕ್ರಮ ಕೈಕೊಳ್ಳಬೇಕು ಎಂದು ಆಗ್ರಹಿಸಿದರು.

    ಪ್ರಮುಖರಾದ ಕೋಟೇಶ ಬೇವಿನಕಟ್ಟಿ, ಗವಿಸಿದ್ದಪ್ಪ ಹ್ಯಾಟಿ, ಸುರೇಶ ಹಳ್ಳಿ, ನಿಂಗಪ್ಪ ಹಾಲಿನವರ, ಮರಿಯಪ್ಪ ಹಾಲಿನವರ, ಕನಕಪ್ಪ ಹಳ್ಳಿ, ಯಮನೂರಪ್ಪ, ಹಾಲಪ್ಪ ಗದಗ, ಯಮನೂರಪ್ಪ ಮುರ್ಲಾಪುರ, ಮೈಲಾರಪ್ಪ ಪುರದರ, ಅಣ್ಣಪ್ಪ ಪುರದ, ಸಂತೋಷ ಪುರದ, ದುರ್ಗೆಶ ತಂಬೂರಿ, ಹನುಮಂತ ಗಾಳಿ, ನಿಂಗಪ್ಪ ಹಳ್ಳಿ, ಯಮನಪ್ಪ ಹಳ್ಳಿ, ಮಂಜುನಾಥ ಹಲವಾಗಲಿ ಇತರರಿದ್ದರು.

    ಕ್ಷಮೆ ಕೇಳಿದ ಗುರುಮೂರ್ತಿ: ಆಡಿಯೋ ವೈರಲ್ ಆಗುತ್ತಿದ್ದಂತೆ ಗುರುಮೂರ್ತಿಸ್ವಾಮಿ ಇನಾಮದಾರ್ ವಿಡಿಯೋ ಬಿಡುಗಡೆ ಮಾಡಿ ಕ್ಷಮೆ ಕೇಳಿದ್ದಾರೆ. ಸಿದ್ಧೇಶ್ವರ ಮಠದ ಆಸ್ತಿ, ಆಂತರಿಕ ವಿಷಯಕ್ಕೆ ಸಂಬಂಧಿಸಿ ಸಹೋದರನೊಂದಿಗೆ ಮಾತನಾಡುವ ಭರದಲ್ಲಿ ನನ್ನಿಂದ ಯಾವುದೇ ಸಮುದಾಯಕ್ಕೆ ನೋವು, ತೊಂದರೆಯಾಗಿದ್ದರೆ ಕ್ಷಮಿಸಿ ಎಂದು ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts