More

    ಆಗುಂಬೆ ಘಾಟಿ ತಿರುವಿನಲ್ಲಿ ಮತ್ತೆ ಮಣ್ಣು ಕುಸಿತ: ಲಘು ವಾಹನ ಸಂಚಾರ ಅಬಾಧಿತ

    ಹೆಬ್ರಿ: ಕೆಲ ದಿನಗಳ ಹಿಂದೆ ಭೂಕುಸಿತ ಸಂಭವಿಸಿದ್ದ ಆಗುಂಬೆ ಘಾಟಿಯ ನಾಲ್ಕನೇ ತಿರುವಿನಲ್ಲಿ ಸೋಮವಾರವೂ ಮಣ್ಣು ಜಾರಿದ್ದು, ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಿಬ್ಬಂದಿ ಮಣ್ಣು ತೆರವುಗೊಳಿಸಿ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಆಗುಂಬೆ ಘಾಟಿ ಕರಾವಳಿ ಹಾಗೂ ಮಲೆನಾಡು ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳಲ್ಲಿ ಒಂದು. ಭೂ ಕುಸಿತ ಪರಿಣಾಮ ಕೆಲ ದಿನಗಳ ಹಿಂದೆ ರಸ್ತೆ ಬಿರುಕು ಕಾಣಿಸಿಕೊಂಡ ನಂತರ, ಮಣಿಪಾಲ ಹಾಗೂ ಮಂಗಳೂರು ಆಸ್ಪತ್ರೆಗಳಿಗೆ ಹೋಗುವವರಿಗೆ ಸಮಸ್ಯೆಯಾಗಿತ್ತು.

    ತಾತ್ಕಾಲಿಕವಾಗಿ ಜನರು ಆಗುಂಬೆಯಿಂದ ಸೋಮೇಶ್ವರ ತನಕ ಖಾಸಗಿ ಟೆಂಪೋ ಟ್ರಾವಲರ್‌ನಲ್ಲಿ (ಟಿಟಿ) ಬರುತ್ತಿದ್ದಾರೆ. ಸೋಮೇಶ್ವರದಿಂದ ಬಸ್ ಮೂಲಕ ಮಣಿಪಾಲ, ಉಡುಪಿ ಮತ್ತು ಮಂಗಳೂರಿಗೆ ಬರಲು ಅವಕಾಶವಿದೆ. ಮತ್ತೆ ಸೋಮೇಶ್ವರದಿಂದ ಟಿಟಿ ಮೂಲಕ ಆಗುಂಬೆ ಸಂಪರ್ಕಿಸಲು ವ್ಯವಸ್ಥೆ ಇದೆ. ಇದೀಗ ಖಾಸಗಿ ಟಿಟಿಗಳ ಸಂಖ್ಯೆ ಹೆಚ್ಚಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts