More

    ಬೆಳೆ ಭವಿಷ್ಯ ಹೇಳುವ ಅಲೈ ದೇವರು

    ನರೇಗಲ್ಲ: ಮೊಹರಂ ಹಿಂದು- ಮುಸ್ಲಿಮರ ಭಾವೈಕ್ಯದ ಹಬ್ಬ. ಎರಡು ವರ್ಷಗಳಿಂದ ಕರೊನಾ ಹಿನ್ನೆಲೆಯಲ್ಲಿ ಹಬ್ಬ ಕಳೆಗುಂದಿತ್ತು. ಈ ಬಾರಿ ಸಂಭ್ರಮದಿಂದ ಆಚರಿಸಲು ಉದ್ದೇಶಿಸಲಾಗಿದೆ.

    ಆ. 7ರಂದು ಗಂಧ, 8 ರಂದು ಕತ್ತಲ ರಾತ್ರಿ, 9 ರಂದು ದೇವರು ಹೊಳೆಗೆ ಹೋಗುವ ಕಾರ್ಯಕ್ರಮ ಆಚರಿಸಲಾಗುತ್ತದೆ. ನರೇಗಲ್ಲ, ಕೋಡಿಕೊಪ್ಪ, ಕೋಚಲಾಪೂರ, ಅಬ್ಬಿಗೇರಿ, ಯರೇಬೇಲೇರಿ, ಕುರಡಗಿ, ಗುಜಮಾಗಡಿ, ಡ.ಸ. ಹಡಗಲಿ, ಜಕ್ಕಲಿ, ಬೂದಿಹಾಳ, ಮಾರನಬಸರಿ, ಹಾಲಕೆರೆ, ನಿಡಗುಂದಿಕೊಪ್ಪ, ನಿಡಗುಂದಿ, ಕಳಕಾಪೂರ ಗ್ರಾಮಗಳಲ್ಲಿ ಮೊಹರಂ ಅನ್ನು ಭಾವೈಕ್ಯದಿಂದ ಆಚರಿಸಲಾಗುತ್ತದೆ.

    ಗೀಗೀ ಪದ ಗಾಯನ: ಮಾರನಬಸರಿಯ ಸಿದ್ದನಕೊಳ್ಳದ ಸಿದ್ದಪ್ಪಜ್ಜ ಹಾಗೂ ಇಲಕಲ್ಲ ದರ್ಗಾದ ಮುರ್ತಜಾ ಖಾದ್ರಿ ಅವರ ಉತ್ತಮ ಬಾಂಧ್ಯವ್ಯದ ಪ್ರತೀಕವಾಗಿ ಇಲ್ಲಿ ಮೊಹರಂ ಆಚರಿಸಲಾಗುತ್ತದೆ. ಅಹೋರಾತ್ರಿ ಪ್ರಸಿದ್ಧ ಗಾಯಕರಿಂದ ಗೀಗೀ ಪದಗಳ ಗಾಯನ ನಡೆಯುತ್ತದೆ. ಮೊಹರಂ ಕೊನೆಯ ದಿನ ಮಸೂತಿಯಿಂದ ಹೊರಡುವ ಅಲೈ ದೇವರು ಕೆಲ ಭಕ್ತರಿಗೆ ಉತ್ತತ್ತಿ, ಅಂಗಾರ ನೀಡುತ್ತವೆ. ಕತ್ತಲ ರಾತ್ರಿಯಂದು ದೊಡ್ಡ ಮಸೀದಿಯ ಮುಜಾವರರು ರಾತ್ರಿ 12ಕ್ಕೆ ಹೊಲದ ಮಣ್ಣನ್ನು ತಂದು ಅದರಲ್ಲಿ ವಿವಿಧ ಬಿತ್ತನೆ ಬೀಜ ಸೇರಿಸಿ ತಂಬಿಗೆಯಲ್ಲಿ ಹಾಕುತ್ತಾರೆ. ಹೀಗೆ ಹಾಕಿದ 2 ಗಂಟೆಯಲ್ಲಿ ಕಾಳುಗಳು ಮೊಳಕೆ ಒಡೆಯುತ್ತವೆ. ಹಿಂಗಾರಿಯಲ್ಲಿ ಉತ್ತಮ ಫಸಲು ಬರುವ ಕಾಳುಗಳು ಮಾತ್ರ ಹೆಚ್ಚು ಮೊಳಕೆಯೊಡೆಯುತ್ತವೆ ಎಂಬ ನಂಬಿಕೆ ರೈತರದ್ದು.

    ಹಾಲಕೆರೆ ಮೊಹರಂ: ಹಾಲಕೆರೆಯ ಅನ್ನದಾನೀಶ್ವರ ಸಂಸ್ಥಾನ ಮಠದ ಲಿಂ. ಅನ್ನದಾನ ಸ್ವಾಮೀಜಿ ಅಲೈ ದೇವರಿಗೆ ಲಿಂಗ (ಲಿಂಗದಕಾಯಿ) ಮತ್ತು ರಾಷ್ಟ್ರಧ್ವಜ ಕಟ್ಟಿದ್ದರು. ಹೀಗಾಗಿ, ಇಲ್ಲಿನ ಮೊಹರಂ ಭಾವೈಕ್ಯದ ಜತೆಗೆ ರಾಷ್ಟ್ರ ಪ್ರೇಮದ ಮೆರುಗು ಪಡೆದಿದೆ. ಅಲೈ ದೇವರನ್ನು ಹೊರಲು ಗ್ರಾಮಸ್ಥರ ಮಧ್ಯೆ ಪೈಪೋಟಿ ಏರ್ಪಡುತ್ತದೆ. ಪ್ರತಿವರ್ಷ ದೇವರನ್ನು ಹೊರಲು ಬಹಿರಂಗ ಸವಾಲು ಮಾಡುತ್ತಾರೆ. ಸವಾಲಿನಲ್ಲಿ ಹೆಚ್ಚು ಹಣ ಕೂಗಿದವರು ದೇವರನ್ನು ಹೊರುತ್ತಾರೆ. 2019ರಲ್ಲಿ 45 ಸಾವಿರ ರೂ.ಗೆ ಸವಾಲ್ ನಡೆದಿತ್ತು. ಸವಾಲಿನಿಂದ ಬಂದ ಹಣವನ್ನು ದೇವರ ಕಾರ್ಯಗಳಿಗೆ ಉಪಯೋಗಿಸಲಾಗುತ್ತದೆ.

    ಮಾರನಬಸರಿಯ ಅಲೈ ದೇವರ ಪವಾಡ ನೋಡಲು ಸಾವಿರಾರು ಜನರು ಬರುತ್ತಾರೆ. ಮಳೆ, ಬೆಳೆ, ರಾಜಕೀಯ ಸೇರಿ ಹಲವು ವಿಚಾರಗಳ ಬಗ್ಗೆ ಸಂಜ್ಞೆಯ ಮೂಲಕ ಅಲೈ ದೇವರು ಮುನ್ಸೂಚನೆ ನೀಡುತ್ತವೆ. ಇಲ್ಲಿ ಪ್ರತಿಷ್ಠಾಪಿಸಿರುವ ದೇವರು (ಪಾಂಝಾ) ಹಿಂದು- ಮುಸ್ಲಿಂ ಸಮಾಜದವರು ಮೊಹರಂ ಸೇರಿ ಎಲ್ಲ ಹಬ್ಬಗಳನ್ನು ಕೂಡಿ ಆಚರಿಸುತ್ತಾರೆ.

    | ಡಾ. ಶಿವಕುಮಾರಸ್ವಾಮಿ ಕಂಬಾಳಿಹಿರೇಮಠ, ಧರ್ಮಾಧಿಕಾರಿ ಶ್ರೀಕ್ಷೇತ್ರ ಸಿದ್ಧನಕೊಳ್ಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts